Breaking
Tue. Dec 24th, 2024

ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು 56 ಕಡೆಗಳಲ್ಲಿ ಮನೆಗಳ ಮೇಲೆ ದಾಳಿ….!

ಬೆಂಗಳೂರು : ಕರ್ನಾಟಕದಾದ್ಯಂತ ಗುರುವಾರ ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು 56 ಕಡೆಗಳಲ್ಲಿ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಹನ್ನೊಂದು ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆದಿದೆ ಕೋಲಾರ ತಹಶೀಲ್ದಾರ್ ವಿಜಿಣ್ಣ ಮನೆ ಮೇಲೆ ದಾಳಿ ನಡೆಸಿದ್ದು ಪರಿಶೀಲನೆಯ ನಡೆದಿದೆ. ಹಾಸನದಲ್ಲಿ ಗ್ರಜಿಟೆಡ್ ಕಾರ್ಯದರ್ಶಿ ಜಗದೀಶ್ ಮನೆ ಮೇಲೆ ದಾಳಿ ನಡೆದಿದೆ ದಾಳಿಯಲ್ಲಿ ನೂರಕ್ಕೂ ಹೆಚ್ಚು ಅಧಿಕಾರಿಗಳು ಭಾಗಿಯಾಗಿದ್ದಾರೆಂದು ಮೂಲಗಳು ತಿಳಿಸಿವೆ. 

ಮೈಸೂರಿನಲ್ಲಿ ನೀರಾವರಿ ಇಲಾಖೆಯ ಸೂಪರ್ ಡೆಂಟ್ ಇಂಜಿನಿಯರ್ ಮಹೇಶ್ ಕೆ ಮನೆ ಮೇಲೆ ಲೋಕಾಯುಕ್ತರ ದಾಳಿ ನಡೆದಿದೆ. ಮೈಸೂರಿನ ಜೆಸಿ ನಗರದಲ್ಲಿರುವ ನಿವಾಸದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಜೊತೆಗೆ ಗೋಕುಲಂ ಕಚೇರಿಯಲ್ಲಿರುವ ತಡಕಗಳನ್ನು ಪರಿಶೀಲಿಸಿ ಆದಾಯಕ್ಕೂ ಮಿತಿಮೀರಿದ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಕಾರ್ಯಾಚರಣೆ ನಡೆದಿದೆ.

ಮಂಡ್ಯದಲ್ಲಿ ನಿವೃತ್ತ ಈ ಈ ಶಿವರಾಜ್ ಮತ್ತು ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆದಿದೆ. ಮಂಡ್ಯ ಜಿಲ್ಲೆಯ ಮೂರು ಕಡೆ ಮೈಸೂರಿನ ಎರಡು ಕಡೆ ದಾಳಿ ನಡೆದಿದೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಇಜ್ಜಲಗಟ್ಟದಲ್ಲಿರುವ ಶಿವರಾಜ್ಗೆ ಸೇರಿದ ಫಾರ್ಮ್ ಹೌಸ್ ಶಿವರಾಜ್ ತಂದೆ ಮನೆ ಜಲ್ಲಿ ಕ್ರಷರ್ ಮೇಲು ದಾಳಿ ನಡೆದಿದೆ.

ಲೋಕಾಯುಕ್ತ ಎಸ್ ಪಿ ಸುರೇಶ್ ಬಾಬು ನೇತೃತ್ವದಲ್ಲಿ ಕಾರ್ಯಯಾಚರಣೆ ನಡೆದಿದೆ. ಹಾಸನದ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆದಿದ್ದು ಗ್ರಜಿಟೆಡ್ ವನ್ ಕಾರ್ಯದರ್ಶಿಗಳ ಮನೆಯ ಮೇಲೆ ದಾಳಿ ನಡೆದಿದೆ. ಗ್ರೇಡ್ ಒನ್ ಕಾರ್ಯದರ್ಶಿ ಎನ್ ಎಂ ಜಗದೀಶ್ ಗೆ ಸೇರಿದ ಹಾಸನದ ಮನೆ ಬೆಂಗಳೂರಿನ ಮನೆಗಳಲ್ಲಿ ದಾಖಲೆ ಪರಿಶೀಲನೆ ನಡೆದಿದೆ ಲೋಕಾಯುಕ್ತ ಡಿ ವೈ ಎಸ್ ಪಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಚಿತ್ರದುರ್ಗದಲ್ಲಿ ನಿವೃತ್ತ ಇಂಜಿನಿಯರ್  ಎನ್.ಎಂ. ರವೀಂದ್ರ ಗೆ ಸೇರಿದ ಮನೆ ಫಾರ್ಮ್ ಹೌಸ್ ಮೇಲೆ ದಾಳಿ ನಡೆದಿದೆ. ಹಿರಿಯೂರು ತಾಲೂಕಿನ ಸೋಗೂರು ಫಾರಂನಲ್ಲಿ ದಾಳಿ ನಡೆದಿದೆ. ಜೊತೆಗೆ ಹಾಯ್ಮಂಗಳ ಬಳಿ, ಬಾಟಲಿ ಫ್ಯಾಕ್ಟರಿ ಮೇಲು ದಾಳಿ ನಡೆದಿದೆ. ಲೋಕಾಯುಕ್ತ ಎಸ್ ಪಿ ವಾಸುದೇವ್ರಾವ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.

Related Post

Leave a Reply

Your email address will not be published. Required fields are marked *