Breaking
Tue. Dec 24th, 2024

ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಡೆಂಗ್ಯೂ ಜ್ವರಕ್ಕೆ ಬಲಿ…!

ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಡೆಂಗ್ಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಆರೋಗ್ಯ ಇಲಾಖೆ ಕೂಡ ನಿಯಂತ್ರಣಕ್ಕೆ ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ ಆದರೆ ಸೋಂಕಿತರ ಸಂಖ್ಯೆಯು ಹೆಚ್ಚಾಗಿದ್ದು ಅದರ ಜೊತೆಗೆ ಸಾವಿನ ಸಂಖ್ಯೆಯು ಹೆಚ್ಚಾಗುತ್ತಿದೆ ಇವತ್ತು ಚಿಕ್ಕಬಳ್ಳಾಪುರದ ವಿದ್ಯಾರ್ಥಿನಿ ಒಬ್ಬರು ಮೃತಪಟ್ಟ ಘಟನೆ ನಡೆದಿದೆ.

ಯಶಸ್ವಿನಿ ಚಿಕ್ಕಬಳ್ಳಾಪುರದಲ್ಲಿಯೇ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು ಒಂದು ವಾರದಿಂದ ಇವರು ಜ್ವರದಿಂದ ಬಳಲುತ್ತಿದ್ದರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಯಶಸ್ವಿನಿ ಸಾವನ್ನಪ್ಪಿದ್ದಾರೆ. ಯಶಸ್ವಿನಿ ಸಾವಿನಿಂದ ಕುಟುಂಬಸ್ಥರು ಸ್ನೇಹಿತರಲ್ಲಿ ಆತಂಕದ ವಾತಾವರಣ ಮನೆ ಮಾಡಿದೆ. ಬಾಳಿ ಬದುಕ ಬೇಕಿದ್ದ ಮಗಳನ್ನು ಕಳೆದುಕೊಂಡ ಪೋಷಕರ ಕಣ್ಣೀರು ಮುಗಿಲು ಮುಟ್ಟುವ ಆಕ್ರಂದನ ಮನೆ ಮಾಡಿದೆ.

ಯಶಸ್ವಿನಿ ಸಾವಿನ ಬಳಿಕ ಚಿಕ್ಕಬಳ್ಳಾಪುರದಲ್ಲಿ ಹೈ ಅಲರ್ಟ್ ಮಾಡಿದ್ದಾರೆ ಆರೋಗ್ಯ ಇಲಾಖೆ ಕೂಡ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚನೆಯನ್ನು ಜಿಲ್ಲಾದ್ಯಂತ  ತಿಳಿಸಿದೆ. ಇದರ ಜೊತೆಗೆ ಸೊಳ್ಳೆಗಳ ನಿರ್ಮೂಲನೆ ಮಾಡುವುದಕ್ಕೆ ಹೆಚ್ಚಿನ ಆದ್ಯತೆ ಜಿಲ್ಲಾಡಳಿತ ಮುಂದಾಗಿದೆ ಜಿಲ್ಲೆಯಲ್ಲಿ ಯಶಸ್ವಿನಿ ಸಾವು ಆತಂಕ ಸೃಷ್ಟಿಸಿದೆ. ಡೆಂಗ್ಯೂ ಜ್ವರ ಹೆಚ್ಚಾಗಿರುವ ಕಾರಣದಿಂದ ಈಗಾಗಲೇ ಜಿಲ್ಲಾಧಿಕಾರಿಗಳು ಆರೋಗ್ಯ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.

ಡೆಂಗ್ಯೂ ಹೆಚ್ಚಾದಂತೆ ಎಚ್ಚರಿಕೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕಾಗಿದೆ. ಎಷ್ಟು ಹಣ ಬೇಕು ಅಷ್ಟನ್ನು ತಕ್ಷಣವೇ ರಿಲೀಸ್ ಮಾಡಲಾಗುತ್ತಿದೆ ಆದರೆ ಎಲ್ಲಾ ಕಡೆ ಡೆಂಗ್ಯೂ ನಿಯಂತ್ರಣ ಆಗಬೇಕೆಂದು ಸೂಚನೆ ನೀಡಿದ್ದಾರೆ ರಾಜ್ಯದಲ್ಲೂ ಡೆಂಗಿ ಪ್ರಕರಣಗಳು ಹೆಚ್ಚಾಗುತ್ತಿವೆ ಇವುಗಳ ಬಗ್ಗೆ ಹೆಚ್ಚು ಹೆಚ್ಚು ಮುಂಜಾಗ್ರಕತೆ ತೆಗೆದುಕೊಂಡು ಜನರಿಗೆ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

Related Post

Leave a Reply

Your email address will not be published. Required fields are marked *