Breaking
Mon. Dec 23rd, 2024

ಸಮಾಜ ಸೇವಕ, ಆಪತ್ವಾದವು ಎಂದು ಖ್ಯಾತಿ ಪಡೆದಿರುವ ಆಸೀಫ್ನ ನೀಚ ಕೃತ್ಯ ಬಟಾಬಯಲು…..!

ಉಡುಪಿ : ಜಿಲ್ಲೆಯ ಸಮಾಜ ಸೇವಕ, ಆಪತ್ವಾದವು ಎಂದು ಖ್ಯಾತಿ ಪಡೆದಿರುವ ಆಸೀಫ್ನ ನೀಚ ಕೃತ್ಯ ಬಟಾಬಯಲಾಗಿದೆ. ಸ್ವಂತ ಪುತ್ರಿಯ ವಿಡಿಯೋವನ್ನು ಆಶ್ಲೀಲವಾಗಿ ಎಡಿಟ್ ಮಾಡಿ ವೈರಲ್ ಮಾಡಿದ್ದಾನೆ.

ಹೌದು.. ಪಡುಬಿದ್ರಿಯಲ್ಲಿ ತನ್ನ ಸ್ವಂತ ಪುತ್ರಿಯ ಖಾಸಗಿ ವಿಡಿಯೋಗಳನ್ನೇ ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ವಾಟ್ಸಾಪ್ ಗ್ರೂಪ್‌ಗಳಲ್ಲಿ ಹರಿಬಿಟ್ಟಿರುವ ಆರೋಪ ಕೇಳಿಬಂದಿದೆ. ಈ ಕುರಿತು ಪತಿ ವಿರುದ್ಧ ಪತ್ನಿಯೇ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ಬೆನ್ನಲ್ಲೇ ಆರೋಪಿಗಳು ಆತ್ಮಹತ್ಯೆಗೆ ಯತ್ನಿಸಿದ್ದು, ಆಕೆಯನ್ನು ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಸೀಫ್ನ ಪುತ್ರಿ ತೀರ್ಥಹಳ್ಳಿಯ ತಮ್ಮ ಸಂಬಂಧಿ ಆಗಿರುವ ಯುವಕನೋರ್ವನನ್ನು ಪ್ರೀತಿಸುತ್ತಿದ್ದಳು. ಇದು ಯುವತಿಯ ತಂದೆಗೆ ಇಷ್ಟವಿರಲಿಲ್ಲ. ಈ ಕೋಪದಿಂದ ಪುತ್ರಿಯ ಫೋಟೋ, ವಿಡಿಯೋಗಳನ್ನು ಸಂಬಂಧಿ ಹುಡುಗನ ಜೊತೆಗಿನ ಫೋಟೋ ಎಡಿಟ್ ಮಾಡಿ ವೈರಲ್ ಮಾಡಿದ್ದಾನೆ. ಮಗಳು ಪ್ರೀತಿಸುತ್ತಿದ್ದ ಹುಡಗನನ್ನು ಮನೆಗೆ ಕರೆಸಿ ಆತನ ಮೇಲೆ ಹಲ್ಲೆ ಮಾಡಿದ್ದನಂತೆ.

