ಬೀದರ್, ಜು.11: ಹಾಡುಹಗಲೇ ಬೀದರ ತಹಸೀಲ್ದಾರ್ ಕಚೇರಿಯ ಶಿರಸ್ತೇದಾರನಿಗೆ ಚಾಕು ಇದ್ದ ಘಟನೆ ಇಂದು(ಗುರುವಾರ) ಮಧ್ಯಾಹ್ನ ನಡೆದಿದೆ. ಆಹಾರ ಶಾಖೆಯ ಶಿರಸ್ತೇದಾರ್ ಆಗಿರುವ ಅನಿಲ್ಕುಮಾರ್ ವ್ಯಾಸ್, ಚಾಕು ಇರಿತಕ್ಕೊಳಗಾದವರು. ಕರ್ತವ್ಯದಲ್ಲಿದ್ದ ವೇಳೆಯೇ ಅನೀಲ್ ಕುಮಾರಗೆ ಚಾಕು ಇರಿದು ವ್ಯಕ್ತಿ ಪರಾರಿಯಾಗಿದ್ದಾನೆ.
ಕೂಡಲೇ ಗಾಯಾಳು ಅನೀಲ್ ಕುಮಾರ್ ಅವರನ್ನು ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ನಿಗಾ ಘಟಕದಲ್ಲಿ ಎಡಗೈ ಭುಜಕ್ಕೆ ಗಂಭೀರ ಗಾಯವಾದ ಹಿನ್ನೆಲೆ ಬ್ರಿಮ್ಸ್ನ ತೀವ್ರ ನಿಗಾ ಘಟಕದಲ್ಲಿ ಶಸ್ತ್ರ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಬೀದರ್ ನ ಮಾರುಕಟ್ಟೆ ಪೊಲೀಸ್ ಠಾಣೆ ಪ್ರಕರಣ ದಾಖಲಿಸಲಾಗಿದೆ. ಚಾಕು ಇದ್ದ ಪರಾರಿಯಾದ ವ್ಯಕ್ತಿ ಅಮನ್ ಜುಬೇರ್ ಎಂದು ಗುರುತಿಸಲಾಗಿದೆ, ಪೊಲೀಸರು ಭೇಟಿ ನೀಡಿ ಪರಿಶೀಲನೆ ಆರಂಭಿಸಿದ್ದಾರೆ.