ಬೆಂಗಳೂರು : ನಗರದ ಹೃದಯ ಭಾಗದಲ್ಲೇ ಬೆಚ್ಚಿ ಬಿಳಿಸುವ ಘಟನೆ ನಡೆದಿದ್ದು ಬೆಂಗಳೂರಿನ ಫ್ರೀಡಂ ಪಾರ್ಕ್ ಹಿಂಭಾಗದ ಕಸ ವಿಲೇವಾರಿ ಘಟಕದ ಬಳಿಯಲ್ಲೇ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಿರುವಂತಹ ಘಟನೆ ನಡೆದಿದೆ.
ಬೆಂಗಳೂರಿನ ಫ್ರೀಡಂ ಪಾರ್ಕ್ ಹಿಂಭಾಗದ ಗಾಂಧಿನಗರಕ್ಕೆ ಇರುವಂತೆ ಮುಖ್ಯ ರಸ್ತೆ ಯಲ್ಲಿ ಕಸ ವಿಲೇವಾರಿ ಘಟಕವಿದೆ ಅಲ್ಲಿ ವ್ಯಕ್ತಿ ಒಬ್ಬನ ಮೇಲೆ ಹಲ್ಲೆ ನಡೆಸಿ ಗಂಭೀರವಾಗಿ ಮರ್ಡರ್ ಮಾಡಿರುವ ಘಟನೆ ನಡೆದಿದೆ.
ಮಿಕ್ಕಿ ಎಂಬಾತನು ಫ್ರೀಡಂ ಪಾರ್ಕ್ ಹಿಂಭಾಗದಲ್ಲಿ ಕಸ ವಿಲ್ಲೇ ಮಾರಿ ಘಟಕದ ಬಳಿಯಲ್ಲೇ ಹಲ್ಲೆ ಮಾಡಿ ಹತ್ತಿಯರುವಂತಹ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿರುವುದು ತಿಳಿದು ಬಂದಿದೆ.
ಈ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಉಪ್ಪರ ಠಾಣೆಯ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಇದೀಗ ಮಿಕ್ಕೆ ಎಂಬ ತನ್ನ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಯ ಶವಗಾರಕೆ ರವಾನಿಸಲಾಗಿದೆ.