Breaking
Thu. Dec 26th, 2024

ಬೋವಿ ಮಠದ ಗುರುಪೀಠದ ಪೀಠಾಧ್ಯಕ್ಷರಾದ ಇಮ್ಮಡಿ ಸಿದ್ದರಾಮಯ್ಯ ಸ್ವರ ಸ್ವಾಮೀಜಿಯವರ ದೀಕ್ಷ ರಜತ ಮಹೋತ್ಸವ ಕಾರ್ಯಕ್ರಮ

ಚಿತ್ರದುರ್ಗ : ರಾಜ್ಯ ಸರ್ಕಾರವು ಪರಿಸರ ಸಂರಕ್ಷಣೆಗಾಗಿ ಜಾರಿಗೆ ತಂದಿರುವ ಸಾಕಷ್ಟು ಯೋಜನೆಗಳು ಯಶಸ್ವಿಯಾಗಬೇಕೆಂದರೆ ಸ್ಥಳೀಯ ಸಾರ್ವಜನಿಕರು ಕೈಜೋಡಿಸಬೇಕೆಂದು ಸಾಲುಮರದ ತಿಮ್ಮಕ್ಕ ಮನವಿ ಮಾಡಿದರು.

ಭೋವಿ ಗುರುಪೀಠದ ಪೇಟೆಯಾಧ್ಯಕ್ಷರಾದ ಹಿಮ್ಮಡಿ ಸಿದ್ದರಾಮಯ್ಯಶ್ವರ ಸ್ವಾಮೀಜಿಯವರ ದೀಕ್ಷಾ ರಜತಾ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಬೋವಿ ಗುರುಪೀಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಗಿಡಗಳೇ ಮಕ್ಕಳು ಗಿಡವಿದ್ದರೆ ಎಲ್ಲರೂ ಉಳಿಯಲು ಸಾಧ್ಯ ಅದಕ್ಕಾಗಿ ಎಲ್ಲರೂ ಒಂದೊಂದು ಗಿಡ ನೆಟ್ಟು ಜೋಪಾನವಾಗಿ ಕಾಪಾಡಬೇಕೆಂದು ಸಾಲುಮರದ ತಿಮ್ಮಕ್ಕ ಮಕ್ಕಳಿಗೆ ಬುದ್ಧಿವಾದ ಮಾತುಗಳನ್ನು ಹೇಳಿದರು.

ರಾಜ್ಯದ ಮುಖ್ಯಮಂತ್ರಿಗಳು ಸಿದ್ದರಾಮಯ್ಯನವರು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಗಿಡಮರಗಳ ರಕ್ಷಣೆಗಾಗಿ ಖರ್ಚು ಮಾಡುತ್ತಿರುವ ಹಣ ವ್ಯರ್ಥವಾಗಬಾರದು ಎಲ್ಲರೂ ಗಿಡ ನೆಟ್ಟು ಪೋಷಿಸಿ ದೊಡ್ಡಮರವನ್ನಾಗಿ ಬೆಳೆಸಿ ಪರಿಸರಕ್ಕೆ ಕೊಡುಗೆ ಕೊಡಬೇಕಾಗಿದೆ ಎಂದರು.

