ಚಿತ್ರದುರ್ಗ : ನ ಗರದ ಹೊರವಲಯದ ಮೆದೆಹಳ್ಳಿಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮೇಲೆ ಪೊಲೀಸರು ದಿಡೀರ್ ದಾಳಿ ನಡೆಸಿ ಮಹಿಳೆ ಸೇರಿ ಆರು ಜನರನ್ನು ರಕ್ಷಣೆ ಮಾಡಿದ್ದಾರೆ.
ಈ ದಂಧೆಯಲ್ಲಿ ಕಿಂಗ್ ಪಿನ್ ಆಗಿದ್ದ ರಫೀ ಉಲ್ಲ ಮತ್ತು ಅಪ್ಸದ್ ಬಂಧಿತ ಆರೋಪಿ ಮತ್ತೋರ್ವ ಆರೋಪಿ ನೀಲು ಫಾರನ್ ಸದ್ಯ ಪರಾರಿಯಾಗಿದ್ದಾನೆ.
ಇವರು ಮೆದೆಹಳ್ಳಿಯಲ್ಲಿ ಬಾಡಿಗೆ ಮನೆಯನ್ನು ತೆಗೆದುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ. ಎಂಬುದು ಖಚಿತ ಮಾಹಿತಿ ಪಡೆದ ಮಹಿಳಾ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ವೆಂಕಟೇಶ್ ನೇತೃತ್ವದ ಪೊಲೀಸರ ತಂಡವನ್ನು ಪತ್ತೆ ಹಚ್ಚಿದ್ದಾರೆ.
ಇದರಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಈ ದಾಳಿಯಿಂದ ಪಶ್ಚಿಮ ಬಂಗಾಳದ ಮಹಿಳೆ ಸೇರಿದಂತೆ ಆರು ಮಂದಿಯನ್ನು ರಕ್ಷಿಸಲಾಗಿದೆ.