ನೆಲಮಂಗಲ : ಹೆಂಡತಿಯ ಕಾಟ ತಾಳಲಾರದೆ ಪತಿರಾಯ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.
ಹೆಂಡತಿಯು ಮೇಕಪ್ ಆಸೆ ಹಾಗೂ ಅತಿಯಾದ ಫೋನ್ ಬಳಕೆಯಿಂದ ಗಂಡ ಬೇಸತ್ತು ಹೋಗಿದ್ದು ಸಾಕಷ್ಟು ಬಾರಿ ಎಚ್ಚರಿಕೆ ನೀಡಿದರು ಹೆಂಡತಿ ಮಾತ್ರ ಮೇಕಪ್ ಮಾಡುವ ಮತ್ತು ಫೋನ್ ಬಳಸುವ ಶೋಕಿ ಕಮ್ಮಿಯಾಗಲಿಲ್ಲ ಇದರಿಂದಾಗಿ ಪತಿಯು ಮನನೊಂದು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.
ನೆಲಮಂಗಲ ತಾಲೂಕಿನ ತೊಣಚಿನ ಕೊಪ್ಪೆ ಗ್ರಾಮದಲ್ಲಿ ಘಟನೆ ಜರುಗಿದೆ ಲಾರಿ ಚಾಲಕ ಹುಸೈನ್ ಚೌದ್ರಿ ಎಂದು ಗುರುತಿಸಲಾಗಿದೆ ಅಸ್ಸಾಂ ಮೂಲದ ಲಾರಿ ಚಾಲಕ ಮದುವೆ ನಂತರ ತೋಣಚಿನ ಕೊಪ್ಪೆ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಗಂಡ ಹೆಂಡತಿ ನಡುವೆ ಸಾಕಷ್ಟು ಬಾರಿ ಗಲಾಟೆ ನಡೆದಿದ್ದು ಮನನೊಂದು ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.