ಬೆಳಗಾವಿ: ತಾಲೂಕಿನ ತುರುಮುರಿ ಗ್ರಾಮದ 35ಕ್ಕೂ ಹೆಚ್ಚು ಜನರು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಪಂಡರಾಪುರ ಪ್ರವಾಸಕ್ಕೆ ತೆರಳಿದ್ದರು. ದೇವರ ದರ್ಶನ ಮುಗಿಸಿ ವಾಪಸ್ ಬರುವಾಗ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಭಕ್ತ ಸುರೇಶ್ ಕುಮಾರ್ ವಾರಕರಿ, ಪರಶುರಾಮ್ ಜಾಧವ್, ಲಾರಿ ಚಾಲಕ ಪರಶುರಾಮ ಮೇಲೆ ಹಲ್ಲೆಗೆ ಒಳಗಾದ ವ್ಯಕ್ತಿಗಳು.
ಇದೀಗ ಹಲ್ಲೆ ಮಾಡಿದವರ ಮೇಲೆ ಮಿರಜ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಿರಜ್ ಮಾರ್ಗವಾಗಿ ಬೆಳಗಾವಿಗೆ
ಬರುತ್ತಿದ್ದಾಗ ಟ್ರಕ್ ದಾರಿ ತಪ್ಪಿ ಮಹಾರಾಷ್ಟ್ರದ ಮಾಳಗಾಂವ್ ಗ್ರಾಮಕ್ಕೆ ತಲುಪಿದೆ. ದಾರಿ ಸಿಗದೆ ಕಿರಿದಾದ ದಾರಿಯಲ್ಲಿ ಲಾರಿ ಸಾಗುವಾಗ ಸ್ಥಳೀಯ ಕಾರು ಚಾಲಕರಿಂದ ತಗಾದೆ ತೆಗೆದಿದ್ದು, ಲಾರಿಯಲ್ಲಿ ಪ್ರಯಾಣಿಸುತ್ತಿದ್ದರ ಮೇಲೆ ಹಲ್ಲೆ ಮಾಡಲಾಗಿದೆ.
ಪ್ರಕರಣ ಸಂಬಂಧ ಗಾಯಾಳುಗಳಿಗೆ ಮಹಾರಾಷ್ಟ್ರ ಮಿರಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇದೀಗ ಸ್ಥಳೀಯರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.