ಹೆಣ್ಮಕ್ಕಳು ಬೇಡ ಅಂತ ಹುಟ್ಟಿದ ಅವಳಿ ಹೆಣ್ಣು ಮಕ್ಕಳನ್ನು ಕೊಂದು ಹೂತು ಹಾಕಿದ್ದ ಪಾಪಿ ತಂದೆಯನ್ನು ಬಂಧಿಸಿದ್ದಾರೆ.
ಜೂನ್ 6 ಆಗತಾನೇ ಹುಟ್ಟಿದ ಅವಳಿ ಹೆಣ್ಣು ಮಕ್ಕಳನ್ನು ಕೊಂದು ತಂದೆ ನೀರಜ್ ಸೋಲಂಕಿ ಪರಾರಿಯಾಗಿದ್ದ. ಆತನನ್ನು ವಿಚಾರಣೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೂಜಾ ಸೋಲಂಕಿ ಪತಿ ನೀರಜ್ ಸೋಲಂಕಿ ಜೊತೆ ದೆಹಲಿಯ ಸುಲ್ತಾನ್ ಪುರಿಯಲ್ಲಿ ವಾಸಿಸುತ್ತಿದ್ದಾರೆ. ಹರಿಯಾಣದ ರೋಹ್ನಕ್ ಆಸ್ಪತ್ರೆಯಲ್ಲಿ ಮೇ 30 ರಂದು ಅವಳಿ ಹೆಣ್ಣು ಮಕ್ಕಳಿಗೆ ಪೂಜಾ ಜನ್ಮ ನೀಡಿದ್ದರು.
ಪತಿ ವಿರುದ್ಧ ಪತ್ನಿ ನೀಡಿದ ಆರೋಪಿ ಪ್ರಕರಣ ದಾಖಲಾಗಿದೆ. ನೀರಜ್ ಸೋಲಂಕಿ ಪದೇ ಪದೇ ದೆಹಲಿ ಮತ್ತು ಹರಿಯಾಣ ನಡುವೆ ಸ್ಥಳ ಬದಲಾಯಿಸುತ್ತಿದ್ದರಿಂದ ಪೊಲೀಸರಿಗೆ ಟ್ಯಾಕ್ ಮಾಡುವುದು ಕಷ್ಟವಾಗಿತ್ತು.
ಅಂತಿಮವಾಗಿ ಹರಿಯಾಣದಲ್ಲಿ ಬಂಧನಕ್ಕೊಳಗಾಗಿದ್ದಾನೆ. 3 ದಿನದ ಹಿಂದೆಯೇ ಜನಿಸಿದ ಅವಳಿ ಹೆಣ್ಣು ನೀರಜ್ ಕೊಲೆ ಮಾಡಿದ್ದಾನೆ ಎಂದು ದೂರವಾಣಿಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ತನಿಖೆ ವೇಳೆ ನೀರಜ್ ಸಮಾಧಿಯಲ್ಲಿ ಅಗ್ನಿ ಸ್ಪರ್ಶ ನೀಡಿ ಅವಳಿ ಮಕ್ಕಳನ್ನು ಕಂಡಿರುವುದು ದಾಖಲೆಗಳಿಂದ ದೃಢಪಟ್ಟಿತ್ತು.