Breaking
Wed. Dec 25th, 2024

ಮೇದಾರ ಕೇತೇಶ್ವರ ಮಠದಲ್ಲಿ ಎಂಟು, ಒಂಬತ್ತು, ಹತ್ತನೇ ತರಗತಿಯ 150 ಬಡ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ

ಚಿತ್ರದುರ್ಗ : ರಾಜ್ಯದಲ್ಲಿ ಮಕ್ಕಳಿಗೆ ಮೂಲಭೂತ ಶಿಕ್ಷಣವನ್ನು ಒದಗಿಸಲು ಸಾಧ್ಯವಾಗದಂತಹ ಬಡ ಕುಟುಂಬಗಳು ಇವೆ. ಶಿಕ್ಷಣದಿಂದ ವಂಚಿತರಾಗಿರುವ ಬಡ ಮಕ್ಕಳಿಗೆ ಅವಶ್ಯಕತೆ ಇರುವ ಮೂಲಭೂತ ಸೌಲಭ್ಯಗಳು ವಸ್ತುಗಳನ್ನು ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹಾಗೂ ವಿಧಾನಪರಿಷತ್ ಸದಸ್ಯ ಶ್ರೀನಿವಾಸ್ ಇವರಗಳ ಸೇವೆ ಶ್ಲಾಘನೀಯ ಎಂದು ಬಸವ ಮೇದಾರ ಶ್ರೀ ಕೇತೇಶ್ವರ ಸ್ವಾಮೀಜಿ ಸಂತಸ ವ್ಯಕ್ತಪಡಿಸಿದರು.

ಪೂರ್ಣಿಮಾ ಶ್ರೀನಿವಾಸ್ ರವರು ಶಾಸಕರಾಗಿದ್ದರು ನಮ್ಮ ಮಠದ ಬಡ ಮಕ್ಕಳಿಗೆ ಶಿಕ್ಷಣಕ್ಕೆ ಏನು ಕೇಳಿದರು ಇಲ್ಲವೆನ್ನಲಿಲ್ಲ  ಮಠದ ಜೊತೆಗೆ ಮೊದಲಿನಿಂದಲೂ ಅವಿನಾಭಾವ ಒಡನಾಟವಿದೆ. ಈ ವಾರದ ಸಮೀಪವಿರುವ ಮೇದಾರ ಕೇತೇಶ್ವರ ಮಠದಲ್ಲಿ ಎಂಟು, ಒಂಬತ್ತು, ಹತ್ತನೇ ತರಗತಿಯ 150 ಬಡ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ ದಿವ್ಯಾಸಾನಿಧ್ಯ  ಸ್ವಾಮೀಜಿ  ಮೂಲಕ ವಿತರಿಸಿದರು.

ಹಳ್ಳಿ ಗಾಡಿ ನಿಂದ ಬರುವ ಬಡ ಕುಟುಂಬ ಮಕ್ಕಳು ಬಟ್ಟೆ ಕೊಂಡುಕೊಳ್ಳಲು ಆಗದಂತಹ ಇಂತಹ ಮಕ್ಕಳಿಗೆ ಪೂರ್ಣಿಮಾ ಶ್ರೀನಿವಾಸ್ ದಂಪತಿ ಸಮವಸ್ತ್ರಗಳನ್ನು ಉದಾರ ಮನಸ್ಸಿನಿಂದ ಕೊಡಿಸಿದ್ದಾರೆ ಇದೇ ರೀತಿ ಅನೇಕ ಪರೋಪಕಾರದ ಸೇವೆ ಮಾಡುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಸ್ವಾಮೀಜಿ ಹಾರೈಸಿದರು.

ಲೇಖಕ ಎಚ್ ಆನಂದಕುಮಾರ್ ಮಾತನಾಡಿ ವೇದಾರ ಎನ್ನುವ ಬುಡಕಟ್ಟು ಸಮುದಾಯ ಅತ್ಯಂತ ಕಡೆ ಬಡತನದಲ್ಲಿದ್ದು ಶಿಕ್ಷಣದ ಮೂಲಕ ಬದುಕನ್ನು ಹಸನಾಗಿ ಮಾಡಿಕೊಳ್ಳಬೇಕು. ಮಠದ ಸುತ್ತಲೂ ಒಳ್ಳೆಯ ಪ್ರಶಾಂತ ವಾತಾವರಣವಿದ್ದು ಮಕ್ಕಳು ಇದರ ಸ್ವರೂಪ ಯೋಗ ಪಡೆಸಿಕೊಂಡು ಶಿಕ್ಷಣವಂತರಾಗುವ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ತಿಳಿಸಿದರು.

ವಿದ್ಯಾರ್ಥಿ ಜೀವನ ಎನ್ನುವುದು ವೈಯಾರ,ಪುಂಡಾಟಕ್ಕೆ ಮಾಡುವುದಿಲ್ಲ. ಶ್ರದ್ಧೆ  ವಹಿಸಿ ಕಠಿಣ ಶ್ರಮದಿಂದ ಕಲಿತಾಗ ಜೀವನದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಲು ಸಾಧ್ಯ. ಬುದ್ಧ ಬಸವ ಅಂಬೇಡ್ಕರ್ ಆಶಯದಂತೆ ನೀವು ವಿದ್ಯಾವಂತ ರಾಗಬೇಕು ಎಂದರು.

ಕಣಿವೆ ಮಾರಮ್ಮ ಸಂಘದ ಅಧ್ಯಕ್ಷ  ತಿಪ್ಪೇಸ್ವಾಮಿ ಬೆಳಗಟ್ಟ, ಪೋಲಿಸ್ ವೃತ್ತ ನಿರೀಕ್ಷಕ ತಿಪ್ಪೇಸ್ವಾಮಿ, ನಗರ ಸಭೆ ಮಾಜಿ ಅಧ್ಯಕ್ಷ ಎಚ್ ಮಂಜಪ್ಪ, ವೇಮನ ರೆಡ್ಡಿ ಇನ್ನು ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Related Post

Leave a Reply

Your email address will not be published. Required fields are marked *