ಬೆಂಗಳೂರು : ವಿಧಾನಸೌಧದಲ್ಲಿ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಭಾವುಕರಾಗಿ ನಡೆದಿದ್ದಾರೆ. ನನ್ನ ಮಗ ಪ್ರಜ್ವಲ್ ತಪ್ಪು ಮಾಡಿದರೆ ಆತ ನನ್ನು ಗಲ್ಲಿಗೇರಿಸಿ ಎಂದು ತಿಳಿಸಿದರು. ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಾಲ್ಮೀಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ನಿಯಮ 69ರ ಅಡಿಯಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಎಚ್ ಡಿ ರೇವಣ್ಣ ಹಾಗೂ ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಕೆಲಸ ಮಾಡಲಾಯಿತು ಆದರೆ ವಾಲ್ಮೀಕಿ ಹಗರಣದಲ್ಲಿ ಆರೋಪ ಎದುರಿಸುತ್ತಿರುವವರ ವಿರುದ್ಧ ಅಷ್ಟೇ ಆಸಕ್ತಿ ಇಲಾಖೆ ಸದಸ್ಯ ಪ್ರಜ್ವಲ್ ಹರ್ಷದ್ ಎರಡು ಪ್ರಕರಣಗಳನ್ನು ಹೋಲಿಕೆ ಮಾಡುವುದು ಸರಿಯಲ್ಲ.
ರೇವಣ್ಣ ಪ್ರಕರಣದಲ್ಲಿ ಮಹಿಳೆಯರ ಮಾನ ಹರಾಜು ಆಗಿದೆ ಇದರ ವಿರುದ್ಧ ಕ್ರಮ ಆಗಬಾರದು ? ರೇವಣ್ಣ ಪ್ರಕರಣ ಗಂಭೀರ ಅಲ್ವಾ ? ಎರಡು ಪ್ರಕರಣ ಹೋಲಿಕೆ ಮಾಡುವುದು ಸರಿಯಲ್ಲ ಎಂದು ರಿಜ್ವಾನ್ ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್ ಸದಸ್ಯ ನಾರಾಯಣಸ್ವಾಮಿ ಹಣ ಹೋಗಿದೆ ಹಣ ಬರುತ್ತೆ ಆದರೆ ಮಾನ ಹೋದರೆ ವಾಪಸ್ ಬರುತ್ತಾ ಹೆಣ್ಣುಮಕ್ಕಳ ಮಾನ ಕಾಪಾಡುವುದು ಯಾರು ಎಂದು ಪ್ರಶ್ನಿಸಿದರು.
ಈ ವೇಳೆ ಹೆಚ್ ಡಿ ರೇವಣ್ಣ ಭಾವುಕರಾಗಿ ಮಾತನಾಡಿ ನಿಮ್ಮ ಬಂಡವಾಳ ಏನಂತ ಗೊತ್ತಿದೆ ನನ್ನ ಮಗ ತಪ್ಪು ಮಾಡಿದ್ದಾರೆ ಆತನನ್ನು ಗಲ್ಲಿಗೆ ಹಾಕಿ ನನ್ನ ಮೇಲೆ ಯಾರೋ ಹೆಣ್ಣು ಮಕ್ಕಳನ್ನು ಕರೆಸಿ, ಡಿಜಿ ಕಚೇರಿಯಲ್ಲಿ ದೂರು ಬರೆಸಿಕೊಳ್ಳುತ್ತಿದ್ದಾರೆ. ಆತ ಡಿಜಿ ಆಗಲು ಯೋಗ್ಯನಾ ಅವನು ಇದು ನೀಚ ಕೆಟ್ಟ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಇದಕ್ಕೆ ತೀರ್ವ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು ಪ್ರಜ್ವಲ್ ಮಾಡಿದ್ದು ಸರಿನಾ ತೆಗೆದುಕೊಳ್ಳುವುದು ತಪ್ಪಾ ಎಂದು ಪ್ರಶ್ನಿಸಿದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಡಿಸಿಎಂ ಡಿಕೆ ಶಿವಕುಮಾರ್ ಅಧಿಕಾರಗಳ ಬಗ್ಗೆ ಆರೋಪ ಮಾಡಿದ್ದಾರೆ ಅನ್ಯಾಯ ಆದರೆ ನೋಟಿಸ್ ಕೊಟ್ಟು ಚರ್ಚೆ ಮಾಡ್ಲಿ ಎಂದರು.
ಅಲ್ಲದೆ ಎಸ್ಐಟಿಯನ್ನು ಸಿದ್ದರಾಮಯ್ಯ ಡಿ.ಕೆ.ಶಿ ತನಿಖಾ ತಂಡ ಎಂದು ಸುರೇಶ್ ಕುಮಾರ್ ಹೇಳಿಕೆಗೆ ಅಪೇಕ್ಷ ವ್ಯಕ್ತಪಡಿಸಿದೆ ಕಾನೂನು ಏನು ಎಂದು ನನಗೆ ಗೊತ್ತಿದೆ ಎಸ್ಐಟಿಯನ್ನು ಸಿದ್ದರಾಮಯ್ಯ ಡಿಕೆಶಿ ತನಿಕ ಸಂಸ್ಥೆ ಎಂದು ಕರೆಸಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.