ಚಿತ್ರದುರ್ಗ : ಕರ್ನಾಟಕ ಸರ್ಕಾರದಿಂದ ಚಿತ್ರದುರ್ಗ ಚಳ್ಕೆರೆ ಪಾವಗಡ ಮಧ್ಯದ 120 ಕಿಲೋಮೀಟರ್ ಉದ್ದದ ರಸ್ತೆಯ ಹೆದ್ದಾರಿಯ ಮೇಲ್ದರ್ಜೆಗೆ ಏರಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಯಿತು. ಈ ರಸ್ತೆ ಅಭಿವೃದ್ಧಿಯಿಂದ ಆಂಧ್ರಪ್ರದೇಶ ಹಾಗೂ ಕರ್ನಾಟಕದ ನಡುವೆ ಸಂಪರ್ಕ ವೃದ್ಧಿಯಾಗಲಿದೆ ಎಂದು ಸಂಸದ ಗೋವಿಂದ ಕಾರಜೋಳ್ ತಿಳಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ ವಿಭಾಗ ಹಾಗೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ಚಳ್ಳಕೆರೆ ತಾಲೂಕಿನ 8,000 ಎಕ್ರೆ ಪ್ರದೇಶದಲ್ಲಿ ಐ.ಎಸ್. ಎಸ್. ಸಿ. ಇಸ್ರೋ ಡಿ.ಆರ್.ಡಿ.ಓ ಸಂಸ್ಥೆಗಳ ಸ್ಥಾಪನೆಯಿಂದ ಚಳ್ಳಕೆರೆ ದೇಶದ ಪ್ರಮುಖ ನಗರವಾಗಿ ಮೊನ್ನೆಲೆಗೆ ಬಂದಿದೆ. ಚಳ್ಳಕೆರೆ ನಗರ ವ್ಯಾಪ್ತಿಯ ರಸ್ತೆಗಳು ಸರಿ ಇಲ್ಲ ಈ ರಸ್ತೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರವು ಅಭಿವೃದ್ಧಿಪಡಿಸುತ್ತಿಲ್ಲ. ಆದ್ದರಿಂದ ಚಳ್ಳಕೆರೆ ನಗರ ಪ್ರದೇಶದ 5.7 ಕಿಲೋಮೀಟರ್ ರಸ್ತೆಯನ್ನು 50 ಕೋಟಿ ವೆಚ್ಚದಲ್ಲಿ ಒಂದು ಬಾರಿಗೆ ಅಭಿವೃದ್ಧಿಪಡಿಸಲು ಭಾರತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಮಂಜೂರಾತಿ ಪಡೆದುಕೊಳ್ಳಲಾಗುವುದು ಎಂದು ಸಂಸದರು ತಿಳಿಸಿದರು.
ಬಿ.ಜಿ.ಕೆರೆ ರಸ್ತೆ ರೂ 1.48 ಕೋಟಿ ರೂ ವೆಚ್ಚದ ಫೊಟ್ ಓವರ್ ಬ್ರಿಡ್ಜ್ ನಿರ್ಮಾಣ ಮಾಡಲು ಮೊಳಕಾಲ್ಮೂರು ತಾಲೂಕು ಬಿ.ಜಿ.ಕೆರೆ ರಸ್ತೆ ಹೆದ್ದಾರಿ ಕಾಮಗಾರಿಯಿಂದ ಬಿ.ಜಿ.ಕೆರೆ ಗ್ರಾಮದ ಎರಡು ಸೀಳಾಗಿ ಹೋಳಾಗಿದ್ದು. ಪ್ರತಿದಿನ ಜನರು ಶಾಲಾ ಮಕ್ಕಳು ಓಡಾಟದಿಂದ ತೊಂದರೆ ಆಗರುವ ಕುರಿತು ದಿನಪತ್ರಿಕೆಯಲ್ಲಿ ಪ್ರಕಟವಾಗಿರುವುದನ್ನು ನೋಡಿದ್ದೇವೆ. ಈ ಸಮಸ್ಯೆಯನ್ನು ನಿರ್ವಹಣೆ ಮಾಡಲು 1.48 ಕೋಟಿ ವೆಚ್ಚದ ಓವರ್ ಬ್ರಿಡ್ಜ್ ನರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ ಇದರಿಂದ ಶಾಲಾ ಮಕ್ಕಳು ಹಾಗೂ ಸ್ಥಳೀಯರಿಗೆ ಉಪಯೋಗವಾಗಲಿದೆ ಎಂದು ಸಂಸದರು ತಿಳಿಸಿದರು.
