ಕೊಟ್ಟೂರು : ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲಾ ಕಾಲೇಜು ಆವರಣದಲ್ಲಿ, ಮಹಿಳೆ/ ವಿದ್ಯಾರ್ಥಿನಿಯರನ್ನು ಪುಂಡರು ಚುಡಾಯಿಸುತ್ತಿದ್ದ ಮಾಹಿತಿ ಬಂದ ಮೇರೆಗೆ, ಜಿಲ್ಲೆಯಾದ್ಯಂತ ವಿಶೇಷ ತಂಡವನ್ನು ರಚಿಸಿ ಕಾರ್ಯಚರಣೆಯನ್ನು ಕೈಗೊಂಡು 2 ಕೂಡ್ಲಿಗಿ ಪಟ್ಟಣದಲ್ಲಿ ಎರಡು, ಕೊಟ್ಟೂರು ಪಟ್ಟಣದಲ್ಲಿ ಎಂಟು ಹಾಗೂ ಮರಿಯಮ್ಮನಹಳ್ಳಿಯಲ್ಲಿ ನಾಲ್ಕು ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.
ಇತ್ತೀಚೆಗೆ ಕೊಟ್ಟೂರು ಪಟ್ಟಣದಲ್ಲಿ ವಿವಿಧ ಬಡಾವಣೆಗಳಲ್ಲಿ ಅದರಲ್ಲಿ ರಾತ್ರಿ ಹೊತ್ತು ಹೆಣ್ಣು ಮಕ್ಕಳಿಗೆ ಕೆಲ ಪುಂಡರು ಚುಡಾಯಿಸಿದ ಘಟನೆಗಳು ಬೆಳಕಿಗೆ ಬಂದಿರುತ್ತವೆ ಹಾಗೂ ಸಾಯಂಕಾಲ ಸಮಯ ವಾಯುವಿಹಾರಕ್ಕೆ ತೆರಳಿದಾಗ ಚುಡಾಯಿಸಿದ ಘಟನೆಗಳು ಕಂಡು ಬಂದಿರುತ್ತವೆ. ಹೆಣ್ಣು ಮಕ್ಕಳನ್ನು ಚುಡಾಯಿಸುತ್ತಿದ್ದ ಘಟನೆ ಕಂಡು ಬಂದಲ್ಲಿ ಈ ಮೊಬೈಲ್ : 9480805700 ನಂಬರ್ ಗೆ ಮಾಹಿತಿ ನೀಡಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.