Breaking
Wed. Dec 25th, 2024

ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿ ಆಚರಿಸಿದ ಮೊಹರಂ ಕಡೆ ದಿನ…!

ಚಿತ್ರದುರ್ಗ : ಹಿಂದೂ ಮುಸ್ಲಿಂ ಕೋಡಿಕೊಂಡು ಬಾವೇಕ್ಯತೆಯ ಸಂಕೇತವಾಗಿ ಆಚರಿಸುವ ಮೊಹರಂ ಹಬ್ಬವನ್ನು ನಗರದ ಪ್ರಮುಖ ಬೀದಿಗಳಲ್ಲಿ ಯಾವುದೇ ಜಾತಿ ಧರ್ಮದ ಕಟ್ಟುಪಾಡುಗಳಿಲ್ಲದೆ  ಅದ್ದೂರಿಯಾಗಿ ಮೆರವಣಿಗೆ ನಡೆಸಿದರು.

ದುಃಖ ಬಲಿದಾನ ಶೋಕಾಚರಣೆಯ ದಿನವಾಗಿ ಆಚರಿಸುವ ಮೊಹರಂ ಹಬ್ಬದಲ್ಲಿ ದೇಹಕ್ಕೆ ಗಾಯ ಮಾಡಿಕೊಳ್ಳುವ ಸಂಪದಾಯ ಹಲವಡೆ ಈಗಲೂ ಇದೆ ಅದಕ್ಕಾಗಿಯೇ ಮೊಹರಂ ಹಬ್ಬಕ್ಕೆ ತನ್ನದೇ ಆದ ಮಹತ್ವವಿದೆ ಒಂಬತ್ತು ದಿನಗಳ ಕಾಲ ಆಚರಿಸುವ ಮೊಹರಂ ಹಬ್ಬದ ಕೊನೆ ದಿನದಲ್ಲಿ ಪಂಜಿನ ಮೆರವಣಿಗೆ ಮಾಡುತ್ತಾ ಉಪವಾಸ ಆಚರಿಸುವ ಸಂಕಲ್ಪ ಮಾಡುವುದು ಈ ಹಬ್ಬದ ವಿಶೇಷತೆ. ಚಿತ್ರದುರ್ಗದ ಚೈಲ್ಡ್ಗುಡ್ಡ, ಭುಜನ್ಹಟ್ಟಿ, ಮಠದ ಕುರುಬರಹಟ್ಟಿ ಮುಖಾಂತರ ಮೆರವಣಿಗೆಯ ಮೂಲಕ ಬಂದ ಪಂಜೆಗಳು ಸೈಯದ್ ನಾ, ಹಾಜರತ್ ಹಿಂ ಹಸಾ  ಸೈದಾನ ಹಜರತ್ ಹಿಮಾಮ್ ಹುಸೇನ್ ಅಶೋಕನ್ ಇವರ ದರ್ಗಾದ ಬಳಿ ತೆರಳಿ ಪೂಜೆ ಸಲ್ಲಿಸಿದರು.

ಗಾಂಧಿ ವೃತದಿಂದ ಹಿಡಿದು ದೊಡ್ಡಪೇಟೆಯವರೆಗೆ ರಸ್ತೆಯ ಎರಡು ಬದಿಯಲ್ಲಿ ಇಂದು ಮುಸ್ಲಿಮರು ಜಮಾಯಿಸಿ ಮೆರವಣಿಗೆ ವೀಕ್ಷಿಸಿದರು ಮೆರವಣಿಗೆ ಇದ್ದಕ್ಕೂ ಅಲ್ಲಲ್ಲಿ ಗುಂಪು ಗುಂಪಾಗಿ ಜಮಾಯಿಸಿದ ಯುವಕರು ಡೊಳ್ಳು ತಮಟೆಗಳನ್ನು ಬಾರಿಸಿ ಕೊನೆದು ಕುಪ್ಪಳಿಸುತ್ತಿರುವುದು ಕಂಡುಬಂದಿತು.

ಬೃಹದಾಕಾರದ ಹಾರ ಹೂ ಮತ್ತು ಸುನೇರಗಳಿಂದ ಅಲಂಕರಿಸಿದ ಪಂಜಗಳ ಮೇಲೆ ಜನ ಮಂಡಕ್ಕಿ ತೋರಿ ಭತ್ತೆ ಸಮರ್ಪಿಸಿದ್ದಾರೆ ಇನ್ನೂ ಕೆಲವಾರು ಕೆಳಗೆ ಬಿದ್ದಿದ್ದ ಮಂಡಕ್ಕಿಯನ್ನು ಆಯ್ದುಕೊಳ್ಳುತ್ತಿದ್ದು ಮೊಹರಂ ಹಬ್ಬದ ವಿಶೇಷವಾಗಿತ್ತು ದರ್ಗಾ ಕೆರಳಿದ ಭಕ್ತರು ತಲೆಯ ಮೇಲೆ ನವಿಲುಗರೆಯನ್ನು ಮುಟ್ಟಿಸಲಾಗುತ್ತಿತ್ತು. ದೊಡ್ಡಪೇಟೆ ಹಾಗೂ ಗಾಂಧಿ ವೃತದಲ್ಲಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.

Related Post

Leave a Reply

Your email address will not be published. Required fields are marked *