ಚಿತ್ರದುರ್ಗ : ಮುರುಘರಾಜೇಂದ್ರ ಮಠಕ್ಕೆ ಭಕ್ತರು ಬಳುವಳಿಯಾಗಿ ನೀಡಿದ್ದ ಮಾರುಘಾಶ್ರೀ ಅವರ ಬೆಳ್ಳಿ ಪ್ರತಿಮೆಯನ್ನು ಕದ್ದೊಯ್ತಿರುವ ಘಟನೆ ಚಿತ್ರದುರ್ಗ ಮುರುಘಾ ಮಠದಲ್ಲಿ ನಡೆದಿದೆ.
ಸುಮಾರು 20 ಲಕ್ಷ ಮೌಲ್ಯದ ಬೆಳ್ಳಿ ಪ್ರತಿಮೆಯು 2021 ರಲ್ಲಿ ಮುರುಘಾ ಶ್ರೀಗೆ ಅವರ ಭಕ್ತರು ಉಡುಗೊರೆಯಾಗಿ ನೀಡಿದ್ದರು. ಪೋಕ್ಸೋ ಕೆ ಸಿ ನಲ್ಲಿ ಮುರುಘಾಶ್ರೀ ನ್ಯಾಯಾಂಗ ಬಂಧನದಲ್ಲಿದ್ದು ಸುಪ್ರೀಂ ಕೋರ್ಟ್ ಆದೇಶನಂತೆ ಮುರುಘಾಮಠಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಶಿವಯೋಗಿ ಕಳಸಾದ್ ಅವರನ್ನು ಆಡಳಿತ ಅಧಿಕಾರಿಯನ್ನಾಗಿ ಸರ್ಕಾರ ನೇಮಿಸಿದೆ.
ಇದರ ಬೆನ್ನಲ್ಲೇ ಕಳೆದ ಜೂನ್ 26ರಂದು ಮುರ್ಗಮಠದಲ್ಲಿನ ಸಭಾಂಗಣದಲ್ಲಿದ್ದ ಮೂರ್ಗಶ್ರೀ ಬೆಳ್ಳಿ ಪ್ರತಿಮೆ ಕಳ್ಳತನವಾಗಿದೆ. ಆದರೆ ಈ ಪ್ರದೇಶಕ್ಕೆ ಯಾರಿಗೂ ಪ್ರವೇಶ ಇಲ್ಲದ ಹಿನ್ನೆಲೆಯಲ್ಲಿ ಯಾರು ಸಹ ಈ ಪ್ರತಿಮೆಯೆತ್ತ ಗಮನಿಸಿರಲಿಲ್ಲ ಹೀಗಾಗಿ ಪ್ರಕರಣ ತಡವಾಗಿ ಮಠದ ಆಡಳಿತ ಸಮಿತಿ ಗಮನಕ್ಕೆ ತಂದಿದೆ.
ಈ ಕೃತ್ಯದಿಂದ ಇದ್ದ ಮೂವರಲ್ಲಿ ಕದ್ದವರು ಯಾರೆಂಬ ಪ್ರಶ್ನೆ ಮಠದ ಭಕ್ತರಲ್ಲಿ ಮೂಡಿದೆ ಕಳ್ಳತನದ ಬಗ್ಗೆ ಹಲವು ಅನುಮಾನ ಮೂಡಿದ್ದು ಮಠದ ಆಡಳಿತ ಸಮಿತಿ ಸದಸ್ಯರಾದ ಬಸವಕುಮಾರ ಶ್ರೀಗಳಿಗೆ ಉಸ್ತುವಾರಿ ಶ್ರೀಗಳಿದ್ದ ಬಸವ ಪ್ರಭು ಶ್ರೀಗಳು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮಠದ ಭಕ್ತರು ಹಾಗೂ ಮುಖಂಡರೊಂದಿಗೆ ಆಂತರಿಕ ಚರ್ಚೆ ನಡೆಸಿದರು.
ಈ ಕೃತ್ಯ ಕುರಿತು ಚರ್ಚಿಸಿದರು. ಚರ್ಚೆಯಲ್ಲಿ ಎಲ್ಲರೂ ದೂರು ನೀಡುವಂತೆ ಸೂಚಿಸಿದ್ದು ಆಡಳಿತ ಸಮಿತಿ ಅಧ್ಯಕ್ಷರಾದ ಕಳೆದ ಅವರ ಗಮನಕ್ಕೆ ತರಲಾಗಿದೆ. ಆಡಳಿತ ಮಂಡಳಿಯ ಸದಸ್ಯ ಬಸವಕುಮಾರ ಶ್ರೀಗಳು ಚಿತ್ರದುರ್ಗದ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲು ನಿರ್ಧರಿಸಿದ್ದಾರೆ.
ಹಾಗಾಗಿ ಸಭಾಂಗಣದಲ್ಲಿನ ಸಿಸಿಟಿವಿ ಸಹ ಬಂದ್ ಆಗಿದ್ದು ಈ ಬಗ್ಗೆ ಸೂಕ್ತ ತನಿಖೆ ಬಳಿಕವೇ ಸತ್ಯ ಸತ್ಯ ವರ ಬೇಕೆಂದು ವಿರಕ್ತಮಠದ ಬಸವ ಪ್ರಭು ಶ್ರೀಗಳು ತಿಳಿಸಿದ್ದಾರೆ. ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದರ ಬೆನ್ನಲ್ಲೇ ಪೊಲೀಸರು ತನಿಖೆಯನ್ನು ಚುರುಕುಗಳಿಸಿದ್ದಾರೆ. ಸಿಪಿಐ ಮುದ್ದುರಾಜ್ ನೇತೃತ್ವದಲ್ಲಿ ಮಠಕ್ಕೆ ಭೇಟಿ ನೀಡಿದ ಪೊಲೀಸ್ ತಂಡ ಪ್ರಕರಣದ ಸ್ಥಳ ಪರಿಶೀಲನೆ ನಡೆಸಿತು ಈ ವೇಳೆ ವೀರಶೈವ ಸಮಾಜದ ಮುಖಂಡರಾದ ಷಡಕ್ಷರಿ, ವೀರೇಂದ್ರ, ಮತ್ತು ವಕೀಲರಾದ ಪ್ರತಾಪ್ ಮುಂತಾದವರು ಘಟನೆಯಲ್ಲಿ ಭಾಗವಹಿಸಿದ್ದರು.