Breaking
Wed. Dec 25th, 2024

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ – ಸಂಘ ತಾಲ್ಲೂಕು ದಂಡಾಧಿಕಾರಿಗಳ ಮೂಲಕ ಕೇಂದ್ರದ ಹಣಕಾಸು ಮಂತ್ರಿಗಳಿಗೆ ಮನವಿ…!

ಶ್ರೀನಿವಾಸಪುರ : 2024-25 ನೇ ಸಾಲಿನ ಬಜೆಟ್‌ನಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಗೆ ಸಾಕಷ್ಟು ಹಣಕಾಸು ಹಂಚಿಕೆ ಮೀಸಲಿಟ್ಟು ಅಂಗನವಾಡಿಗಳನ್ನು ಬಲಪಡಿಸಿ ಮತ್ತು ಕಾರ್ಯಕರ್ತೆಯರು, ಸಹಾಯಕಿಯರಿಗೆ ಶಾಸನಬದ್ಧ ಸೌಲಭ್ಯಗಳನ್ನು ಒದಗಿಸಲು – ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ – ಸಂಘ ತಾಲ್ಲೂಕು ದಂಡಾಧಿಕಾರಿಗಳ ಮೂಲಕ ಕೇಂದ್ರದ ಹಣಕಾಸು ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರು – ಸಂಘದಿಂದ ಈ ವರ್ಷದ ಕೇಂದ್ರ ಬಜೆಟ್ ನಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಗೆ – ಸಾಕಷ್ಟು ಹಣಕಾಸು ಹಂಚಿಕೆ ಮೀಸಲಿಟ್ಟು – ಅಂಗನವಾಡಿಗಳನ್ನು ಬಲಪಡಿಸಿ ಮತ್ತು ಈ ಕಾರ್ಯಕರ್ತರು, ಸಹಾಯಕರಿಗೆ

ಶಾಸನಬದ್ಧ ಸೌಲಭ್ಯಗಳನ್ನು ಒದಗಿಸಲು ಹಾಗೂ ಸಾಕಷ್ಟು ಸಂಪನ್ಮೂಲಗಳೊಂದಿಗೆ ಅಂಗನವಾಡಿ ಕೇಂದ್ರಗಳನ್ನು ಪೂರ್ಣ ಸಮಯದ ಅಂಗನವಾಡಿ, ಪಾಲನಾ ಕೇಂದ್ರಗಳಾಗಿ ಅಭಿವೃದ್ಧಿ ಪಡಿಸಿ.

ಗ್ರೇಡ್ -3 ಗ್ರೇಡ್ -4 ಸರ್ಕಾರಿ ನೌಕರರ ನೌಕರನವಾಡಿ ಕಾರ್ಯ ಕರ್ತರನ್ನು ಮತ್ತು ಸಹಾಯಕರನ್ನು ಖಾಯಂ ಮಾಡಿ ಪಿಂಚಣಿ ನಿಯಮಾವಳಿಗಳನ್ನು ಹೆಚ್ಚಿಸಲು ಹಾಗೂ ಇತರೆ ಬೇಡಿಕೆಗಳ ಸಂಗ್ರಹಕ್ಕೆ ಕೇಂದ್ರದ ಹಣಕಾಸು ಮಂತ್ರಿ ನಿರ್ಮಲಾ ಸೀತಾ ರಾಮನ್ ರವರಿಗೆ ಶ್ರೀನಿವಾಸಪುರ ತಾಲ್ಲೂಕು ದಂಡಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.

ಈ ವೇಳೆ ಕಾರ್ಯದರ್ಶಿ ಯಾದ ಮಮತ, ಖಜಾಂಜಿಯಾದ ಪುಷ್ಪಲತಾ, ಉಪಾಧ್ಯಕ್ಷೆ ಸರೋಜಮ್ಮ, ಲಕ್ಷ್ಮೀದೇವಮ್ಮ, ಪದ್ಮಮ್ಮ, ಅಂಬಿಕಾ, ತನುಜ ಸಂಘದ ಸದಸ್ಯರು ಇದ್ದರು.

Related Post

Leave a Reply

Your email address will not be published. Required fields are marked *