Breaking
Wed. Dec 25th, 2024

ಹೈದರಾಬಾದ್ ಮೂಲದ ದುರ್ಗಾ ಪ್ರಸಾದ್ ಚಿನ್ನದ ನಾಣ್ಯಗಳನ್ನು ಕಡಿಮೆ ಬೆಲೆಗೆ ಕೊಡುವುದಾಗಿ ನಂಬಿಸಿ 54 ಲಕ್ಷ ವಂಚನೆ….!

ಚಿತ್ರದುರ್ಗ ‌: ಹೈದರಾಬಾದ್ ಮೂಲದ ದುರ್ಗಾ ಪ್ರಸಾದ್ ಚಿನ್ನದ ನಾಣ್ಯಗಳನ್ನು ಕಡಿಮೆ ಬೆಲೆಗೆ ಕೊಡುವುದಾಗಿ ನಂಬಿಸಿ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಮೂವರು ಆರೋಪಿಗಳಿಂದ 47 ಲಕ್ಷ ಗಳನ್ನು ವಶಪಡಿಸಿರುವ ಘಟನೆ ನಡೆದಿದೆ.  ಪರಶುರಾಮ್ ರುದ್ರಪ್ಪ ಮತ್ತು ಧರ್ಮಪ್ಪ ಬಂದಿತ ಆರೋಪಿಗಳು ಇನ್ನುಳಿದ ಆರೋಪಿಗಳನ್ನು ಪತ್ತೆಹಚ್ಚಲು ಕಾರ್ಯಚರಣೆ ಮುಂದುವರೆದಿದೆ. 

ತೆಲಂಗಾಣದ ಹೈದರಾಬಾದ್ ಸಮೀಪ ತಿರುಮಲಾಗಿರಿ ನಿವಾಸಿಯಾದ ದುರ್ಗ ಪ್ರಸಾದ್ ಎಂಬುವರಿಗೆ ರಮೇಶ್ ಮತ್ತು ಇತರರು ಫೋನ್ ಮೂಲಕ ಪರಿಚಯ ಮಾಡಿಕೊಂಡು ಮನೆ ಕಟ್ಟಲು ಪಾಯ ತೆಗೆಯುವಾಗ ನನಗೆ ಸುಮಾರು 2 ಕೆ.ಜಿಗಳಷ್ಟು ಹಳೆಯ ಚಿನ್ನದ ನಾಣ್ಯಗಳು ದೊರೆತಿದ್ದು ನೀವು ನಿಮಗೆ ಪರಿಚಯಸ್ತರು ಇರುವುದರಿಂದ ನಿಮಗೆ ಕಡಿಮೆ ಬೆಲೆಗೆ ಕೊಡುತ್ತೇನೆ.

ಈ ವಿಷಯವನ್ನು ಯಾರ ಬಳಿಯೂ ಹೇಳಬೇಡಿ ಎಂದು ದುರ್ಗ ಪ್ರಸಾದ್ ಹೇಳಿ ಅವರನ್ನು ಹೊಳಲ್ಕೆರೆ ತಾಲೂಕು ದಂಡಿಗನಹಳ್ಳಿ  ಗ್ರಾಮದಿಂದ ಮುಂದೆ ಸಂತ ಬೆನ್ನೂರ್ ಗ್ರಾಮದ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಮಾವಿನ ತೋಟಕ್ಕೆ ಬಂದು ಆರೋಪಿತರಿಗೆ ನೀಡಿರುತ್ತಾರೆ ಮೊದಲು ಒಂದು ಅಸಲಿ ಚಿನ್ನದ ನಾಣ್ಯ ವನ್ನು ಕೊಟ್ಟು ಪರೀಕ್ಷಿಸುವಂತೆ ತಿಳಿಸಿದ್ದಾರೆ ನಂತರ ದುರ್ಗಾ ಪ್ರಸಾದ್ ಅವರು ಅದನ್ನು ತಮ್ಮ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ತಾವು ತೆಗೆದುಕೊಂಡ ಹೋದ ನಾಣ್ಯವನ್ನು ಪರೀಕ್ಷಿಸಿದಾಗ ನಾಣ್ಯ  ಅಸಲಿ ಆಗಿರುತ್ತದೆ ಎಂದು ನಂಬಿ 54 ಲಕ್ಷ ಹಣವನ್ನು ಆರೋಪಿಗೆ ನೀಡಿರುತ್ತಾರೆ.

