ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಚುನಾಯಿತರಾದ ಕಾಂಗ್ರೆಸ್ನ ಅಭ್ಯರ್ಥಿ ಶ್ರೇಯಸ್ ಎಂ ಪಾಟೀಲ್ ಮತ್ತು ದಾವಣಗೆರೆ ಕ್ಷೇತ್ರದಿಂದ ಆಯ್ಕೆಯಾಗಿರುವ ಡಾಕ್ಟರ್ ಪ್ರಭ ಮಲ್ಲಿಕಾರ್ಜುನ್ ಆಯ್ಕೆ ಆಗಿದ್ದು ಪ್ರಶ್ನಿಸಿ ಗುರುವಾರ ಹೈಕೋರ್ಟ್ ನಲ್ಲಿ ಎರಡು ಪ್ರತ್ಯೇಕ ಚುನಾವಣಾ ತಕರಾರು ಅರ್ಜಿಗಳನ್ನು ಸಲ್ಲಿಸಲಾಗಿದೆ.

ಈ ಅರ್ಜಿಗಳು ಕಚೇರಿಯ ಪರಿಶೀಲನೆ ನಂತರ ಪ್ರಖ್ಯಾತ ನ್ಯಾಯಪೀಠಗಳ ಮುಂದೆ ವಿಚಾರಣೆಗೆ ಬರಬೇಕಿದೆ ಹಾಸನ ಸಂಸದ ಶ್ರೇಯಸ್ ಪಾಟೀಲ್ ಆಯ್ಕೆ ಆಸಿಂದು ಕೋರಿ ವಕೀಲ ದೇವರಾಜೇಗೌಡ ಪುತ್ರ ಡಿ ಚರಣ್ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ಶ್ರೇಯಸ್ ಪಾಟೀಲ್ ನಾಮಪತ್ರ ಕ್ರಮಬದ್ಧವಾಗಿಲ್ಲವೆಂದು ಘೋಷಿಸುವಂತೆ ಕೋರಿದ್ದಾರೆ ಅಲ್ಲದೆ ಸದಸ್ಯರಾಗಿ ಶ್ರೇಯಸ್ ಎಂ ಪಾಟೀಲ್ ಇಂದಿನ ಐದು ವರ್ಷ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿಲ್ಲ ಮತ್ತು ಕುರಿತು ಪ್ರಮಾಣ ಪತ್ರದಲ್ಲಿ ಸಂಪೂರ್ಣ ಮಾಹಿತಿ ನೀಡಿಲ್ಲವೆಂದು ದೂರಿದ್ದಾರೆ.

ಇದಲ್ಲದೆ ಚುನಾವಣಾ ವೆಚ್ಚದ ಬಗ್ಗೆಯೂ ತಪ್ಪು ಮಾಹಿತಿ ನೀಡಿದ್ದಾರೆ ನಿಗದಿತಕ್ಕಿಂತ ಹೆಚ್ಚಿನ ಹಣ ಖರ್ಚು ಮಾಡಿದ್ದಾರೆ ಈ ಕುರಿತು ಆಯೋಗಕ್ಕೆ ಸರಿಯಾದ ಲೆಕ್ಕ ನೀಡಿಲ್ಲ ಹಾಗಾಗಿ ಅವರ ಆಯ್ಕೆಯನ್ನು ರದ್ದುಗೊಳಿಸಬೇಕೆಂದು ಅರ್ಜಿ ಸಲ್ಲಿಸಲು ಕೋರಲಾಗಿದೆ.

ಇದೇ ವೇಳೆ ದಾವಣಗೆರೆ ಸಂಸದರಾಗಿರುವ ಡಾ. ಪ್ರಭಾ ಮಲ್ಲಿಕಾರ್ಜುನ್ ಆಕೆ ಆಸೆಂದು ಕೋರಿ ಪರಾಜಿತ ಅಭ್ಯರ್ಥಿ ಜಿ ಎಸ್ ಗಾಯತ್ರಿ ಸಿದ್ದೇಶ್ವರ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಪ್ರತಿವಾದಿ ಗ್ಯಾರಂಟಿ ಕಾರ್ಡ್ ವಿತರಿಸಿ ಮತದಾರರಿಗೆ ಆಮಿಷ ಒಡ್ಡುವುದಲ್ಲದೆ ಮಹಿಳೆಯರಿಗೆ 1 ಲಕ್ಷ ಕೊಡುವುದಾಗಿ ಭರವಸೆ ನೀಡಿದ್ದಾರೆ ಇದು ಪ್ರಜಾ ಪ್ರತಿನಿಧಿ ಕಾಯ್ದೆಗೆ ವಿರೋಧವಾಗಿದ್ದು ಮತದಾರರಿಗೆ ಲಂಚದ ಆಮಿಷ ಒಡ್ಡಿದ್ದಾರೆ ಮತ್ತು ಚುನಾವಣಾ ಅಕ್ರಮಗಳನ್ನು ನಡೆಸಿ ಆಯ್ಕೆಯಾಗಿದ್ದಾರೆ ಆದ್ದರಿಂದ ಅವರ ಆಯ್ಕೆಯನ್ನು ಅಸಿಂಧು ಘೋಷಿಸಬೇಕೆಂದು ಅರ್ಜಿದಾರರು ಮನವಿ ಮಾಡಿದ್ದಾರೆ.

Related Post

Leave a Reply

Your email address will not be published. Required fields are marked *