Breaking
Wed. Dec 25th, 2024

ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿಗಳಿಗೆ ಹಣ ಇದೆ, ಬೇರೆ ಯೋಜನೆಗಳಿಗೆ ನೀಡಲು ಹಣ ಇಲ್ಲ ಎಂದ ಸಿಎಂ ಆರ್ಥಿಕ ಸಲಹೆಗಾರ….!

ಕೊಪ್ಪಳ : ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಯಲ್ಲಿ 60 ರಿಂದ 65 ಕೋಟಿ ಹಣ ಬೇಕು. ಇದರಿಂದ ಬೇರೆ ಯೋಜನೆಗಳಿಗೆ ಅನುದಾನ ನೀಡಲು ಸಾಧ್ಯವಿಲ್ಲ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ  ತಿಳಿಸಿದ್ದಾರೆ. ಕೊಪ್ಪಳದ ಕಾಕನೂರು ತಾಲೂಕಿನಲ್ಲಿ ಕೆರೆ ತುಂಬಿಸುವ ಯೋಜನೆಗೆ ಕೆರೆ ನಿರ್ಮಾಣ ಭೂಮಿ ಪಡೆಯಲು ಯೋಜಿಸಿದ್ದ ರೈತರು ಮತ್ತು ಗ್ರಾಮಸ್ಥರ ಸಭೆಯಲ್ಲಿ ಬಸವರಾಜ್ ರಾಯರೆಡ್ಡಿ ಮಾತನಾಡಿದರು.

ಹಣಕಾಸಿನ ಕೊರತೆಯಿಂದ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ ನಾನು ಕೆರೆ ತುಂಬಿಸುವ ಯೋಜನೆಗೆ ಬರಬರಿ 970 ಕೋಟಿ ಅನುದಾನ ನೀಡಿದ್ದೇನೆ ಆದರೆ ಕಾಮಗಾರಿಗೆ ಅಗತ್ಯ ಭೂಮಿ ನೀಡಲು ಯಾರು ಮುಂದೆ ಬರುತ್ತಿಲ್ಲ ರಾಜ್ಯದ ಯಾವುದೇ ವಿಧಾನಸಭೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ ಕ್ಷೇತ್ರದ ತುಂಬಾ ಶಾಸಕರು ಅಭಿವೃದ್ಧಿಗಾಗಿ ಅನುದಾನ ಕೇಳುತ್ತಿದ್ದಾರೆ ಆದರೆ ಸಿಎಂ ಯಾರಿಗೂ ಅನುದಾನ ನೀಡುತ್ತಿಲ್ಲ ಎಂದು ತಿಳಿಸಿದರು.

ನಮ್ಮ ಕ್ಷೇತ್ರಕ್ಕೆ ಮಾತ್ರ ಹಣ ಬಂದಿದೆ ಗ್ಯಾರೆಂಟಿ ಯೋಜನೆಗೆ ಹಣ ವಂದಿಸಲು ತುಂಬಾ ಕಷ್ಟ ಆಗುತ್ತದೆ ಎಂದು ಸಿಎಂ ನನ್ನನ್ನು ತಮ್ಮ ಹಾರ್ದಿಕ ಸಲಹೆಗಾರನಾಗಿ ಮಾಡಿಕೊಂಡಿದ್ದಾರೆ. ದಿನನಿತ್ಯ ಅವರ ಜೊತೆಯಲ್ಲಿ ಇರುವುದರಿಂದ ನನ್ನ ಕ್ಷೇತ್ರಕ್ಕೆ ಹಣ ಬಂದಿದೆ ರಾಜ್ಯದಲ್ಲಿ ಇಂದು ಒಂದೇ ಕೆಲಸ ಆಗುತ್ತಿದೆ ಹಣಕಾಸಿನ ಆಂತರಿಕ ವಿಚಾರ ನನಗೆ ಮಾತ್ರ ಗೊತ್ತಿದೆ ಇದರಿಂದ ಕ್ಷೇತ್ರದ ಜನರು ಅರ್ಥಮಾಡಿಕೊಳ್ಳಬೇಕೆಂದು ತಿಳಿಸಿದರು.

Related Post

Leave a Reply

Your email address will not be published. Required fields are marked *