ಹಿರಿಯೂರು ಹುಳಿಯಾರು ಹೆದ್ದಾರಿಯ 31. 3 ಕಿಲೋಮೀಟರ್ ರಸ್ತೆ, ನಿರ್ಮಾಣ ಕಾಮಗಾರಿಯಲ್ಲಿ 26 ಕಿಲೋಮಿಟರ್ ಹಾಗೂ ಹೊಸದುರ್ಗ ಹೊಳಲ್ಕೆರೆ ರಸ್ತೆಯ ಹೆದ್ದಾರಿಯ 31.72 ಕಿಲೋಮೀಟರ್ ರಸ್ತೆ ಕಾಮಗಾರಿಯಲ್ಲಿ 26 ಕಿ.ಮೀ ರಸ್ತೆ ನಿರ್ಮಾಣವಾಗಿದೆ ಎರಡು ಕಾಮಗಾರಿಗಳ ಪೈಕಿ ಇರುವ ಐದು ಕಿಲೋಮೀಟರ್ ರಸ್ತೆಗಳನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದೆಂದು ಅಧಿಕಾರಿಗಳು ತಿಳಿಸಿದರು.
ಕಡೂರು ಹೊಸದುರ್ಗ ಹೊಸ ಹೆದ್ದಾರಿ ಕಾಮಗಾರಿ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ 184 ಕೋಟಿ ರೂಪಾಯಿ ವೆಚ್ಚದಲ್ಲಿ 48 km ಹೆದ್ದಾರಿ ನಿರ್ಮಾಣಕ್ಕೆ ಶೀಘ್ರವೇ ಪೂಜೆ ಮಾಡಿ ಕೆಲಸ ಆರಂಭಿಸಲಾಗುವುದು ಎಂದು ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 353 km ಉದ್ದದ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದೆ ಇದರಲ್ಲಿ ರಸ್ತೆ ಭಾರತ ಸರ್ಕಾರದ ಎನ್ ಹೆಚ್ಐ್ ನಿರ್ವಹಣೆ ಮಾಡಲಾಗುತ್ತಿದೆ. ಉಳಿದ ರಸ್ತೆಗಳನ್ನು ರಾಜ್ಯದ ರಾಷ್ಟ್ರೀಯ ಹೆದ್ದಾರಿ ವಿಭಾಗದಿಂದ ನಿರ್ವಹಣೆ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಹೈವೇ ಕಾಮಗಾರಿಗಳನ್ನು ಎಂಟರಿಂದ 10 ತಿಂಗಳಲ್ಲಿ ಪೂರ್ಣಗೊಳಿಸಲಾಗುವುದೆಂದು ಅಧಿಕಾರಿಗಳು ಭರವಸೆ ಕೊಟ್ಟರು. ಚಳ್ಳಕೆರೆ ಹಾಗೂ ಹಿರಿಯೂರು ಮಧ್ಯದ ಹೆದ್ದಾರಿ ಕಾಮಗಾರಿ ಭೂಸ್ವಾಧೀನ ಸಮಸ್ಯೆ ಹಾಗೂ ಸ್ಥಳೀಯರ ಸಮಸ್ಯೆಯಿಂದ ವಿಳಂಬ ಆಗಿದೆ ಸದ್ಯ ಹಿರಿಯೂರು ಸಮೀಪದ 9km ರಸ್ತೆ ನಿರ್ಮಾಣ ಬಾಕಿ ಇದೆ ವಿನಾಕಾರಣ ಯಾರು ಹೆದ್ದಾರಿ ಅಭಿವೃದ್ಧಿಗೆ ಅಡ್ಡಿಗಾಲು ಹಾಕಬಾರದು. ಸೂಕ್ತ ಪೊಲೀಸ್ ಬಂದೋಬಸ್ತಿನಲ್ಲಿ ಈ ಹೆದ್ದಾರಿ ಕಾಮಗಾರಿಯನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ಮಾಡಿದರು.
ಈ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಟಿ ವೆಂಕಟೇಶ್ ಉಪವಿಭಾಗಾಧಿಕಾರಿಗಳು ಎಂ ಕಾರ್ತಿಕ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕ ಶಿವಕುಮಾರ್ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ್ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ವಿಭಾಗದ ಹಾಗೂ ಪ್ರಾಧಿಕಾರಾಧಿಕಾರಿ ಮುಂತಾದವರು ಮತ್ತು ಜಿಲ್ಲಾ ರಾಷ್ಟ್ರೀಯ ಹೆದ್ದಾರಿಗಳ ಸಮಸ್ಯಾತ್ಮಕ ವಿಷಯಗಳ ಬಗ್ಗೆ ಚರ್ಚಿಸಿದರು.