ಬಳಿಕ ಆ ಹುಡುಗನ ಮತ್ತು ತನ್ನ ಮಗಳ ಫೋನ್‌ಗಳನ್ನು ಕಸಿದುಕೊಂಡು ಅದರಲ್ಲಿದ್ದ ವಿಡಿಯೋಗಳನ್ನು ತನ್ನ ಪೋನ್‌ಗೆ ವರ್ಗಾಯಿಸಿಕೊಂಡು ಅವುಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವಿವಿಧ ವಾಟ್ಸಾಪ್ ಗ್ರೂಪ್‌ಗಳಿಗೆ ಕಳುಹಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಪೊಲೀಸ್ ಠಾಣೆ ಪೊಲೀಸ್ ಠಾಣೆ, ಉಡುಪಿ ಜಿಲ್ಲೆ/574 ಪುತ್ರಿ ಪತ್ನಿ ಮೇಲೆ ಹಲ್ಲೆ ಉಡುಪಿ ಮೂಲದ ಸಮಾಜ ಸೇವಕನೊಬ್ಬ ಮಗಳ ಪ್ರೀತಿ ವಿಚಾರ ತಿಳಿದು ಪತ್ನಿ ಮತ್ತು ಪುತ್ರಿಯನ್ನು ಯದ್ವತವತವ್ವ ತಳಿಸಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಗಳ ಪ್ರೀತಿಯ ವಿಚಾರ ಗೊತ್ತಾಗಿ ಆಸೀಫ್‌ಗೆ ಕೆಂಡಾಮಂಡಲನಾಗಿದ್ದರೆ, ಇದೇ ಸಿಟ್ಟಿನಲ್ಲಿ ಅಮಾನುಷವಾಗಿ ಮಗಳನ್ನು ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಈ ನಡುವೆ ಬಂದ ಪತ್ನಿಯನ್ನೂ ಸಹ ಕಾಲಿನಲ್ಲಿ ತುಳಿದು ಹಲ್ಲೆ ಮಾಡಿದ್ದಾನೆ. ದೃಶ್ಯ ಸಿಸಿಟಿವಿಯಲ್ಲಿ ಸೆರೆ ಹಿಡಿದ, ಅದು ವೈರಲ್ ಆಗಿದೆ.

ಮುಲ್ಕಿಯಲ್ಲಿ ಆಪ್ತಕಾಂಡವ ಸೈಕೋ ರಿಹ್ಯಾಬಿಟೇಷನ್ ಸೆಂಟರ್ ಮಾಧಕ ವ್ಯಸನಿಗಳು ಮತ್ತು ಮಾನಸಿಕ ಅಸ್ವಸ್ಥರಿಗೆ ಪೂರ್ಣವಸತಿ ಕಲ್ಪಿಸುವ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಆಪತ್ಥಾಂಧವ ಎಂದೆಂದಿಗೂ ಆಸೀಫ್ ಹೆಸರಾಗಿದ್ದರು. ಇದೀಗ ನಮಗೆ ಉಪಕಾರಿ ಮನೆಗೆ ಮಾರಿ ಎಂಬಂತೆ ಆಸೀಫ್ನ ಅಸಲಿ ಮುಖವನ್ನು ಪತ್ನಿ ಬಿಚ್ಚಿಟ್ಟಿದ್ದಾರೆ.

ತನ್ನ ಪತಿ ಡ್ರಗ್ ವ್ಯಸನಿ, ಬ್ರೌನ್ ಶುಗ, ಹಲ್ಲೆ ನಡೆಸುವಂತೆ ಎಂದು ಆರೋಪಿಸಿದ್ದಾರೆ. ಆಶ್ರಮದಲ್ಲಿಯೂ ಅಕ್ರಮಗಳನ್ನು ನಡೆಸುತ್ತಿದ್ದರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಪೊಲೀಸರೊಂದಿಗೆ ಆಸಿಫ್‌ಗೆ ಉತ್ತಮ ಸಂಬಂಧ ಇರುವ ಕಾರಣ ಠಾಣೆಯಲ್ಲಿ ದೂರು ದಾಖಲಿಸಲು ಮೀನಾಮೇಷ ಎಂದು ಶಬನಮ್ ಆರೋಪಿಸಿದ್ದಾರೆ. ಬಳಿಕ ಪಡಿಬಿದ್ರೆ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಆದರೆ, ಆಸೀಫ್ ತಲೆಮರೆಸಿಕೊಂಡಿದ್ದಾನೆ ಎಂದು ಸೂಚಿಸಲಾಗಿದೆ.

Related Post

Leave a Reply

Your email address will not be published. Required fields are marked *