Breaking
Tue. Dec 24th, 2024

ಕನ್ನಡದ ಖ್ಯಾತ ನಿರೂಪಕಿ, ಕಿರುತರೆ ಕಲಾವಿದೆ, ಮಜಾ ಟಾಕೀಸ್, ವರಲಕ್ಷ್ಮಿ, ಅಪರ್ಣ ಇನ್ನಿಲ್ಲ…!

ಬೆಂಗಳೂರು : ಕನ್ನಡದ ಖ್ಯಾತ ನಿರೂಪಕಿ ಅಪರ್ಣ ಬಹಳ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬನಶಂಕರಿ 2ನೇ ಹಂತದಲ್ಲಿ ಇರುವ ತಮ್ಮ ನಿವಾಸದಲ್ಲಿ ಕೊನೆಗೆ ಸೆರೆಳಿದಿದ್ದಾರೆ.

ಅಪರ್ಣ ಅವರು ಆಕಾಶವಾಣಿ ನಿರೂಪಕಿಯಾಗಿ ಕೆಲಸ ನಿರ್ವಹಿಸದೆ ಮಜಾ ಟಾಕೀಸ್ ಕಾರ್ಯಕ್ರಮದಲ್ಲೂ ಅಭಿನಯಿಸಿದ್ದಾರೆ ಆದರೆ ಕ್ಯಾನ್ಸರ್ ಕಾಯಿಲೆಯಿಂದ ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ತಮ್ಮ ಇಹಲೋಕ ತ್ಯಜಿಸಿದ್ದಾರೆ.

ಕನ್ನಡದ ಯಶಸ್ವಿ ನಿರುಪಕಿಯಾಗಿ ಮೂರು ದಶಕ ಪೂರೈಸಿದ್ದಾರೆ ಈ ಮೂಲಕ ತಮ್ಮ ಕನ್ನಡ ಸೇವೆಯನ್ನು ಮುಂದುವರಿಸಲು. ಕಿರುತೆರೆಯಲ್ಲಿ ಮೂಡಲ ಮನೆ ಮುಕ್ತ ಧಾರಾವಾಹಿಗಳಲ್ಲಿ ನಟಿಸಿದ ಅಪರ್ಣ 2013ರಲ್ಲಿ ಬಿಗ್ ಬಾಸ್ ಕನ್ನಡದ ಮೊದಲ ಸೀಸನ್ ನಲ್ಲಿ ಭಾಗವಹಿಸಿದ್ದರು.

2015ರಲ್ಲಿ ಸೃಜನ್ ಲೋಕೇಶ್ ನೇತೃತ್ವದಲ್ಲಿ ಆರಂಭವಾದ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಪಾತ್ರ ಮಾಡಿ ಕನ್ನಡ ಕಲ ಪ್ರೇಮಿಗಳ ಮನಸ್ಸನ್ನು ಗೆದ್ದಿದ್ದರು 2014ರಲ್ಲಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಘೋಷಣೆಯಾಗುವ ಪ್ರಯಾಣಿಕರು ಅಥವಾ ಇಳಿಯುವ ಸೂಚನೆಗೆ ಧ್ವನಿಗೂಡಿಸಿದರು.

ಅಪರ್ಣ ಅವರು ಚಂದನ ವಾಹಿನಿಯಲ್ಲಿ ಮೂಡಿಬಂದಿದ್ದ ಹಲವು ಕಾರ್ಯಕ್ರಮಗಳನ್ನು ನಿರೂಪಿಸಿದರು ನಂತರ ಭಾರತ ಸರ್ಕಾರದ ವಿವಿಧ ಭಾರತಿ ರೇಡಿಯೋ ಜಾತಿಯಾಗಿ ಕೂಡ ಕಾರ್ಯ ನಿರ್ವಹಿಸಿದರು 1998 ರಲ್ಲಿ ನಡೆದ ದೀಪಾವಳಿ ಕಾರ್ಯಕ್ರಮ ಒಂದನ್ನು ಸತತ ಎಂಟು ಗಂಟೆಗಳ ನಿರೂಪಣೆ ಮಾಡಿದ ದಾಖಲೆ ಬರೆದಿದ್ದಾರೆ.

Related Post

Leave a Reply

Your email address will not be published. Required fields are marked *