ನಂತರ ಆರೋಪಿಗಳು ಜನರು ಓಡಾಡುತ್ತಿದ್ದಾರೆ ಇದರಿಂದ ಚಿನ್ನದ ನಾಣ್ಯಗಳು ಇಲ್ಲಿಯೇ ಪಕ್ಕದಲ್ಲಿ ಇಟ್ಟಿದ್ದು ತಂದುಕೊಡುತ್ತೇವೆ ಎಂದು ಹೇಳಿ ಹಣ ಪಡೆದವರು ಮರಳಿ ಬರುವುದಿಲ್ಲ. ಈ ವಿಚಾರ ಸಂಬಂಧಿಸಿಿದತೆ ದುರ್ಗಾ ಪ್ರಸಾದ್ ಅವರು ಒಳಲ್ಕೆರೆ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.

ಈ ದೂರಿನ ಆಧಾರದ ಮೇಲೆ ಪೊಲೀಸ್ ಅಧೀಕ್ಷಕರ ಮಾರ್ಗ ದರ್ಶನದಲ್ಲಿ ಹೊಳಲ್ಕೆರೆ ವೃತ ನಿರೀಕ್ಷಕರಾದ ಎಂ.ಬಿ ಚಿಕ್ಕಣ್ಣನವರ್ , ಚಿಕ್ಕಜಾಜೂರ್ ಪೊಲೀಸ್ ಠಾಣೆಯ ಮಹಿಳಾ ಪಿಎಸ್ಐ ಶ್ರೀಮತಿ ದೀಪು, ಪಿಎಸ್ಐ ಸಚಿನ್ ಪಾಟೀಲ್, ಸಿಬ್ಬಂದಿಗಳಾದ ರುದ್ರೇಶ್, ಗಿರೀಶ್, ಕುಮಾರಸ್ವಾಮಿ, ಕಿರಣ್, ಸಿದ್ದಲಿಂಗೇಶ್ವರ, ಕಿರಣ್ ಕುಮಾರ್, ಮಲ್ಲೇಶ್, ರವಿಕುಮಾರ್, ಕುಮಾರಸ್ವಾಮಿ, ಯೋಗೇಶ್ ರವರಗಳ ತಂಡ ಆರೋಪಿಗಳ ಪತ್ತೆಗೆ ಬಲೆ ಬೀಸುತ್ತಾರೆ.

ಕಾರ್ಯಾಚರಣೆ  ಆರಂಭಿಸಿದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ವಿಚಾರಣೆಗೆ ಒಳಪಡಿಸಿದಾಗ ತಾವು ಮೋಸದಿಂದ ಪಡೆದ ಹಣದಲ್ಲಿ 6,82,000 ರೂಂ ಹಣವನ್ನು ಐದು ಜನರು ಹಂಚಿಕೊಂಡು ಖರ್ಚು ಮಾಡಿದ್ದು ಉಳಿದ 47,18,000 ರೂ ಹಣವನ್ನು ಮುಂದಿನ ದಿನಗಳಲ್ಲಿ ಎಲ್ಲಾ ಸೇರಿ ಹಂಚಿಕೊಳ್ಳುವ ಉದ್ದೇಶದಿಂದ ಸಂತೆಬೆನ್ನೂರು ವ್ಯಾಪ್ತಿಯಲ್ಲಿರುವ ದೊಡ್ಡಬ್ಬಿಗೆರೆ ಗ್ರಾಮದ ಸಮೀಪದ ತೋಟದ ಮನೆಯಲ್ಲಿ ಬಚ್ಚಿಟ್ಟಿರುವುದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ. ಚಿಕ್ಕ ಜಾಜುರು ಪೊಲೀಸರ ಯಶಸ್ವಿ ಕಾರ್ಯಾಚರಣೆಕ್ಕೆ ಪೊಲೀಸ್ ಅಧೀಕ್ಷಕರು ಶ್ಲಾಘನೀಯ ವ್ಯಕ್ತಪಡಿಸಿದ್ದಾರೆ. 

Related Post

Leave a Reply

Your email address will not be published. Required fields are marked *