ಸಾಲುಮರದ ತಿಮ್ಮಕ್ಕನ ಪುತ್ರ ಉಮೇಶ್ ಮಾತನಾಡಿ ಹಿಮ್ಮಡಿ ಸಿದ್ದರಾಮಯ್ಯಶ್ವರ ಸ್ವಾಮೀಜಿಗಳ ದೀಕ್ಷ ರಜತಾ ಮಹೋತ್ಸವ ನಿಮಿತ್ತ ಪರಿಸರ ಸಸ್ಯೋತ್ಸವ ಹಮ್ಮಿಕೊಂಡಿರುವುದು ಪುಣ್ಯದ ಕೆಲಸ ರಾಜ್ಯದ್ಯಂತ ಗಿಡ ನೆಡುವ ಕಾರ್ಯಕ್ರಮಕ್ಕೆ ಮುಂದಾಗಿರುವುದು ಇಡೀ ದೇಶಕ್ಕೆ ಮಾದರಿ ಹುಟ್ಟು ಹಬ್ಬವೆಂದರೆ ಸಾಮಾನ್ಯವಾಗಿ ಎಲ್ಲರೂ ವಿಜ್ರಂಭಣೆಯಿಂದ ಆಚರಿಸುವುದು ಸಹಜ ಇಂತಹ ಕಾಲದಲ್ಲಿ ಹಿಮ್ಮಡಿ ಸಿದ್ದರಾಮಯ್ಯ ಅವರ ಪರಿಸರ ಸಂರಕ್ಷಣೆಗೆ ಒತ್ತು ನೀಡಿರುವುದು ಸಂತಸದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಕಾಗಿನೆಲೆ ಗುರುಪೀಠದ ನಿರಂಜನ ನಂದಾಪುರಿ ಸ್ವಾಮೀಜಿ, ಹೊಸದುರ್ಗ ಕುಂಚಿಟಿಗಾ ಮಹಾಸಂಸ್ಥಾನದ ಮಠದ ಡಾಕ್ಟರ್ ಶಾಂತವೀರ ಸ್ವಾಮೀಜಿ, ಬಸವ ಜಯ ಮೃತ್ಯು ಜಯ ಸ್ವಾಮೀಜಿ, ರಾಜನಹಳ್ಳಿ ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ, ಮಾದರ ಚೆನ್ನಯ್ಯ ಗುರು ಪೀಠದ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ, ಹೊಸದುರ್ಗ ಭಗೀರಥ ಪೀಠದ ಪುರುಷೋತ್ತಮ ನಂದಪುರಿ ಸ್ವಾಮೀಜಿ, ಹರಿಹರದ ವಚನಾನಂದ ಸ್ವಾಮೀಜಿ, ಯಾದವ ಮಹಾ ಸಂಸ್ಥಾನದ ಮಠದ ಕೃಷ್ಣ ಯಾದವ ನಂದ ಸ್ವಾಮೀಜಿ, ಬಸವ ಮಾಚಿದೇವ ಸ್ವಾಮೀಜಿ, ಶಾಂತಬೀಷ್ಮ, ಅಂಬಿಗರ ಚೌಡಯ್ಯ ಸ್ವಾಮಿಜಿ, ಹಡಪದ ಅಣ್ಣಪ್ಪ ಪೀಠದ ಅಣ್ಣಪ್ಪ ಸ್ವಾಮಿ, ಕುಂಬಾರ ಗುಂಡಯ್ಯ ಮಹಾಸ್ವಾಮೀಜಿ, ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿ, ಹೊಸದುರ್ಗ ಕನಕಪೀಠದ ಈಶ್ವರನಂದಪುರಿ ಸ್ವಾಮೀಜಿ, ಸಿದ್ದರಾಮಯ್ಯ ನಂದಪುರಿ ಸ್ವಾಮೀಜಿ, ಶಿವಬಸವ ಸ್ವಾಮೀಜಿ, ಬಸವ ಪ್ರಸಾದ ಸ್ವಾಮೀಜಿ, ಮಹಾಲಿಂಗ ಸ್ವಾಮೀಜಿ, ನಾಗೇಂದ್ರ ಸ್ವಾಮೀಜಿ, ಬಸವ ಪ್ರಭು ಸ್ವಾಮೀಜಿ, ಮರುಳಸಿದ್ದೇಶ್ವರ ಸ್ವಾಮೀಜಿ, ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಮುರುಘರಾಜೇಂದ್ರ ಸ್ವಾಮೀಜಿ, ಶಶಿ ಶೇಖರ ಸಿದ್ದ ಬಸವ ಸ್ವಾಮೀಜಿ, ಮಾತೆ ಸತ್ಯಕ್ಕೆ ನೀಲೋಚನ ಮಾತೆ ಚಿನ್ಮಯಿ ತಾಯಿ ಬಸವ ಲಿಂಗ ತಾಯಿ, ಜಿಲ್ಲಾ ರಕ್ಷಣಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಬೋವಿ ಮಠದ ಮುಖಂಡರು ನೇರಲಗುಂಟೆ ರಾಮಪ್ಪ ಇನ್ನು ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related Post

Leave a Reply

Your email address will not be published. Required fields are marked *