ನವ ದೆಹಲಿ : ಕರ್ನಾಟಕ ಕೊಬ್ಬರಿ ಬೆಳೆಗಾರರಿಗೆ ಮೋದಿ ಸರ್ಕಾರ ಗುಡ್ ನ್ಯೂಸ್ ಮೇಲಿದೆ ಹೆಚ್ಚುವರಿಯಾಗಿ 7500 ಮೆಟ್ರಿಕ್ ಟನ್ ಕೊಬ್ಬರಿ ಖರೀದಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಈ ವರ್ಷದಲ್ಲಿ 2999 ಖರೀದಿಸಲಾಗುತ್ತಿತ್ತು.
ಆದರೆ ಹೆಚ್ಚುವರಿ ಖರೀದಿಸುವಂತೆ ಕೇಂದ್ರ ಸಚಿವ ಸೋಮಣ್ಣ ಅವರ ಸರ್ಕಾರಕ್ಕೆ ಮನವಿ ಮಾಡಿದರು ಇದಕ್ಕೆ ಸ್ಪಂದಿಸಿದ ಕೇಂದ್ರ ಸರ್ಕಾರ 2024ನೇ ಸಾಲಿನಲ್ಲಿ ಒಟ್ಟು 10500 ಮೆಟ್ರಿಕ್ ಟನ್ ಕೊಬ್ಬರಿ ಖರೀದಿಸಲು ಒಪ್ಪಿಗೆ ಸೂಚಿಸಿದೆ ಇದರಿಂದ ಮಂಡ್ಯ ಹಾಸನ ತುಮಕೂರು ದಕ್ಷಿಣ ಕನ್ನಡ ರಾಮನಗರ ಜಿಲ್ಲೆಗಳ ರೈತರಿಗೆ ಅನುಕೂಲವಾಗಲಿದೆ ಎಂದರು.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ರೈಲ್ವೆ ರಾಜ್ಯ ಖಾತೆ ಸಚಿವ ಸೋಮಣ್ಣ ಅವರು ತಮ್ಮ ಮನವಿಗೆ ತಕ್ಷಣವೇ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಧನ್ಯವಾದ ತಿಳಿಸಿದರು.
ಕಳೆದ ವರ್ಷ ಡಿಸೆಂಬರ್ ನಲ್ಲಿ ಪ್ರತಿ ಕ್ವಿಂಟಲ್ ಗೆ 12,000 ಬೆಂಬಲ ಬೆಲೆಗಿಂತ 62500 ಮೆಟ್ರಿಕ್ ಟನ್ ಉಂಡೇ ಕೊಬ್ಬರಿ ಖರೀದಿಸಲು ಕೇಂದ್ರ ಸರ್ಕಾರ ಆದೇಶಿಸಿತ್ತು. ಇದಕ್ಕೆ ರಾಜ್ಯ ಸರ್ಕಾರ 1500 ರೂ. ಪ್ರೋತ್ಸಾಹ ಧನ ಪ್ರಕಟಿಸಿತು.
ನಾಪೇಡ್ ಮೂಲಕ ಜ 20 ರಂದು ಖರೀದಿ ಪ್ರಕ್ರಿಯೆ ಆರಂಭಿಸಿ ಬಯೋಮೆಟ್ರಿಕ್ ಕಾರಣವೊಡ್ಡಿ ಫೆಬ್ರವರಿ ಒಂದಕ್ಕೆ ಮುಂದೊಡಲಾಯಿತು. ಆದರೆ ಮತ್ತೆ ಐದು ದಿನ ತಡವಾಗಿ ಫೆಬ್ರವರಿ ಆಯ್ತರೊಂದು ಆರಂಭವಾಗಿ ನಾಲ್ಕೂವರೆ ದಿನಗಳಲ್ಲಿ 62500 ಕ್ವಿಂಟಲ್ ನೋಂದಣಿ ಗುರಿ ತಲುಪಿದರಿಂದ ನೋಂದಣಿ ಸ್ಥಗಿತವಾಗಿತ್ತು