ಬೆಂಗಳೂರು : ಬೃಹತ್ ಮತ್ತು ಮಾಧ್ಯಮ ಕೈಗಾರಿಕಾ ಹಾಗೂ ಮೂಲಭೂತ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ್ ಅವರ ನೇತೃತ್ವದಲ್ಲಿ ಕರ್ನಾಟಕದ ಉನ್ನತ ಮಟ್ಟದ ನಿಯೋಗವು ಜಪಾನ್ ಮತ್ತು ದಕ್ಷಿಣ ಕೊರಿಯಾ 2 ವಾರಗಳ ಭೇಟಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ 6450 ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆ ಮಾಡಿದ್ದು ಈ ಒಪ್ಪಂದದ ಫಲವಾಗಿ ರಾಜ್ಯದಲ್ಲಿ ಸಾವಿರ ಉದ್ಯೋಗಾವಕಾಶ ಸೃಷ್ಟಿಯ ನಿರೀಕ್ಷೆಯಿದೆ.
ಉಭಯ ದೇಶಗಳ ಭೇಟಿಯ ಫಲಶ್ರುತಿ ಬಗ್ಗೆ ವಿಧಾನಸೌಧದಲ್ಲಿ ನಡೆಸಿದ ಸುದ್ದಿಗೋಷ್ಠಿ ವಿವರವನ್ನು ಹಂಚಿಕೊಂಡರು ಜೂನ್ 24 ರಿಂದ ಜುಲೈ 5 ರಂದು ಉಭಯ ದೇಶಗಳ ಎರಡು ವಾರಗಳ ಬೇಟಿಯ ಸಮಯದಲ್ಲಿ ಕರ್ನಾಟಕದ ಪ್ರಮುಖ ಬಹು ರಾಷ್ಟ್ರೀಯ ಕಂಪನಿಗಳ ಮುಖ್ಯಸ್ಥರನ್ನು ಭೇಟಿ ಮಾಡಿ ಮಾಧ್ಯಮ ಸಂಸ್ಥೆಗಳಿಗೆ ಬಂಡವಾಳ ಹೂಡಿಕೆ ರೋಡ್ ಶೋ ನಡೆಸಿತು.
ತಯಾರಿಕಾ ವಲಯಕ್ಕೆ ರಾಜ್ಯದಲ್ಲೇ ಇರುವ ಉತ್ತೇಜಕರ ಪೂರಕ ಸೌಲಭ್ಯಗಳ ಮಾಹಿತಿ ವಿನಿಮಯ ಮಾಡಿಕೊಂಡಿತು. 35 ಉದ್ಯಮಿಗಳ ಪ್ರಮುಖರನ್ನು ಭೇಟಿ ಮಾಡಿ ನಿಯೋಗವು ಮುಂದಿನ ವರ್ಷ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆ ಸಮಾವೇಶದಲ್ಲಿ ಇನ್ವೆಸ್ಟ್ ಕರ್ನಾಟಕ 2025 ರಲ್ಲಿ ಭಾಗವಹಿಸಲು ಟೋಕಿಯಾ ಮತ್ತು ಸಿಯೋಲ್‌ನಲ್ಲಿ ರೋಡ್ ಶೋಗಳಲ್ಲಿ 200ಕ್ಕೂ ಹೆಚ್ಚು ಕಂಪನಿಗಳಿಗೆ ಆಹ್ವಾನ ನೀಡಲಾಯಿತು.
ಜಪಾನ್‌ನಲ್ಲಿ ನಡೆದ ರಾನೆಸಸ್, ಕಂಪನಿಗಳ ಸಭೆಗಳು ಕಾರ್ಪೊರೇಷನ್ ಟೊಯೋಟಾ ಇಂಜಿನ್ ಕಾರ್ಪೊರೇಷನ್, ಯಮಹಾ ಕಂಪನಿ, ಸುಮಿಟೋಮೊ ಹೆವಿ ಇಂಡಸ್ಟ್ರಿಯಲ್ಲಿ ಪ್ಯಾನಸೋನಿಕ್ ಎನರ್ಜಿ, ನಿಡೆಕ್ ಕಾರ್ಪೊರೇಷನ್ ನೀಸನ್ ಎಂಜಿನ್ ಕಾರ್ಪೊರೇಷನ್ ಬ್ರದರ್ ಇಂಡಸ್ಟ್ರಿಯಲ್ ಹಿಟಾಚಿ ಮುಂತಾದ ಪ್ರಮುಖರು ಭಾಗವಹಿಸಿದ್ದರು.
ಕೈಗಾರಿಕಾ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಆಯುಕ್ತ ಗುಜಾನ್ ಕೃಷ್ಣ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾಕ್ಟರ್ ಏನ್ ಮಂಜುಳಾ ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಮೂಲಸೌಕರ್ಯ ಇಲಾಖೆ ಉಪ ಕಾರ್ಯದರ್ಶಿ ಹೆಬ್ಸಿಬಾ ರಾಣಿ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.