ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಗಂಧದ ದಂಧೆ ಮತ್ತೆ ಶುರುವಾಗಿದ್ದು 5 ಕೋಟಿಗೂ ಅಧಿಕ ಮೌಲ್ಯದ ಗಂಧದ ತುಂಡು ಹಾಗೂ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಕೆ.ಆರ್.ಪುರದ ಐಟಿಐ ಫ್ಯಾಕ್ಟರಿ ಆವರಣದ ಗೋಡೌನ್ ಮೇಲೆ ರಾಜ್ಯ ಅರಣ್ಯ ಜಾಗೃತದಳ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿ 2 ಕೋಟಿಗೂ ಹೆಚ್ಚು ಮೌಲ್ಯದ ಗಂಧದ ತುಂಡುಗಳನ್ನು ಪತ್ತೆ ಮಾಡಿ ಸೀಜ್ ಮಾಡಲಾಗಿದೆ. ಆರೋಪಿಗಳು ನೂರಾರು ಗಂಧದ ತುಂಡುಗಳನ್ನು ಸಂಗ್ರಹಿಸಿ ಅಕ್ರಮ ಸಾಗಾಟಕ್ಕ ಯತ್ನ ನಡೆಸಿದ್ದರು. ಸದ್ಯ ಈಗ ಆರೋಪಿಗಳನ್ನು ಬಂಧಿಸಿ ಗಂಧದ ತುಂಡು ಜಪ್ತಿ ಮಾಡಲಾಗಿದೆ.
ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಸಮೀಪದ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 3.5 ಕೆಜಿ ಹೈಡೋಪೋನಿಕ್ ಗಾಂಜಾವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕೇರಳ ಮೂಲದ ಆರೋಪಿ ಶಾಹನಾ ಸಾಹುಲ್ ಅಹ್ಮದ್‌ನನ್ನು ಬಂಧಿಸಲಾಗಿದೆ. ಬ್ಯಾಗ್‌ನಲ್ಲಿ 3.5 ಕೋಟಿ ಮೌಲ್ಯದ 3.5 ಕೆಜಿ ಹೈಡೋಪೋನಿಕ್ ಗಾಂಜಾವನ್ನು ಬ್ಯಾಂಕಾಕ್ ನಿಂದ ಬೆಂಗಳೂರಿಗೆ ಆರೋಪಿ ತಂದಿದ್ದ.
ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ವೇಳೆ ಲಗೇಜ್‌ನಲ್ಲಿ ಗಾಂಜಾ ಸಿಕ್ಕಿದೆ. ಕವರ್‌ನಲ್ಲಿ ಪ್ಯಾಕ್ ಮಾಡಿ ಲಗೇಜ್ ಮಧ್ಯೆ ಗಾಂಜಾ ಇರಿಸಲಾಗಿದೆ. ಗಾಂಜಾ ಸಮೇತ ಆರೋಪಿಯನ್ನ ಅಧಿಕಾರಿಗಳು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಶ್ರೀಮಂತರು ಹೆಚ್ಚಾಗಿ ಈ ಗಾಂಜಾವನ್ನು ಖರೀದಿಸುತ್ತಾರೆ ಎಂದು ಹೇಳುತ್ತಾರೆ.