ತುಮಕೂರು : ವಾಹನ ಸವಾರರಿಗೆ ಬರದಿಂದ ಬರೆ ಎಳೆದಿರುವ ಘಟನೆಯು ಪ್ರತಿದಿನ ನಾವು ನೋಡುತ್ತಿದ್ದೇವೆ ಸರ್ಕಾರವು ಇತ್ತೀಚಿಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿ ಇದರಿಂದ ಹೊರ ಬರಲಾರದೆ ಜನರು ಪರದಾಡುತ್ತಿದ್ದಾರೆ.
ಕುಣಿಗಲ್ ರಸ್ತೆಯಲ್ಲಿರುವ ಹೆಚ್.ಪಿ. ಪೆಟ್ರೋಲ್ ಬಂಕ್ ನಲ್ಲಿ ವಾಹನ ಸವಾರರಿಗೆ ಮೋಸವಾಗಿರುವ ಆರೋಪ ಕೇಳಿ ಬಂದಿದೆ. ಪವರ್ ಪೆಟ್ರೋಲ್ ಅಂತ ಬೈಕ್ ಸವಾರ 110 ರೂಪಾಯಿಗೆ ಪೆಟ್ರೋಲ್ ಹಾಕಿಸಿದರೆ ಅದು 300ml ಮಾತ್ರ ಬಂದಿದೆ ಎಂದು ಆರೋಪ ಮಾಡಿದ್ದಾರೆ.
ಪೆಟ್ರೋಲ್ ಕದಿಯುವ ದಂಧೆ ಒಂದು ಕಡೆ, ರೇಟ್ ಬರೆ ಮತ್ತೊಂದು ಕಡೆ ಬಂಕ್ ಮಾಲಿಕರಿಂದ ಸುಲಿಗೆಯಿಂದ ವಾಹನ ಸವಾರರು ಹೈರಾಣಾಗಿದ್ದಾರೆ.
ಕಳೆದವಾರವಷ್ಟೇ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯೂರಿನಲ್ಲಿ ಇದೇ ರೀತಿ ಬಂದೆ ಬದಲಾಯಿತ್ತು. ಈಗ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಪೆಟ್ರೋಲ್ ಬಂಕ್ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.