Breaking
Mon. Dec 23rd, 2024

ರೋಟರಿ ಬಾಲ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವೈದ್ಯೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ….!

ಚಿತ್ರದುರ್ಗ : ರೋಟರಿ ಕ್ಲಬ್ ಮತ್ತು ಪ್ರಥಮ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಹಾಯದೊಂದಿಗೆ ರೋಟರಿ ಬಾಲ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವೈದ್ಯೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕೌಟುಂಬಿಕ ಸಾಮಾಜಿಕ ಭಾವನಾತ್ಮಕವಾಗಿ ಯಾರು ಬಲಿಷ್ಠರಾಗಿರುತ್ತಾರೋ ಅಂತಹವರು ಮಾತ್ರ ಜೀವನದಲ್ಲಿ ಯಶಸ್ವಿನಾ ಮೆಟ್ಟಲು ಹೇರಬಲ್ಲರು ಎಂದು ಡಾಕ್ಟರ್ ನವೀನ್ ಬಿ ಸಜ್ಜನ್ ಹೇಳಿಕೆ ನೀಡಿದರು.

ಪ್ರತಿಯೊಬ್ಬರು ಜೀವನದಲ್ಲಿ ಯಶಸ್ವಿಯಾಗಬೇಕೆಂಬ ಆಸೆ ಇರುತ್ತದೆ ಆದರೆ ಅವರು ಆತ್ಮ ವಿಶ್ವಾಸದೊಂದಿಗೆ ಎಂತಹ ಸನ್ನಿವೇಶ ಸವಾಲುಗಳನ್ನು ಎದೆಸುವಷ್ಟು ಸಾಮರ್ಥ್ಯ ವಿಶ್ವಾಸವುಳ್ಳವರು ಮಾತ್ರ ಇಲ್ಲಿ ಯಶಸ್ವಿ ಆಗುತ್ತಾರೆ ಅಂತಹವರನ್ನು ಗುರುತಿಸಿ ನಾವು ಪ್ರಚೋದಿಸಿ ಸನ್ಮಾನ ನೀಡಿದರೆ ಮತ್ತೆ ಇನ್ನು ಕೆಲವು ಜನರಿಗೆ ಇಂತಹ ಪ್ರೇರಣೆಗಳು ಸಿಗುವಂತೆ ಅವಕಾಶವನ್ನು ಕಲ್ಪಿಸಬೇಕೆಂದು ತಿಳಿಸಿದರು. 

ಮುಖ್ಯ ಅತಿಥಿಗಳಾಗಿ ಮಾತನಾಡಿದ ಡಾಕ್ಟರ್ ಮಹೇಶ್ ನಮ್ಮ ಸುತ್ತಮುತ್ತಲು ಅನೇಕ ಸಾಧಕರು ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಸಮಾಜದಲ್ಲಿ ಸಾಧನೆ ಮಾಡುವ ನಿವೃತ್ತ ಯೋಧರು ವೈದ್ಯರು ಶುಶ್ರೂಷಕರು ವೃತ್ತಿ ನಿರಂತರ ಕವಿಗಳು ಗುರುತಿಸಿ ಸಮಾಜಕ್ಕೆ ಸಾಧಕರ ಯಶೋಗಾಥೆಯನ್ನು ಪರಿಚಯಿಸುವ ಪ್ರಥಮ ಶಿಕ್ಷಣ ಸಂಸ್ಥೆಯ ಕಾರ್ಯಕ್ಕೆ ಶ್ಲಾಘನೆಯ ವ್ಯಕ್ತಪಡಿಸಿದರು.

ಡಾಕ್ಟರ್ ಬಿ ಟಿ ಸುಲೋಚನಮ್ಮ ಮಾತನಾಡುತ್ತಾ ಯಶಸ್ಸು ಸಾಧಕರ ಸ್ವತ್ತೆ ಹೊರತು ಸೋಮಾರಿಗಳ ಸತ್ತಲ್ಲ ರೋಗಿಗಳ ಪ್ರಾಣ ಉಳಿಸುವಲ್ಲಿ ಹಗಲು ರಾತ್ರಿ ಎನ್ನದೆ ಸೇವೆ ಸಲ್ಲಿಸುವ ವೈದ್ಯರು ನರ್ಸ್ಗಳ ಪಾತ್ರ ಸಮಾಜದಲ್ಲಿ ಅತ್ಯಮೂಲ್ಯವಾದದ್ದು ಅಂತಹ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ನಿಜಕ್ಕೂ ಸ್ವಾಗತ ಎಂದು ಗುಣಗಾನ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಚೆನ್ನಾಲಾದ್ರಿ ಅಧ್ಯಕ್ಷರಾದ ಮಂಜುನಾಥ್ ಭಗವತ ಮಾತನಾಡಿ ರೋಟರಿ ಶಿಕ್ಷಣ ಸಂಸ್ಥೆ ಮೊದಲಿನಿಂದಲೂ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದು ಪ್ರತಿಭೆಗಳನ್ನು  ಹೆಕ್ಕಿ ಹೊರ ತೆಗೆಯುವಲ್ಲಿ ಮುಂಚೂಣಿಯಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದರು. ಪ್ರಥಮ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮಹಾನ್ ಸಾಧಕರನ್ನು ಸಮಾಜಕ್ಕೆ ಪರಿಚಯಿಸುತ್ತಿದೆ ಎಂದು ತಿಳಿಸಿದರು.

ನಿವೃತ್ತ ಸೈನಿಕ ಜಯಣ್ಣ ಮಾತನಾಡುತ್ತಾ ನಿಸ್ವಾರ್ಥಕ್ಕಾಗಿ ದುಡಿಯುತ್ತಿರುವ ಗುರುತಿಸಿ ಸನ್ಮಾನಿಸುತ್ತಿರುವುದು ಉತ್ತಮ ಬೆಳವಣಿಗೆ ಇಂತಹ ಸಂಸ್ಥೆಗಳಿಗೆ ಬೇರೆಯವರು ಕೈಜೋಡಿಸಬೇಕೆಂದು ಮನವಿ ಮಾಡಿದರು ಡಾಕ್ಟರ್ ಮನೋಜ್ ಡಾಕ್ಟರ್ ಸಿದ್ದಲಿಂಗಪ್ಪ ಡಾಕ್ಟರ್ ಆಫ್ರೀತ್ ಡಾಕ್ಟರ್ ರಶ್ಮಿ ಇವರಿಗೆ ವೈದ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವೈದ್ಯಕೀಯ ಕ್ಷೇತ್ರದ 30 ಮಂದಿಗೆ ಸಾಧಕರಿಗೆ ಸೇವಾ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಉಪಾಧ್ಯಕ್ಷ ಗುರುಮೂರ್ತಿ, ಪ್ರಥಮ್ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ನಂಜುಂಡೇಶ್ವರ, ಖಜಾಂಚಿ ಸುಮಾ, ಬೆಸ್ಕಾಂ ಗುತ್ತಿಗೆದಾರ ಪ್ರಸನ್ನ, ಕೊಪ್ಪಳದ ಶಶಿಧರ್ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಚಂದ್ರಿಕಾ, ಅನಿತಾ, ದೀಪಿಕಾ ಮುಂತಾದವರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

Related Post

Leave a Reply

Your email address will not be published. Required fields are marked *