Breaking
Tue. Dec 24th, 2024

ಡೆಂಗ್ಯೂ ನಿಯಂತ್ರಣಕ್ಕೆ ಜನಪ್ರಿಯ ಶಾಸಕರಾದ ವೀರೇಂದ್ರ ಪಪ್ಪಿ ಸಂತೆಯ ಹೊಂಡದಲ್ಲಿ ಗಾಪ್ಪಿ ಹಾಗೂ ಗಾಂಬೂಸಿಯ ಮೀನು ಮರಿಗಳನ್ನು ಬಿಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ….!

ಚಿತ್ರದುರ್ಗ : ನಗರದಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ನಿಯಂತ್ರಣಕ್ಕೆ ಹಲವಾರು ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ರೋಗಕ್ಕೆ ಹೆಚ್ಚು ಜನರು ಭಯ ಭೀತಿಯಿಂದ ಕಂಗಾಲಾಗಿದ್ದಾರೆ. ನಗರದಲ್ಲಿ ಇಂದು ಜನಪ್ರಿಯ ಶಾಸಕರಾದ ವೀರೇಂದ್ರ ಪಪ್ಪಿ ಸಂತೆಯ ಹೊಂಡದಲ್ಲಿ ಗಾಪ್ಪಿ ಹಾಗೂ ಗಾಂಬೂಸಿಯ ಮೀನು ಮರಿಗಳನ್ನು ಬಿಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಚಿತ್ರದುರ್ಗ ನಗರದ ತುಂಬಾ ಹೆಚ್ಚು ಸೊಳ್ಳೆಗಳು ಕಾಣಿಸಿಕೊಳ್ಳುವುದರಿಂದ ಪ್ರತಿಯೊಬ್ಬರೂ ಸ್ವಚ್ಛತೆಯನ್ನು ಕಾಪಾಡಬೇಕು ಚರಂಡಿಗಳನ್ನು ಸ್ವಚ್ಛವಾಗಿ ಇರಿಸಿಕೊಳ್ಳಬೇಕು ಹಾಗೂ ಫಾಗಿಂಗ್  ಯಂತ್ರಗಳ ಮೂಲಕ ಸೊಳ್ಳೆಯನ್ನು ನಾಶಪಡಿಸಬೇಕು ಎಲ್ಲೇಡೆ ಪುಷ್ಕರಣಿಗಳಿವೆಯೋ ಅಲ್ಲೆಲ್ಲಾ ಮೀನು ಮರಿಗಳನ್ನು ಬಿಡುವಂತೆ ತಿಳಿಸಿದರು.

ನಗರದಲ್ಲಿ ಜನರು ಆರೋಗ್ಯವಾಗಿ ಇರಬೇಕು ಯಾವುದೇ ರೋಗಗಳಿಗೆ ತುತ್ತಾಗದೆ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಎಂಬಂತೆ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಿ ಡೆಂಗ್ಯೂ ಹರಡದಂತೆ ಕಾಳಜಿ ವಹಿಸಬೇಕೆಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ನಗರಸಭೆ ಪೌರಯುಕ್ತರಾದ ಶ್ರೀಮತಿ ಬಿ ರೇಣುಕಾ ಅವರು ಮಾತನಾಡಿ ಸ್ಥಳೀಯ ಜನರಿಗೆ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮತ್ತು ಡೆಂಗ್ಯೂ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದರು. ಗಾಪ್ಪಿ ಹಾಗೂ ಗಾಂಬೂಸಿಯ  ಮೀನುಗಳನ್ನು ಹೂಂಡದಲ್ಲಿ ಬಿಡುವುದರಿಂದ ಲಾರ್ವಗಳನ್ನು ತಿಂದು ಸೊಳ್ಳೆಗಳ ಸಂತತಿಯನ್ನು ಕಡಿಮೆ ಮಾಡುತ್ತವೆ ಎಂದರು.

ಪರಿಸರ ಇಂಜಿನಿಯರ್ ಜಾಫರ್ ನಗರ ಸಭೆ ಹೆಲ್ತ್ ಇನ್ಸ್ಪೆಕ್ಟರ್ಗಳಾದ ಸರಳ ಭಾರತಿ ನಾಗರಾಜ್ ನಾಮ ನಿರ್ದೇಶಕ ಸದಸ್ಯ ಎಚ್ ಶಬ್ಬೀರ್ ಭಾಷಾ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಡೆಂಗ್ಯೂ ನಿಯಂತ್ರಕ್ಕೆ ಅಗತ್ಯ ಕ್ರಮವನ್ನು ತಿಳಿಸಿದರು.

Related Post

Leave a Reply

Your email address will not be published. Required fields are marked *