ಚಳ್ಳಕೆರೆ : ಬೆಂಗಳೂರಿನಿಂದ ಬಳ್ಳಾರಿಗೆ ತೆರಳುವಾಗ ತಳುಕು ಸಮೀಪ ರಾಷ್ಟ್ರೀಯ ಹೆದ್ದಾರಿ ಹೊಸಹಳ್ಳಿ ಬಳಿ ಬೀಕರ ಅಪಘಾತ ಸಂಭವಿಸಿದ್ದು ಬಳ್ಳಾರಿ ಮೂಲದ ಗೋಪಿನಾಥ್ (55) ವರ್ಷ ಪತ್ನಿ ಲಲಿತಮ್ಮ (45) ವರ್ಷ ಸ್ಥಳದಲ್ಲೇ ಸಾವನಪ್ಪಿದ್ದಾರೆ.
ಕಾರಿನಲ್ಲಿದ್ದ ಗೋಪಿನಾಥ್ ಮಕ್ಕಳಾದ ಶ್ರೀನಿವಾಸ್ ಶ್ರೇಯ ಹಾಗೂ ಚಾಲಕ ಸುರೇಶ್ ಅವರಿಗೆ ಗಂಭೀರ ಗಾಯಗಳಾಗಿದ್ದು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೃತ ದಂಪತಿಗಳು ಬೆಂಗಳೂರಿನಿಂದ ಬಳ್ಳಾರಿಗೆ ತೆರಳುತ್ತಿದ್ದರು.
ಇನೋವಾ ವಾಹನ ಮುಂಜಾನೆ ಬೆಳಗ್ಗೆ 4:30 ಸಮಯದಲ್ಲಿ ತಳಕು ಸಮೀಪದ ರಾಷ್ಟ್ರೀಯ ಹೆದ್ದಾರಿ ಹೊಸಹಳ್ಳಿ ಗೇಟ್ ಬಳಿ ಸಮೀಪದ ತಡೆ ಗೋಡೆಗೆ ಡಿಕ್ಕಿ ಆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ತಡ ಗೋಡೆಗೆ ರಭಸದಿಂದ ಗುದ್ದಿದ ಪರಿಣಾಮದಿಂದ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ.
ರಸ್ತೆ ಅಪಘಾತಕ್ಕೆ ಚಳ್ಕೆರೆ ಡಿವೈಎಸ್ಪಿ ಪಿಟಿಬಿ ರಾಜಣ್ಣ ತಳಕು ಪಿಎಸ್ಐ ಹಾಗು ಸಿಬ್ಬಂದಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು.