ನವ ದೆಹಲಿ : ರಾಜ್ಯ ಸರ್ಕಾರದಲ್ಲಿ ಈಗಾಗಲೇ ಸಾಮಾನ್ಯ ಜನರಿಗೆ 5 ಗ್ಯಾರಂಟಿ ಯೋಜನೆಯನ್ನು ಘೋಷಿಸಿದ್ದು ಒಂದು ವರ್ಷ ಪೂರ್ತಿಯಾಗಿದೆ ಈ ಯೋಜನೆಯಿಂದ ಹಲವಾರು ಕುಟುಂಬಗಳು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಈ ಪಂಚ ಗ್ಯಾರಂಟಿ ಯೋಜನೆಗಳಿಗೆ ಎಸ್.ಸಿ – ಎಸ್.ಟಿ ನಿಧಿಯ ಹಣವನ್ನು ರಾಜ್ಯ ಸರ್ಕಾರವು ದುರ್ಬಳಕೆ ಮಾಡಿಕೊಂಡಿದೆ ಎಂದು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗವು ಕರ್ನಾಟಕ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿಧಿಯಲ್ಲಿದ್ದ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿದೆ ಎಂಬ ಆರೋಪವು ಗಂಭೀರವಾಗಿ ಪರಿಗಣಿಸಿ ಮಾಧ್ಯಮ ವರದಿಯ ನಂತರ ಸ್ವಯಂ ಪ್ರೇರಿತರಾಗಿ ಈ ಯೋಜನೆಯಲ್ಲಿದ್ದ ಹಣವನ್ನು ರಾಜ್ಯ ಸರ್ಕಾರವು ದುರ್ಬಳಕೆ ಮಾಡಿದೆ ಇದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.
ಕರ್ನಾಟಕದ ಮುಖ್ಯ ಕಾರ್ಯದರ್ಶಿ ಅಧಿಕೃತ ಪತ್ರದ ಮೂಲಕ ಸಮೂಹನದಲ್ಲಿ 5 ಗ್ಯಾರಂಟಿ ಯೋಜನೆಗಳು ಎಂದು ಕರೆಯಲ್ಪಡುವ ವಿವಿಧ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲು ಮೂಲತಃ ಎಸ್ಸಿ ಎಸ್ಟಿ ಅಡಿಯಲ್ಲಿ ನಿಗದಿಪಡಿಸಿದ್ದ 14730 ಕೋಟಿ ರೂಪಾಯಿಗಳನ್ನು ಮರು ಹಂಚಿಕೆ ಮಾಡಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ಎಸ್ಸಿ – ಎಸ್ಟಿ ಸಮುದಾಯಗಳು ಸಾಮಾಜಿಕ ಮತ್ತು ಆರ್ಥಿಕ ಕಲ್ಯಾಣವನ್ನು ಉತ್ತೇಜಿಸುವಲ್ಲಿ ಈ ನಿಧಿಗಳ ಮಹತ್ವವನ್ನು ಆಯೋಗವು ವರ್ತಿ ಹೇಳುತ್ತದೆ.
ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಪತ್ರದಲ್ಲಿ ಎಸ್ಸಿ ಎಸ್ಟಿ ನಿಧಿಯ ಹಣವನ್ನು ಏಳು ದಿನದಲ್ಲಿ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಮುಖ್ಯ ಕಾರ್ಯದರ್ಶಿ ಸಮಗ್ರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವಂತೆ ಮಹತ್ವದ ಆದೇಶವನ್ನು ಜಾರಿಗೊಳಿಸಿದೆ.