ಮುಂಬೈ : ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ನ ಹಾವಳಿ ಹೆಚ್ಚಾಗಿದ್ದು, ಇದರಿಂದ ಖ್ಯಾತಿ ಪಡೆಯಬೇಕೆಂಬ ಆಸೆಯನ್ನು ಇಟ್ಟುಕೊಂಡು ಮುಂಬೈ ಮೂಲದ ಚಾರ್ಟೆಡ್ ಅಕೌಂಟೆಂಟ್ ಅನ್ವಿ ಕಾಮ್ದಾರ್ ವಿಡಿಯೋ ಮಾಡುವ ಸಂದರ್ಭದಲ್ಲಿ ರಾಯಗಡದ ಜಲಪಾತದ ಕಂದಕಕ್ಕೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಅನ್ವಿ ತಮ್ಮ ಸ್ನೇಹಿತರ ಜೊತೆ ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಮಂಗವನ್ನ ಪ್ರಸಿದ್ಧ ಕೊಂಬೆ ಜಲಪಾತ ವೀಕ್ಷಣೆಗೆ ತೆರಳಿದರು ಈ ಸಂದರ್ಭದಲ್ಲಿ ರ್ರೀಲ್ಸ್ ಮಾಡುತ್ತಿದ್ದ ಅನ್ವಿ ಆಯತಪ್ಪಿ ಜಲಪಾತದ ಕೆಳಗೆ ಬಿದ್ದಿದ್ದಾರೆ. ಹೆಚ್ಚು ಮಳೆ ಇರುವುದರಿಂದ ಜಲಪಾತ ವೀಕ್ಷಣೆಗೆ ಬಂದಿದ್ದ ಅನ್ವಿ, ಅಲ್ಲಿನ ಸುತ್ತಮುತ್ತಲಿನ ಪರಿಸರದ ವಿಡಿಯೋ ಮಾಡುತ್ತಿದ್ದರು.
ಈ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದ್ದು ಕೆಲ ಹೊತ್ತಿನಲ್ಲಿ ಪೊಲೀಸರು ಸ್ಥಳಕ್ಕೆ ಬಂದು ಸ್ಥಳ ಮಾಜೂರಿ ಮಾಡಿದ್ದಾರೆ ಅನ್ವಯವರು ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿದರು ಸಹ ಚಿಕಿತ್ಸೆ ಫಲಕಾರಿಯಾಗದೆ ಅನ್ವಿ ಸಾವನ್ನಪ್ಪಿದ್ದಾರೆ ರೀಲ್ಸ್ ಮಾಡುವ ಹುಚ್ಚಿದ್ದ ಯುವತಿಗೆ ಪ್ರಾಣ ಕಳೆದುಕೊಂಡಿದ್ದು ಮಾತ್ರ ವಿಪರ್ಯಾಸವೇ ಸರಿ.
ಸಾರ್ವಜನಿಕರಿಗೆ ಸೂಚನೆ : ಪ್ರತಿಯೊಬ್ಬ ಜನರು ಪ್ರವಾಸಿ ತಾಣಕ್ಕೆ ಅಲ್ಲಿನ ಸೌಂದರ್ಯವನ್ನು ಸವಿಯೋದಕ್ಕೆ ಬರುತ್ತಾರೆ. ಇಂತಹ ಸ್ಥಳದಲ್ಲಿ ಹೆಚ್ಚು ಜಾಗರೂಕತಯಿಂದ ಇರಬೇಕು. ತಮ್ಮ ಪ್ರಾಣಕ್ಕೆ ತಾವೇ ಜವಾಬ್ದಾರಿ ಯಾಗಿರುತ್ತಾರೆ. ಆದರೆ ನಾವು ಯಾವುದೇ ಸ್ಥಳದಲ್ಲಿ ಹೋದರು ಆ ಸ್ಥಳದ ಬಗ್ಗೆ ನಮಗೆ ಅರಿವೇ ಇರುವುದಿಲ್ಲ. ಆದ್ದರಿಂದ ಸಾರ್ವಜನಿಕರು ಕೆಲವು ಕಹಿ ಘಟನೆಗಳನ್ನು ನೋಡಿದ್ದೀರಿ ತಿಳಿದಿದ್ದೀರಿ ಆದರೂ ಯಾಕೆ ಮತ್ತೆ ಮತ್ತೆ ಇಂತಹ ತಪ್ಪುಗಳನ್ನು ಮಾಡುತ್ತಿದ್ದೀರಾ ದಯವಿಟ್ಟು ನಿಮ್ಮ ಪ್ರಾಣ ನಿಮ್ಮ ಕೈಯಲ್ಲಿ ಪ್ರತಿಯೊಬ್ಬರು ಜಾಗರೂಕತೆ ವಹಿಸಲೇಬೇಕು ಎಂದು ಆವಿಷ್ಕಾರ ನ್ಯೂಸ್ ಆಶಯ