ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ಬೇವೂರು ಗ್ರಾಮದ ಮೇನ್ ರೋಡಾದ ಬಾಗಲಕೋಟೆಗೆ ಹೋಗುವ ರಸ್ತೆಯ ಬದಿಯಲ್ಲಿ ಕೊಳಚೆ ಹಾಗೂ ಕಸದಿಂದ ಆವೃತವಾಗಿ ದುರ್ವಾಸನೆ ಬೀರುತ್ತಿದೆ.ಸುಮಾರು ದಿನಗಳಿಂದ 131 ತೊಂದರೆ ಅನುಭವಿಸುತ್ತಿದ್ದಾರೆ.
ಸ್ವಚ್ಛತೆ ಇಲ್ಲದ ಕಾರಣ ಡೆಂಗ್ಯೂ,ಮಲೇರಿಯಾ ಎಂಬ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಸ್ವಚ್ಛತೆಯ ಬಗ್ಗೆ ಅರಿವೇ ಇರದ ಗ್ರಾಮ ಪಂಚಾಯತಿಯ ಪಿಡಿಓ ಭೀಮಪ್ಪ ಇಟಗಿ ಪಂಚಾಯತಿಯಲ್ಲಿ ಹಣ ಹೊಡೆಯುವ ಕೆಲಸ ಬಿಟ್ಟರೆ ಯಾವ ಕೆಲಸ ಕೂಡ ನಡೆಯುತ್ತಿಲ್ಲ ಎಂಬುದು ಅಲ್ಲಿನ ಜನರ ಪಿಸುಮಾತಾಗಿದೆ.
ಗ್ರಾಮದ ಸ್ವಚ್ಛತೆ ಬಗ್ಗೆ ಅರಿವೇ ಇಲ್ಲದ ಪಿಡಿಓ ಹೇಗೆ ತಾನೇ ಗ್ರಾಮಗಳ ಅಭಿವೃದ್ಧಿ ಮಾಡುತ್ತಾನೆ.ವರದಿ ಕಂಡ ಮೇಲಾದರೂ ಅಧಿಕಾರಿಗಳು ಸ್ವಚ್ಛತೆಗೆ ಮುಂದಾಗುವರೋ ಇಲ್ಲವೋ ಕಾದು ನೋಡೋಣ. ದಿನಾಲೂ ಆ ರಸ್ತೆಯಲ್ಲಿ ಸಾರ್ವಜನಿಕರು ಸಂಪರ್ಕ ಮಾಡುತ್ತಾರೆ. ಅದರ ಮುಂದಗಡೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಸಹ ಇರುತ್ತದೆ.
ದಿನಾ ರೈತರು ಹಾಗೂ ಸಾರ್ವಜನಿಕರು ಈ ದುರ್ವಾಸನೆಯಿಂದ ಬೇಸತ್ತು ಪಿಡಿಓ ಭೀಮಪ್ಪ ಇಟಗಿ ಗೆ ಹಿಡಿಶಾಪ ಹಾಕಿ ಹೋಗುತ್ತಾರೆ.ಅಲ್ಲಿನ ಸುತ್ತಲಿನ ಜನರು ಇದರಿಂದ ತುಂಬಾ ಸ್ವಚ್ಛತೆ ಇಲ್ಲದ ಕಾರಣ ದುರ್ವಾಸನೆಯಿಂದ ಪರದಾಡುವ ಪರಿಸ್ಥಿತಿ ಎದುರಾಗಿದೆ.