ಚಿತ್ರದುರ್ಗ : ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಆಹ್ವಾನಿಸುವಂತೆ ಕರ್ನಾಟಕ ರಾಜ್ಯ ಕನ್ನಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಪ್ರತಿಷ್ಠಾನದ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯವರಿಗೆ ಪ್ರತಿಭಟನೆ ನಡೆಸಿ ಜಿಲ್ಲಾ ಆಡಳಿತ ಹಾಗೂ ಅಧಿಕಾರಿಗಳ ಮೂಲಕ ಕಾರ್ಮಿಕ ಕಲ್ಯಾಣ ಮಂಡಳಿ ಕಾರ್ಯದರ್ಶಿ ಮನವಿ ಸಲ್ಲಿಸಿದರು.
ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕಾನೂನು ಬದ್ಧವಾಗಿ ಸಿಗಬೇಕಿರುವ ಸೌಲಭ್ಯಗಳನ್ನು ನಿಲ್ಲಿಸಲಾಗಿದೆ ಈ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳ ಜೊತೆ ಹಲವಾರು ಸುತ್ತಿನ ಮಾತುಕತೆಗಳು ನಡೆದಿದ್ದು ಇದುವರೆಗೂ 12 ಹೋರಾಟಗಳನ್ನು ನಡೆಸಲಾಗಿದ್ದರೂ ಸಹ ಸಾರ್ವಜನಿಕ ಶಿಕ್ಷಣದ ಸಹಾಯಧನ, ಮದುವೆ ಸಹಾಯಧನ, ವೈದ್ಯಕೀಯ ಪರಿಹಾರ ಮುಂತಾದ ಸೌಲಭ್ಯಗಳನ್ನು ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸಿ ಇಲಾಖೆಯಲ್ಲಿ ಯಾವುದೇ ತರಹದ ಪ್ರತಿಕ್ರಿಯೆ ನೀಡದೆ ಹಾಳಾದ ಸ್ಥಿತಿ ನಿಂತಿದೆ.
ಪಿಂಚಣಿ ಕೂಡ ನಿಲ್ಲಿಸದ ಕಾರ್ಮಿಕ ಕುಟುಂಬಗಳಿಗೆ ಸಂಕಷ್ಟ ಪರಿಸ್ಥಿತಿ ಎದುರಾಗಿದೆ. ಇದನ್ನು ಕೂಡಲೇ ಸರಿಪಡಿಸಿ ಕಾರ್ಮಿಕ ಕಲ್ಯಾಣ ಇಲಾಖೆಯಿಂದ ಬರಬೇಕಾದ ಸೌಲಭ್ಯಗಳನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆದೇಶಿಸಿದರು. ಕಾರ್ಮಿಕರು ಕೇಳದಿದ್ದರೂ, ಅವರಿಗೆ ಖರೀದಿಸುವ ಲ್ಯಾಪ್ಟಾಪ್, ವೈದ್ಯಕೀಯ ತಪಾಸಣೆ, ಪೌಷ್ಟಿಕಾಂಶವುಳ್ಳ ಆಹಾರದ ಕಿಟ್ಟುಗಳಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿ ಕೋಟ್ಯಾಂತರ ರೂಪಾಯಿಗಳ ವ್ಯಾಪಾರ ಮಾಡಿದೆ ಎಂದು ಪ್ರತಿಭಟನಾಕಾರರು ಕಾರ್ಮಿಕ ಇಲಾಖೆ ವಿರುದ್ಧ ದಿಕ್ಕಾರ ಕೂಗಿದರು.
ಶೈಕ್ಷಣಿಕ ಧನ ಸಹಾಯ ಅರ್ಜಿ ಸಲ್ಲಿಕೆ ಅವಧಿ 2024 ಆಗಸ್ಟ್ 31 ರವರೆಗೆ ವಿಸ್ತರಿಸಬೇಕು ನೋಂದಣಿ ಮತ್ತು ಮರು ನೋಂದಣಿಗಾಗಿ ಸಲ್ಲಿಸಿರುವ ಅರ್ಜಿಗಳಲ್ಲಿ ಸಣ್ಣಪುಟ್ಟ ದೋಷಗಳನ್ನು ಹುಡುಕಿ ತಿರಸ್ಕರಿಸಲಾಗಿದೆ.
ನೈಜ್ಯ ಕಾರ್ಮಿಕರ ಅರ್ಜಿಗಳಲ್ಲಿ ತಪ್ಪುಗಳಿದ್ದರೂ ಅರ್ಜಿಗಳನ್ನು ಪುರಸ್ಕರಿಸಿ ಕಾಲಮಿತಿಗೊಳಿಸಿದ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಕೆಲಗಡೆ ಬಿಲ್ಡಿಂಗ್ ಲೈಸೆನ್ಸ್ ಸಲ್ಲಿಸಿದ ಅರ್ಜಿಗಳು ಪುರಸ್ಕೃತ ಮಾಡಿರುವುದು ಕಾರ್ಮಿಕರಿಗೆ ಅನ್ಯಾಯವಾಗಿದೆ. ಪಿಂಚಣಿಗಾಗಿ ಸಲ್ಲಿಸಬೇಕಾದ ಸಾವಿರಾರು ಅರ್ಜಿಗಳು ವಿಲೇವಾರಿ ಆಗಬೇಕು ಪಿಂಚಣಿಗಾಗಿ ಅರ್ಜಿಗಳು ಸಹ ವಿಲೇವಾರಿಯಾಗಬೇಕು ವರ್ಷದ 12 ತಿಂಗಳ ಸರಿಯಾಗಿ ಪಿಂಚಣಿ ಈ ಹಲವಾರು ದೂರುಗಳನ್ನು ನಿಗದಿಪಡಿಸಲಾಗಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ ಜಿಲ್ಲಾ ಸಹ ಸಂಚಾಲಕ ಎಸ್‌ಐ ಕೆ ಗೌಸ್ಪೀರ್ ಒತ್ತಾಯಿಸಿದರು.
ಬಿ.ಸಿ ನಾಗರಾಜ ಚಾರಿ, ಮಂಜುನಾಥ್, ಅಬ್ದುಲ್ಲ ಶ್ರೀಮತಿ ಸಣ್ಣಮ್ಮ, ರಾಘವೇಂದ್ರ, ರಶೀದ್, ಇಸ್ಮಾಯಿಲ್, ಭಾಷಾ, ದ್ರಾಕ್ಷಣಮ್ಮ, ಸೈಯದ್, ಮಲ್ಲಿಕಾರ್ಜುನ್, ಚಂದ್ರಮ್ಮ, ಉಮೇಶ್, ಕೆ.ಸಿ.ನಾಗರಾಜ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.