ಚಿತ್ರದುರ್ಗ : ರಾಜ್ಯ ಸರ್ಕಾರಿ ನೌಕರರ ಸಂಘದ 2024 ರಿಂದ 2029ನೇ ಅವಧಿಯ ಎಲ್ಲಾ ಹಂತದ ಚುನಾವಣಾ ಪ್ರತಿಕ್ರಿಯೆಗಳನ್ನು ಕೈಗೊಳ್ಳಲು ಸಂಘದ ಬೈಲ ನಿಯಮ 47 ರ ಪ್ರಕಾರ ಕರಡು ಮತದಾರರ ಪಟ್ಟಿಯನ್ನು ಎಲ್ಲಾ ಇಲಾಖೆಗಳಿಂದ ಪಡೆದು ಕರಡು ಮತದಾರರ ಪಟ್ಟಿಯನ್ನು ಜಿಲ್ಲಾ ಶಾಖೆ ಚಿತ್ರದುರ್ಗ ನೌಕರರ ಭವನದ ಸೂಚನಾ ಫಲಕದಲ್ಲಿ ಜುಲೈ 1 ರಂದು ಪ್ರಕಟಿಸಲಾಗಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ಕೈಗೊಂಡು ಸರ್ವಾನುಮತದಿಂದ ನಿರ್ಣಯವನ್ನು ತೆಗೆದುಕೊಳ್ಳುವಂತೆ ಸೂಚನೆ ಮಾಡಿದರು. ಮತದಾರರ ಪಟ್ಟಿಯಲ್ಲಿ ಏನಾದರೂ ಆಕ್ಷೇಪಗಳು ಇದ್ದಲ್ಲಿ ಜುಲೈ 10 ರೊಳಗೆ ಸಂಬಂಧಿಸಿದ ಸದಸ್ಯರು ಸಂಘಕ್ಕೆ ಖುದ್ದಾಗಿ ಬಂದು ಲಿಖಿತ ರೂಪದಲ್ಲಿ ಆಕ್ಷೇಪಣೆ ಸಲ್ಲಿಸಿ ಬಹುದೆಂದು ತಿಳಿಸಿದರು.
ಸಂಘದ ಬೈಲಾ ನಿಯಮನ್ವಯ ಅರ್ಹರಿಂದ ಸಂಘದ ಸದಸ್ಯರ ಹೆಸರುಗಳನ್ನೊಳಗೊಂಡು ಕರಡು ಮತದಾರರ ಪಟ್ಟಿಯಲ್ಲಿ ನಿಗದಿತ ದಿನಾಂಕದೊಳಗೆ ಸಿದ್ದಪಡಿಸಿ ಹೊರಡಿಸಲಾದ ಮತದಾರರ ಪಟ್ಟಿಯನ್ನು ರಾಜ್ಯ ಸಂಘಕ್ಕೆ ಸಲ್ಲಿಸಲು ಸೂಚಿಸಿದೆ ಮತ್ತು ಕರಡು ಮತದಾರರ ಪಟ್ಟಿ ಹೂರಡಿಸಿದ ನಂತರ ಸಂಘದ ಸದಸ್ಯರಿಗೆ ಮನವಿ ಅಕ್ಷೇಪಗಳಿಗೆ ಮುಕ್ತ ಅವಕಾಶ ನೀಡಲಾಗುವುದು ಹಾಗೂ ಈ ಮೂಲಕ ವ್ಯಾಪಕ ಪ್ರಚಾರ ನಡೆಸಲಾಗುವುದೆಂದು ತಿಳಿಸಿದರು.