ಶ್ರೀನಿವಾಸಪುರ : ಪಟ್ಟಣ ವ್ಯಾಪ್ತಿಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ ಸುಮಾರು ಐವತ್ತಕ್ಕೂ ಹೆಚ್ಚು ವಾಹನಗಳಿಗೆ ಶ್ರೀನಿವಾಸಪುರ ಪೊಲೀಸರು ದಂಡ ವಿಧಿಸುವ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಶ್ರೀನಿವಾಸಪುರ ಪಟ್ಟಣ ವ್ಯಾಪ್ತಿಯ ಎಂ ಜಿ ರಸ್ತೆ, ಬಾಲಕಿಯರ ಕಾಲೇಜು ಆವರಣ, ಸಾರಿಗೆ ಬಸ್ ನಿಲ್ದಾಣ ಸೇರಿದಂತೆ ಇನ್ನಿತರೆ ಸ್ಥಳಗಳಲ್ಲಿ ರಸ್ತೆ ಸಂಚಾರಿ ನಿಯಮಗಳನ್ನು ಪಾಲಿಸದೆ ಉಲ್ಲಂಘನೆ ಮಾಡುತ್ತಿದ್ದ, ದ್ವಿಚಕ್ರವಾಹನ, ಆಟೋ, ಟೆಂಪೋ ನಂತಹ ವಾಹನಗಳಿಗೆ ಶ್ರೀನಿವಾಸಪುರ ವೃತ್ತ ನೀರಿಕ್ಷಕ ಗೊರವನಕೊಳ್ಳ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ದಂಡ ವಿಧಿಸಿದ್ದಾರೆ.
ಐ ಮೂಲಕ ಸಂಚಾರಿ ನಿಯಮಗಳ ಉಲ್ಲಂಘನೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ವಾಹನ ನಿಲುಗಡೆ ಮಾಡುವ ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಮದ್ಯ ಕಾಲದಲ್ಲಿ ವಾಹನಗಳ ನಿಲುಗಡೆಗೆ ಸ್ಥಳವಿಲ್ಲದ ಕಾರಣ ಶಾಲಾ ಆವರಣದಲ್ಲಿ, ಸಾರಿಗೆ ಬಸ್ ನಿಲ್ದಾಣದಲ್ಲಿ ವಾಹನಗಳನ್ನು ಮಾಡುವುದರಿಂದ ಅಲ್ಲಿನ ಸಂಚಾರಿ ವ್ಯವಸ್ಥೆಗೆ ಅಡ್ಡಿಯಾಗುತ್ತಿದೆ. ಐ ಹಿಂದೆ ಹಲವು ಭಾರಿ ಎಚ್ಚರಿಕೆ ನೀಡಿದರೂ ವಾಹನ ಸಂಚಾರರು ಕ್ಯಾರೇ ಎನ್ನದ ಕಾರಣ ಶ್ರೀನಿವಾಸಪುರ ಈ ಕ್ರಮ ಜರುಗಿಸಿದ್ದಾರೆ. ಈ ವೇಳೆ ಉಪ ನೀರಿಕ್ಷಕ ಜಯರಾಮ್, ಪೇದೆಗಳಾದ ಆನಂದ್, ಶಶಿಕುಮಾರ್, ಸಂತೋಷ್, ಸುಬಾನ್ ಇದ್ದರು.