Breaking
Wed. Dec 25th, 2024

ಬೋವಿ ಗುರುಪೀಠದ ಪೀಠ ಅಧ್ಯಕ್ಷರಾದ ಇಮ್ಮಡಿ ಸಿದ್ದರಾಮಯ್ಯ ಅವರ ದೀಕ್ಷಾ ರಜತ ಮಹೋತ್ಸವ ಸಮಾರಂಭ ಕಾರ್ಯಕ್ರಮ ಸಭೆ…..!

ಚಿತ್ರದುರ್ಗ : ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ ಬೋವಿ ಗುರುಪೀಠದ ಪೀಠ ಅಧ್ಯಕ್ಷರಾದ ಇಮ್ಮಡಿ ಸಿದ್ದರಾಮಯ್ಯ ಅವರ ದೀಕ್ಷಾ ರಜತ ಮಹೋತ್ಸವವನ್ನು ಜುಲೈ 20ರಂದು ನಗರದ ಹೊರವಲಯದಲ್ಲಿರುವ ಬೋವಿ ಮಠದಲ್ಲಿ ನಡೆಸಲಾಗುವುದೆಂದು ಭೋವಿ ಸಮುದಾಯದ ಮುಖಂಡರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ, ನೆರಳುಗುಂಟೆ ರಾಮಪ್ಪ ಸಭೆಯಲ್ಲಿ ತಿಳಿಸಿದರು.

ಬೋವಿ ಗುರುಪೀಠದಲ್ಲಿ ಸುದ್ದಿಗೋಷ್ಠಿಯೊಂದಿಗೆ ಮಾತನಾಡಿ ಅವರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಚಿವ ಶಿವರಾಜ್ ತಂಗಡಗಿ ಬಿಜೆಪಿ ಕಾಂಗ್ರೆಸ್ ಶಾಸಕರು ರಾಜ್ಯದ ನಾನಾ ಭಾಗಗಳಿಂದ ಬೋವಿ ಸಮುದಾಯದ ಮುಖಂಡರು ಆಗಮಿಸಲಿದ್ದಾರೆ ಸಾಲುಮರದ ತಿಮ್ಮಕ್ಕನವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ವಧು ವರರ ಅನ್ವೇಷಣೆ ರಥದನ ಶಿಬಿರ ಪ್ರತಿಭಾ ಪುರಸ್ಕಾರ ಐಎಎಸ್ ಐಪಿಎಸ್ ಮಾಡಿರುವ ಬೋವಿ ಜನಾಂಗದವರಿಗೆ ಸನ್ಮಾನ ಭೋವಿ ಅಭಿವೃದ್ಧಿ ನಿಗಮಕ್ಕೆ ನೇಮಕಗೊಂಡಿರುವ ರವಿಕುಮಾರ್ ಹಾಗೂ ಕೆಪಿಎಸ್ಸಿ ಸದಸ್ಯರಾಗಿರುವವರನ್ನು  ಸನ್ಮಾನಿಸಲಾಗುವುದೆಂದು ತಿಳಿಸಿದರು.

ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಗಳು ನಾಡಿನಾದ್ಯಂತ ಸಂಚರಿಸಿ ಭೋವಿ ಜನಾಂಗವನ್ನು ಆಹ್ವಾನಿಸಿದ್ದಾರೆ ಬೋವಿ ಜನೋತ್ಸವ ಹೆಸರಿನಲ್ಲಿ ಆಚರಿಸಿತ್ತಿದ್ದು ಬೋಬಿ ಸಮಾಜ ಜಾಗೃತರಾಗಿ ಸಂಘಟನೆಯಲ್ಲಿ ತೊಡಗುತಿದೆ ಎನ್ನುವುದು ಎಲ್ಲಾ ಪಕ್ಷಗಳಿಗೂ ಎಚ್ಚರಿಕೆಯನ್ನು ನೀಡುತ್ತಿದೆ ಎಂದರು.

ಬೋವಿ ಸಮಾಜದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ ಇಮ್ಮಡಿ ಸಿದ್ದರಾಮಯ್ಯಶ್ವರ ಸ್ವಾಮೀಜಿಗಳು ಪೀಠಾಧ್ಯಕ್ಷರಾಗಿ 25 ವರ್ಷಗಳಾಗಿರುವುದರಿಂದ ದೀಕ್ಷಾ ರಜತ ಮಹೋತ್ಸವ ಆಚರಿಸುತ್ತಿದ್ದೇವೆ ರಾಜ್ಯದಲ್ಲಿ 35 ಲಕ್ಷದಷ್ಟು ಜನಸಂಖ್ಯೆ ಇದ್ದು ಸಂಘಟನೆ ಯಾಗಿರುವುದು ಇದರ ಉದ್ದೇಶ ಜನಾಂಗೋಲನ ರೂಪದಲ್ಲಿ ಆಚರಿಸುತ್ತಿರುವ ಕಾರ್ಯಕ್ರಮಕ್ಕೆ ಪಕ್ಷತೀತವಾಗಿ ಎಲ್ಲರನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದರು.

ಭೋವಿ ಸಮಾಜದ ನಿಗಟಪೋರ್ವ ಅಧ್ಯಕ್ಷರಾದ ಡಿ ತಿಮ್ಮಣ್ಣ ಮಾತನಾಡಿ 1982 ರಲ್ಲಿ ಭೋವಿ ಸಮಾಜ ಅಷ್ಟೊಂದು ಸಂಘಟಿತವಾಗಿರಲಿಲ್ಲ ನಮ್ಮ ಸಮಾಜಕ್ಕೆ ಮಂಜರಿ ಹನುಮಂತಪ್ಪನವರು ಕೊಡುಗೆಯಿಂದ ಸಮಾಜವನ್ನು ಸಂಘಟಿಸುವ ಉದ್ದೇಶದಿಂದ ಇಮ್ಮಡಿ ಸಿದ್ದರಾಮಯ್ಯ ಸ್ವರ ಸ್ವಾಮೀಜಿಯವರಿಗೆ ದೀಕ್ಷ ರಜತಾ ಮಹೋತ್ಸವ ಆಚರಿಸಲಾಗುವುದು ಎಂದು ತಿಳಿಸಿದರು. ಭೋವಿ ಸಮಾಜದ ಮುಖಂಡರಾದ ತಿಪ್ಪೇಸ್ವಾಮಿ ಈ ಮಂಜುನಾಥ್ ಎಚ್ ಲಕ್ಷ್ಮಣ್ ಗೌನೇಹಳ್ಳಿ ಗೋವಿಂದಪ್ಪ ಮುಂತಾದವರು ಪತ್ರಿಕಾಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related Post

Leave a Reply

Your email address will not be published. Required fields are marked *