ಜೈಪುರ್ : ಇಡೀ ದೇಶವೇ ಬೆಚ್ಚಿ ಬೀಳಿಸುವ ಆಘಾತಕಾರಿ ವಿಷಯವೊಂದು ರಾಜ್ಯದಲ್ಲಿ ಬಾರಿ ಸುದ್ದಿ ಮಾಡುತ್ತಿದೆ ರಾಜ್ಯದಲ್ಲಿ ಒಟ್ಟು 800ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಎಚ್ಐವಿ ಸೋಂಕು ಪತ್ತೆಯಾಗಿದ್ದು ಈ ಪೈಕಿ 47 ವಿದ್ಯಾರ್ಥಿಗಳು ಏಡ್ಸ್ ರೋಗಕ್ಕೆ ತುತ್ತಾಗಿ ಸಾವನಪ್ಪಿದ್ದಾರೆ.
ರಾಜ್ಯದಲ್ಲಿ ಇವರಿಗೆ ಒಟ್ಟು 828 ವಿದ್ಯಾರ್ಥಿಗಳು ಎಚ್ಐವಿ ಸೋಂಕಿಗೆ ತುತ್ತಾಗಿದ್ದು ಈ ಪೈಕಿ 572 ವಿದ್ಯಾರ್ಥಿಗಳು ಇನ್ನೂ ಬದುಕಿದ್ದು 47 ವಿದ್ಯಾರ್ಥಿಗಳು ಏಡ್ಸ್ ವೈರಸ್ ಗೆ ಸಾವನಪ್ಪಿದ್ದಾರೆ. ಎಂದು ರಾಜ್ಯದ ತ್ರಿಪುರದಲ್ಲಿ ಏಡ್ಸ್ ನಿಯಂತ್ರಣ ಸೊಸೈಟಿಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಷ್ಟೇ ಅಲ್ಲದೆ ಬಹುತೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಹಲವು ಪ್ರಾಂತ್ಯಗಳಲ್ಲಿ ಇರುವ ಶಿಕ್ಷಣ ಸಮಸ್ಯೆಗಳಿಗೆ ತೆರಳಿದರು ಎಂದು ತಿಳಿಸಿದ್ದಾರೆ. ತ್ರಿಪುರ ರಾಜ್ಯದಲ್ಲಿ 220 ಶಾಲೆಗಳು ಮತ್ತು 24 ಕಾಲೇಜು ವಿವಿಗಳಲ್ಲಿ ವಿದ್ಯಾರ್ಥಿಗಳು ಇಂಜೆಕ್ಷನ್ ಮೂಲಕ ಮಾದಕ ವಸ್ತುಗಳನ್ನು ತೆಗೆದುಕೊಳ್ಳುವ ವಿಚಾರ ಬೆಳಕಿಗೆ ಬಂದಿದೆ.
ತ್ರಿಪುರ ಏಡ್ಸ್ ನಿಯಂತ್ರಣ ಸೊಸೈಟಿ ಹೆಚ್ಐವಿ ಸೋಂಕು ಹರಡಲು ಇದು ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದ್ದಾರೆ. ರಾಜ್ಯದ್ಯಂತ ಸುಮಾರು 164 ಆರೋಗ್ಯ ಸಂಸ್ಥೆಗಳಿಂದ ಅಧಿಕಾರಿಗಳಿಗೆ ಮಾಹಿತಿ ಸಂಗ್ರಹಿಸಿದ್ದು ಸಮಗ್ರ ತನಿಖೆ ಬಳಿಕ ಹೆಚ್ಚಿನ ಮಾಹಿತಿ ಹೊರಬೀಳಲಿದೆ ಎಂದು ತಿಳಿಸಿದ್ದಾರೆ.
ಎಚ್ಐವಿ ಸೋಂಕಿಗೆ ತಪ್ಪಾಗಿರುವ ವಿದ್ಯಾರ್ಥಿಗಳ ಪೈಕಿ ಬಹುತೇಕರು ಶ್ರೀಮಂತ ಮನೆತನದ ಮಕ್ಕಳಾಗಿದ್ದು ಈ ವಿದ್ಯಾರ್ಥಿಗಳು ಪೋಷಕರು ತುಂಬಾ ಸಿರಿವಂತರಾಗಿದ್ದಾರೆ. ಎಂದು ತಿಳಿದುಬಂದಿದೆ ಅದರಲ್ಲೂ ಶ್ರೀಮಂತ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಡ್ರಗ್ಸ್ ಗೆ ಅಡಿಟ್ ಆಗುತ್ತಿದ್ದಾರೆ. ಎಂಬ ಮಾಹಿತಿ ಕೂಡ ಲಭ್ಯವಾಗಿದೆ ಇದರಿಂದ ಖಾಯಿಲೆಗಳು ಹೆಚ್ಚಾಗಿ ಅವರು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಪೋಷಕರು ಹೆಚ್ಚಿನ ಕಾಳಜಿವಹಿಸಿ ಮಕ್ಕಳ ಕಡೆ ಗಮನ ಕೊಡಬೇಕೆಂದು ಆರೋಗ್ಯ ಇಲಾಖೆ ತಿಳಿಸಿದರು.