ಬೆಂಗಳೂರು : ಚಿತ್ರದುರ್ಗ ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಅವರು ಜೈಲ್ ಸೇರಿದ್ದು ತಿಂಗಳು ಕಳೆದಿದೆ. ಹೀಗಾಗಿ ಜೈಲಿನಲ್ಲಿ ವಾಸವಾಗಿರುವ ದರ್ಶನ್ ತಿಂಗಳೊಳಗೆ 10 ಕೆಜಿ ತೂಕ ಕಡಿಮೆಯಾಗಿದ್ದಾರೆ ಇದು ದರ್ಶನವರನ್ನು ಮತ್ತಷ್ಟು ಚಿಂತೆಗೀಡಾಗಿದ್ದಾರೆ. ಈ ಕಾರಣದಿಂದ ದರ್ಶನವರು ಕೋರ್ಟಿಗೆ ರಿಟರ್ಜಿ ಸಲ್ಲಿಕೆ ಮಾಡಿದ್ದಾರೆ ಅವರಿಗೆ ಊಟ ಹಾಸಿಗೆ ಜೊತೆಗೆ ಇನ್ನಷ್ಟು ವಸ್ತುಗಳನ್ನು ಕೋರಿ ಕೋರ್ಟಿಗೆ ಮನವಿ ಸಲ್ಲಿಸಿದರು.
ದರ್ಶನ್ ಅವರು ಹಾಯಾಗಿ ಜೀವನ ನಡೆಸುತ್ತಿದ್ದರು ಕೊಲೆ ಪ್ರಕರಣದಲ್ಲಿ ಈಗ ಜೈಲು ಸೇರಿರುವ ಕಾರಣದಿಂದ ವಾರಕ್ಕೆ ಒಂದು ಪಾರ್ಟಿ ಮಾಡಿಕೊಂಡು ಮಾಂಸಹಾರ ತಿನ್ನುಕೊಂಡು ಸುಖಕರ ಜೀವನ ನಡೆಸುತ್ತಿದ್ದರು. ಆದರೆ ಈ ಕಾರಾಗೃಹದಲ್ಲಿ ಯಾವುದೇ ವ್ಯವಸ್ಥೆ ಇರುವುದಿಲ್ಲ. ಅವರಿಗೆ ಜೈಲಿನಲ್ಲಿ ಇರುವ ನಿಯಮಗಳು ಹಾಗೂ ಮೆನುಗಳ ರೀತಿಯಲ್ಲಿ ಊಟ ಸಿಗುತ್ತದೆ ಅವುಗಳನ್ನೇ ಮಾತ್ರ ಸೇವಿಸಬೇಕು.
ಈ ಊಟಗಳು ದರ್ಶನವರ ದೇಹಕ್ಕೆ ಹೊಂದಾಣಿಕೆ ಆಗುತ್ತಿಲ್ಲ ಆದ್ದರಿಂದ ಊಟ ಹಾಸಿಗೆ ಪುಸ್ತಕ ಬಟ್ಟೆ ಚಮಚವನ್ನು ಮನೆಯಿಂದ ತರಿಸಿಕೊಳ್ಳಲು ದರ್ಶನ್ ಅವರು ಕೋರ್ಟಿನ ಮುಂದೆ ಬೇಡಿಕೆ ಇಟ್ಟಿದ್ದಾರೆ. ಇವುಗಳನ್ನು ಮನೆಯಿಂದ ಪಡೆಯಲು ಜೈಲು ಅಧಿಕಾರಿಗಳು ಅನುಮೋದಿಸುವುದಿಲ್ಲ ಆದ್ದರಿಂದ ಜೈಲಿನಲ್ಲಿ ನೀಡುತ್ತಿರುವ ಊಟ ಅವರಿಗೆ ಜೀರ್ಣವಾಗುತ್ತಿಲ್ಲ. ಅವರಿಗೆ ಫುಡ್ ಪಾಯಿಸನ್ ಆಗುತ್ತಿದೆ ಇದರ ಜೊತೆಗೆ ಅತಿಸಾರ ಬೇದಿಯಿಂದ ದರ್ಶನವರ ತೂಕ ಕಡಿಮೆಯಾಗಿದೆ ಹಲವು ಕೆಜಿಗಳಷ್ಟು ತೂಕವನ್ನು ದರ್ಶನ್ ಕಳೆದುಕೊಂಡಿದ್ದಾರೆ. ಹೀಗಾಗಿ ಜೈಲಿನ ವೈದ್ಯರು ಅಭಿಪ್ರಾಯ ನೀಡಿದ್ದಾರೆ ಮನೆ ಊಟಕ್ಕೆ ಸಮ್ಮತಿ ಕೋರಿದ್ದಕ್ಕೆ ಕೋರ್ಟ್ ಆದೇಶವಿಲ್ಲವೆಂದು ಜೈಲ ಅಧಿಕಾರಿಗಳು ಮನೆ ಊಟಕ್ಕೆ ಅನುಮತಿ ನೀಡುವುದಿಲ್ಲ ಎಂದು ದರ್ಶನ್ ಪರ ವಕೀಲರು ತಿಳಿಸಿದ್ದಾರೆ.
ಜೈಲ್ ಅಧಿಕಾರಿಗಳ ನಿರ್ವಹಣೆ ಕಾನೂನು ಬಾಹೀರ ಅಮಾನವೀಯ ಹೀಗೆ ಮುಂದುವರೆದರೆ ದರ್ಶನ್ ಮತ್ತಷ್ಟು ತೂಕ ಕಳೆದುಕೊಳ್ಳಬಹುದು. ಎಂದು ಮನೆ ಊಟಕ್ಕೆ ಅನುಮತಿ ನೀಡಿದರೆ ಯಾರಿಗೂ ತೊಂದರೆ ಆಗುವುದಿಲ್ಲ ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆ ಕಡಿಮೆಯಾಗುತ್ತದೆ ಹೀಗಾಗಿ ಕುಟುಂಬದವರಿಂದ ಮನೆ ಊಟ ಪಡೆಯಲು ಅನುಮತಿ ನೀಡಬೇಕೆಂದು ದರ್ಶನ್ ಪರ ವಕೀಲರು ಕೋರ್ಟಿಗೆ ಮನವಿ ಸಲ್ಲಿಸಿದ್ದಾರೆ.