ಬೆಂಗಳೂರು : ರಾಜ್ಯದಲ್ಲಿ ಅನೇಕ ಮೆಡಿಕಲ್ ಕಾಲೇಜುಗಳು ಸಮಸ್ಯೆಗಳ ನಡುವೆ ಸಾಗುತ್ತಿವೆ. ಹೀಗಾಗಿ ರಾಜ್ಯದ 27 ಮೆಡಿಕಲ್ ಕಾಲೇಜುಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಎರಡರಿಂದ ಹದಿನೈದು ಲಕ್ಷ ದಂಡ ವಿಧಿಸಿದೆ. ಇಲ್ಲಿಯವರೆಗೆ 11 ಖಾಸಗಿ ಮೆಡಿಕಲ್ ಕಾಲೇಜುಗಳು ಇದ್ದಾರೆ ಉಳಿದೆಲ್ಲವೂ ಸರ್ಕಾರಿ ಮೆಡಿಕಲ್ ಕಾಲೇಜುಗಳಾಗಿವೆ.
ಈ ಮೆಡಿಕಲ್ ಕಾಲೇಜುಗಳಲ್ಲಿ ಆಸ್ಪತ್ರೆಗಳಲ್ಲಿ ಯಾವುದೇ ಕೊರತೆ ಆಗಬಾರದು ಎಂದು ಮೂಲಭೂತ ಸೌಕರ್ಯಗಳ ವ್ಯವಸ್ಥೆಯಲ್ಲಿ ತೊಂದರೆ ಆಗಬಾರದು ಮತ್ತು ರೋಗಿಗಳ ಮೇಲೆ ಇದು ತುಂಬಾ ಪರಿಣಾಮ ಬೀರುತ್ತದೆ.
ರಾಜ್ಯಗಳಲ್ಲಿ ಜಿಲ್ಲಾವಾರು ಮೆಡಿಕಲ್ ಕಾಲೇಜುಗಳಿಗೆ ಯಾವ ಕಾಲೇಜಿಗೆ ಎಷ್ಟು ದಂಡವನ್ನು ವಿಧಿಸಲಾಗಿದೆ ಎಂದು ಈ ಕೆಳಗಿನ ವಿವರದಲ್ಲಿ ತಿಳಿಯಬಹುದು.
- ಚಿತ್ರದುರ್ಗದ ಸರ್ಕಾರಿ ಮೆಡಿಕಲ್ ಕಾಲೇಜಿಗೆ 15 ಲಕ್ಷ ದಂಡ
- ಚಿತ್ರದುರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಗೂ 15 ಲಕ್ಷ ದಂಡ
- ಕಲಬುರ್ಗಿಯ ಜೇಮ್ಸ್ ಆಸ್ಪತ್ರೆಗೂ 15 ಲಕ್ಷ ದಂಡ
- ಯಾದಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೂ 15 ಲಕ್ಷ ದಂಡ
- ಚಾಮರಾಜನಗರದ ವೇಮ್ಸ್ ಗೋ 3 ಲಕ್ಷ ದಂಡ
- ಚಿಕ್ಕಮಂಗಳೂರು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ 15 ಲಕ್ಷ ರೂಪಾಯಿ ದಂಡ
- ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ 15 ಲಕ್ಷ ರೂಪಾಯಿ ದಂಡ
- ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಗೂ ಮೂರು ಲಕ್ಷ ರೂಪಾಯಿ ದಂಡ
- ಶಿವಮೊಗ್ಗ ವೈದ್ಯಕೀಯ ಕಾಲೇಜು ಸಂಶೋಧನಾ ಸಂಸ್ಥೆಗೂ ಮೂರು ಲಕ್ಷ ರೂಪಾಯಿ ದಂಡ
- ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗೂ ಮೂರು ಲಕ್ಷ ರೂಪಾಯಿ ದಂಡ
- ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗೂ ಮೂರು ಲಕ್ಷ ರೂಪಾಯಿ ದಂಡ
- ಹುಬ್ಬಳ್ಳಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೂ 2 ಲಕ್ಷ ರೂಪಾಯಿ ದಂಡ
ಕರ್ನಾಟಕ ವೈದ್ಯಕೀಯ ಶಿಕ್ಷಣ ಸಚಿವ ಡಾಕ್ಟರ್ ಶರಣ ಪ್ರಕಾಶ್ ಪಾಟೀಲ್ ಈ ಬಗ್ಗೆ ಪ್ರತಿಕ್ರಿಯೆ ಸಿದ್ದು, ಸರ್ಕಾರಿ ಮೆಡಿಕಲ್ ಕಾಲೇಜು ಸೇರಿ ಮಾನದಂಡ ಪಾಲನೆ ಮಾಡದೆ ಇರುವುದು ಇದರಿಂದ ದಂಡವನ್ನು ವಿಧಿಸಲಾಗಿದೆ .ಎಲ್ಲೆಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಹೇಳಿದರು. ಇನ್ನು ರಾಮನಗರದಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪನೆ ದೊಡ್ಡ ರಾಜಕೀಯ ಜಟಪಟಿಯೇ ನಡೆದಿತ್ತು.
ಹಾಗೆಯೇ ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜು ಸದ್ಯದಲ್ಲೇ ದೊರೆತಿದ್ದು ರಾಮನಗರ ಹಕ್ಕು ಮೆಡಿಕಲ್ ಕಾಲೇಜು ತರುವುದಾಗಿ ಡಿಕೆಶಿ ಶಪಥ ಮಾಡಿದ್ದಾರೆ. ಆದರೆ ರಾಮನಗರ, ಕನಕಪುರದಲ್ಲಿ ಮೆಡಿಕಲ್ ಕಾಲೇಜುಗಳ ಪ್ರಸ್ತಾವನೆ ಎನ್.ಎಂ. ಸಿ ಒಪ್ಪಿಗೆ ನೀಡಿಲ್ಲ ಇದರಿಂದ ತಾಂತ್ರಿಕ ಸಮಸ್ಯೆ ಕಾರಣವಾಗಿದೆ ಎಂದು ನೀಡಿ ಇದುವರೆಗೆ ರಾಜ್ಯದಲ್ಲಿ ಸರ್ಕಾರಿ ಮತ್ತು ಖಾಸಗಿ ಮೆಡಿಕಲ್ ಕಾಲೇಜುಗಳ ಮೂಲಸೌಕರ್ಯ ಕೊರತೆ ಇದೆ ಹಾಗಾಗಿ 27 ಕಾಲೇಜುಗಳಿಗೆ ಎಂ ಎನ್ ಸಿ ದಂಡ ವಿವರಿಸಲಾಗಿದೆ ಎಂದು ತಿಳಿಸಿದರು.