ಉಡುಪಿ : ಹಂಬಲಪಾಡಿಯಲ್ಲಿ ಜುಲೈ 16 ರಂದು ಸೋಮವಾರ ಮನೆಗೆ ಬಿದ್ದ ಅಗ್ನಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಅಶ್ವಿನಿ ಶೆಟ್ಟಿ 50 ವರ್ಷ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಅಶ್ಮಿನಿ ಶೆಟ್ಟಿ ಅವರ ಉದ್ಯಮಿ ಪತಿ ರಮಾನಂದ ಶೆಟ್ಟಿಯವರು ಸೋಮವಾರ ಬೆಂಕಿ ಬಿದ್ದ ಹೊತ್ತಿನಲ್ಲಿ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.
ರಮಾನಂದ ಶೆಟ್ಟಿ ಹಾಗೂ ಅಶ್ವಿನಿ ಶೆಟ್ಟಿ 3 ಅಂತಸ್ತಿನ ಮನೆಯಲ್ಲಿ ಸೋಮವಾರ ಮುಂಜಾನೆ ಬೆಂಕಿ ಅವಘಡ ಸಂಭವಿಸಿದ್ದು ಮನೆಯಲ್ಲಿದ್ದ ವಸ್ತುಗಳು ಬಹುತೇಕ ಸುಟ್ಟು ಕರ್ಕಲಾಗಿತ್ತು. ಅಲ್ಲದೆ ರಮಾನಂದ ಹಾಗೂ ಅಶ್ವಿನಿ ಅವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ರಮಾನಂದ ಅವರು ಬಳಿಕ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದು ಅಶ್ವಿನಿ ಇಂದು ಅಸನಿಗಿದ್ದಾರೆ.
ಘಟನೆ ನಡೆದ ಬಾತ್ರೂಮ್ ನಲ್ಲಿ ಬಿದ್ದಿದ್ದ ಮಕ್ಕಳು ಹಂಸಿಜಾ (20) ಮತ್ತು ಅಭಿಷೇಕ್ (16) ವರ್ಷ ಇವರಿಬ್ಬರನ್ನು ರಕ್ಷಿಸಲಾಗಿತ್ತು ಮನೆಯಲ್ಲಿ ಅಳವಡಿಸಿದ್ದ ಸೆಂಟ್ರಲ್ ಎ.ಸಿ.ಯಿಂದಾಗಿ ಬೆಂಕಿ ಅವಘಡ ಸಂಭವಿಸಿದೆ. ಎಂದು ಮೇಲ್ನೋಟಕ್ಕೆ ವರದಿಯಾಗಿದೆ ಆದರೆ ನಿಖರ ಕಾರಣ ಇನ್ನಿಷ್ಟು ತಿಳಿಯಬೇಕಿದೆ.
ಅಶ್ವಿನಿ ಅವರು ಇನ್ಸ್ಟಾಲ್ನದಲ್ಲಿ caboose ballals ಎನ್ನುವ ಪೇಜ್ ನಿಂದ ಜನಪ್ರಿಯವಾಗಿದ್ದು ಸುಮಾರು 90 ಸಾವಿರಕ್ಕೂ ಹೆಚ್ಚು ಫಾಲವರ್ಸ್ ಗಳನ್ನು ಹೊಂದಿದ್ದಾರೆ ಆಚಾರ ವಿಚಾರಗಳಿಗೆ ಸಂಬಂಧಿಸಿದ ವಿಚಾರ ವಿಡಿಯೋ ಮಾಡಿ ಅವರು ಪೋಸ್ಟ್ಗಳನ್ನು ಮಾಡುತ್ತಿದ್ದರು. ಅಲ್ಲದೆ ದಂಪತಿಗಳಿಬ್ಬರು ಸಾಮಾಜಿಕ ಕಾರ್ಯಗಳಲ್ಲೂ ಹೆಚ್ಚು ಸಕ್ರಿಯರಾಗಿದ್ದರು. ಸುಂದರ ಕುಟುಂಬ ದುರಂತ ಅಂತ್ಯ ಕಂಡಿದ್ದು ಇಬ್ಬರು ಮಕ್ಕಳು ಅನಾಥರಾಗಿರುವುದಕ್ಕೆ ಜೀವಂತ ಸಾಕ್ಷಿಯಾಗಿದೆ.