Breaking
Wed. Dec 25th, 2024

ವಿಕಿಪೀಡಿಯ ವಿಕಾಸ್ ತಮಾಷೆ ವಿಡಿಯೋ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ ಯೂಟ್ಯೂಬರ್….!

ಬೆಂಗಳೂರು : ರಾಜ್ಯದ್ಯಂತ ಖ್ಯಾತಿ ಪಡೆದುಕೊಂಡಿದ್ದ “ನಾನು ನಂದಿನಿ ಬೆಂಗಳೂರಿಗೆ ಬಂದೀನಿ” ಎಂಬ ಹಾಡಿನ ಮೂಲಕ ವಿಕಿಪೀಡಿಯ ವಿಕಾಸ್ ಖ್ಯಾತಿ ಪಡೆದುಕೊಂಡಿದ್ದರು ಅದೇ ರೀತಿ ಮತ್ತೊಂದು ವಿಡಿಯೋ  ತಮಾಷೆಗಾಗಿ ಮಾಡಿದ ವಿಡಿಯೋ ಒಂದರಲ್ಲಿ ಡ್ರಗ್ಸ್ ಸೇವಿಸುವ ಪದ ಬಳಕೆ ಮಾಡಿದ ಕಾರಣ ಅವರಿಗೆ ಎಚ್ಚರಿಕೆ ಕೊಟ್ಟು ವಿಡಿಯೋ ಡಿಲೀಟ್ ಮಾಡಿದ್ದಾರೆ ಎಂದು ತಿಳಿಸಲಾಗಿದೆ.

ವಿಕಾಸ್ ತಮ್ಮ ಕ್ರಿಯೇಟಿವ್ ವಿಡಿಯೋಗಳಿಗಾಗಿ ಹೆಚ್ಚು ಹೆಸರುವಾಸಿ ಯಾದವರು ಅವರ ಟೀಮ್ ಟ್ರೆಂಡಿಂಗ್ ತಕ್ಕಂತೆ ವಿಡಿಯೋಗಳನ್ನು ಮಾಡಿ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು  ಜೊತೆಗೆ ಆನ್ಲೈನ್ ಗೇಮ್ಗಳಿಂದ ಆಗುವ ಅವಾಂತರಗಳನ್ನು ತಮ್ಮದೇ ಆದ ಕಾಮಿಡಿ ವಿಡಿಯೋ ಮೂಲಕ ಜನರಿಗೆ ತಲುಪಿಸಿ ಮನ್ನಣೆಗೆ ಪಡೆದುಕೊಂಡರು.

ತಮಾಷೆ ಮಾಡುವ ಬರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಡ್ರಗ್ಸ್ ತೆಗೆದುಕೊಳ್ಳುತ್ತೇನೆ ಎಂಬ ಪದ ಬಳಸಿ ವಿಡಿಯೋ ಮಾಡಿದರು ಈ ವಿಡಿಯೋವನ್ನು ತಮ್ಮ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು ಆದರೆ ಈ ವಿಡಿಯೋ ವೈರಲ್ ಆಗಿದ್ದು ಸಾರ್ವಜನಿಕ ವಲಯದಿಂದಲೂ ಸಾಕಷ್ಟು ಟೀಕೆಗೆ ಒಳಗಾಗಿತ್ತು.

ವಿಡಿಯೋದಲ್ಲಿ ಡ್ರಗ್ಸ್ ಪದ ಬಳಕೆ ಮಾಡಿದ್ದಕ್ಕೆ ಸಾರ್ವಜನಿಕರೊಬ್ಬರು ಕಾಮೆಂಟ್ ಮಾಡಿ ಅಪೇಕ್ಷ ವ್ಯಕ್ತಪಡಿಸಿದರು ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಈ ಬಗ್ಗೆ ಬೆಂಗಳೂರು ಸಿಟಿ ಪೊಲೀಸರು ಸೋಶಿಯಲ್ ಮೀಡಿಯಾ ವಿಂಗ್ ಪರಿಶೀಲನೆ ನಡೆಸಿತ್ತು.

ಬೈಯಪ್ಪನಹಳ್ಳಿ ಪೊಲೀಸರಿಗೆ ಇದರ ಬಗ್ಗೆ ಪರಿಶೀಲಿಸುವಂತೆ ಸೂಚನೆ ನೀಡಿದರು ಇದರಿಂದ ಭೈಯಪನಹಳ್ಳಿ ಪೊಲೀಸರಿಂದ ವಿಡಿಯೋ ಪರಿಶೀಲನೆ ನಡೆಸಿ ವಿಕಿಪೀಡಿಯ ತಂಡಕ್ಕೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಿಂದ ತೆಗೆಯುವಂತೆ ಸೂಚನೆ ನೀಡಿದರು ಎಂದು ತಿಳಿದುಬಂದಿದೆ.

ವಿಕಾಸ್ ಅವರನ್ನು ಭೈಯಪನಹಳ್ಳಿ ಪೊಲೀಸರು ಠಾಣೆಗೆ ಕರೆದು ವಿಚಾರಣೆ ನಡೆಸಿದ ಬಳಿಕ ಎಚ್ಚರಿಕೆಯನ್ನು ನೀಡಿ ವಾಪಸ್ ಕಳಿಸಿದ್ದಾರೆ ಎಂದು ತಿಳಿದುಬಂದಿದೆ ಅಲ್ಲದೆ ವಿಡಿಯೋ ಮಾಡುವಾಗ ಅನುಸರಿಸಬೇಕಾದ ಕೆಲವು ಸೂಚನೆಗಳನ್ನು ಪೊಲೀಸರು ವಿಕಾಸ್ ಗೆ ನೀಡಿರುವುದು ತಿಳಿದು ಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ಶೈಲಿಯ ಹಾಡುಗಳು ಸಾಮಾಜಿಕ ಕಳಕಳಿ ಮೂಡಿಸುವ ವಿಡಿಯೋಗಳನ್ನು ಜನರನ್ನು ನಕ್ಕು ನಗಿಸಿರುವುದು ಸುಳ್ಳಲ್ಲ ಆದರೆ ಇದೊಂದು ವಿಡಿಯೋದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ ಈ ವಿಡಿಯೋದಲ್ಲಿ ಖುಷಿಗಾಗಿ ಡ್ರಗ್ಸ್ ಎನ್ನುವ ಪದ ಬಳಕೆ ಆದ್ದರಿಂದ ಪೊಲೀಸರು ವಿಕಾಸ್ ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ ಜೊತೆಗೆ ಸಾಮಾಜಿಕ ಜಾಲತಾಣದ ಎಲ್ಲಾ ಖಾತೆಗಳಲ್ಲಿರುವ ವಿಡಿಯೋವನ್ನು ಡಿಲೀಟ್ ಮಾಡಿಸಿದ್ದಾರೆ.

Related Post

Leave a Reply

Your email address will not be published. Required fields are marked *