ವಿಜಯಪುರ : ರಾಜ್ಯದಲ್ಲಿ ಮೂಢನಂಬಿಕೆಗಳು ಇಂದಿಗೂ ಜೀವಂತವಾಗಿದೆ ಎಂಬುದಕ್ಕೆ ಉದಾಹರಣೆಯಾಗಿ ವಿಜಯಪುರದಲ್ಲಿ ನಿಷೇಧಿತ ಮೂಢನಂಬಿಕೆ ಆಚರಣೆ ಎಂದಿಗೂ ಇದೆ ಅದರಲ್ಲಿ ಅರ್ಚಕನೊಬ್ಬ ದೇಗುಲ ಮೇಲಿನಿಂದ ಮಗುವನ್ನು ಎಸೆದು ಹರಕೆ ತೀರಿಸಿದ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊಳೆ ಹೆಂಗರಕಿ ಗ್ರಾಮದಲ್ಲಿ ನಡೆದಿದೆ.
ದೇವಸ್ಥಾನದ ಅರ್ಚಕ ಕೂಸನ್ನು ದೇವಸ್ಥಾನದ ಮೇಲಿನಿಂದ ಎಸೆದಿದ್ದಾನೆ. ಮೇಲಿನಿಂದ ಎಸೆದ ಅಸುಗೂಸನ್ನು ಪೋಷಕರು ಕೆಳಗಡೆ ಕಂಬಳಿಯಲ್ಲಿ ಹಿಡಿದಿದ್ದಾರೆ ಸ್ವಲ್ಪ ಆಯ ತಪ್ಪಿದರೂ ಮಗುವಿನ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಇಲ್ಲದೆ ಇದ್ದರೆ ಇಂತಹ ಮೋಡ ನಂಬಿಕೆಗಳು ಆಚರಣೆಯಲ್ಲಿ ಜನರನ್ನು ಅರ್ಚಕರು ದಿಕ್ಕು ತಪ್ಪಿಸುತ್ತಿದ್ದಾರೆ.
ದೇವಸ್ಥಾನದ ಅರ್ಚಕ ಕಲ್ಮೇಶ್ ಕಟಗೇರಿ ದೇವಸ್ಥಾನದ ಮೇಲಿನಿಂದ ಮಗುವನ್ನು ಎಸೆದ ವಿಡಿಯೋ ಇದೀಗ ಬಾರಿ ವೈರಲ್ ಆಗುತ್ತಿದೆ ಅರ್ಚಕ ಕಲ್ಮೇಶ್ ತನ ಫೇಸ್ಬುಕ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದಾನೆ ಅರ್ಚಕ ಮಾಡಿದ ಮೋಡ ನಂಬಿಕೆಗೆ ಎಲ್ಲೆಡೆ ವಿರೋಧ ವ್ಯಕ್ತವಾಗಿದೆ.