ಚಿತ್ರದುರ್ಗ : ನಗರದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 23ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹೋತ್ಸವ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ವೀರಶೈವ ಅರ್ಬನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿನಲ್ಲಿ 2023-24ನೇ ಸಾಲಿನ 83,03,755.80 ರೂ.ಗಳ ನಿವ್ವಳ ಲಾಭವನ್ನು ಪಡೆದಿದ್ದು ಅದನ್ನು ಸೊಸೈಟಿ ಸಿಬ್ಬಂದಿಯ ಕಲ್ಯಾಣದ ವಿವಿಧ ಕಾರ್ಯಕ್ರಮಗಳಿಗೆ ಹಾಗೂ ಷೇರುದಾರರಿಗೆ ಹಂಚಿಕೆಯನ್ನು ಮಾಡಲು ಎಂದು ಸೊಸೈಟಿಯ ಅಧ್ಯಕ್ಷರು ಶಿವಕುಮಾರ್ ಪಾಟೀಲ್ ತಿಳಿಸಿದರು.
ಸೊಸೈಟಿ 1,734 ಸದಸ್ಯರನ್ನು ಹೊಂದಿದ್ದು, 79,46,900.00 ರೂ.ಗಳನ್ನು ಶೇರು ಬಂಡವಾಳವಾಗಿ ಪಡೆದಿದ್ದೆ . ಇದಲ್ಲದೆ 13,50,58,801.00 ರೂಗಳನ್ನು ಠೇವಣಿಯಾಗಿ 5,68,41,890.00 ವಿವಿಧ ಕಡೆಗಳಲ್ಲಿ ಹೂಡಿಕೆಯನ್ನು ಮಾಡಲಾಗಿದ್ದು, 20,51,05,233.00ರೂ.ಗಳನ್ನು ಸಾಲ ಮತ್ತು ಮಂಗಂಡವಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು ಕಳೆದ ಸಾಲಿನಲ್ಲಿ ಮುಂದಿನ ಸಾಲಿನಲ್ಲಿ ಲಾಭವನ್ನು ಹೆಚ್ಚಳ ಮಾಡುವುದಾಗಿ ತಿಳಿಸಿತ್ತು ಆದರೆ ಈ ಸಾಲಿನಲ್ಲಿ ಲಾಭವನ್ನು ಹೆಚ್ಚಳ ಮಾಡಲಾಗಿದೆ ಎಂದರು.
ನಮ್ಮ ಸೊಸೈಟಿಯಲ್ಲಿ ಗ್ರಾಹಕರು ನಂಬಿಕೆ ಇಟ್ಟು ಈ ಸಾಲಿನಲ್ಲಿ ಐವತ್ತ ಲಕ್ಷ ರೂಪಾಯಿಗಳನ್ನು ಠೇವಣಿಯಾಗಿ ಎರೆಸಿದ್ದಾರೆ ಈ ಸಮಯದಲ್ಲಿ ಸಮಾಜದವರು 60 ಲಕ್ಷಗಳನ್ನು ತೆಗೆದರೂ ಸಹ ಹೆಚ್ಚಿನ ಠೇವಣಿಯಲ್ಲಿ ಪಡೆಯಲಾಗುತ್ತದೆ ಇದಲ್ಲದೆ ಸೊಸೈಟಿಯಲ್ಲಿ ಭದ್ರತಾ ಕಪಾಟು ಚಿನ್ನದ ಆಭರಣಗಳ ಮೇಲೆ ಸಾಲ ಉಳಿತಾಯ ಖಾತೆ ಠೇವಣಿ ಸಾಲ ವಸೂಲಾತಿಯಲ್ಲಿಯೂ ಸಹ ಮುಂದಿದೆ.
2015 16ರ ರಿಂದ ಸೊಸೈಟಿಯು ಆಡಿಟ್ ನಲ್ಲಿ ಪಡೆದಿದ್ದು ತನ್ನ ಸೇರುದಾರರಿಗೆ ಅಂದಿನಿಂದಲೂ ಶೇಕಡ 20ರಷ್ಟು ಡಿವಿಟೆಡನ್ನು ನೀಡಲಾಗುತ್ತಿದೆ ನಗರದ ಬಿವಿಕೆ ಬಡಾವಣೆಯಲ್ಲಿ ಸೊಸೈಟಿಯ ನಿವೇಶನ ಇದೆ ಇದರಲ್ಲಿ ಏನನ್ನು ನಿರ್ಮಾಣ ಮಾಡಬೇಕೆಂದು ಸರ್ವ ಸದಸ್ಯರ ಸಭೆಯಲ್ಲಿ ಅಧ್ಯಕ್ಷರಾದ ಶಿವಕುಮಾರ್ ಸದಸ್ಯರು ಅಭಿಪ್ರಾಯವನ್ನು ಕೇಳಿದಾಗ ಹಲವಾರು ಸದಸ್ಯರು ವಿವಿಧ ರೀತಿಯ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ ಎಂದು ತಿಳಿಸಿದರು. ಸೊಸೈಟಿಯೋ ಮುಂದಿನ ದಿನಗಳಲ್ಲಿ 25 ವರ್ಷ ತುಂಬಲಿದೆ ಇದರ ಕಾರ್ಯಕ್ಕೆ ಇಂದಿನಿಂದಲೇ ಹಣವನ್ನು ತೆಗೆದಿರಿಸಲಾಗಿದೆ.
ಈ ಸಾಲಿನಲ್ಲಿ ಸಹ ಹಣವನ್ನು ತೆರೆಯಲಾಗಿದೆ ಸರ್ವ ಸದಸ್ಯರ ಸಭೆಯು 202324ನೇ ಸಾಲಿನಲ್ಲಿ ಹಾಯ್ ಬೆಳೆಗಿಂತ ಹೆಚ್ಚಿಗೆ ಆಗಿದೆ ಹಾಗೂ ೨೪೨೫ ಸರ್ವ ಸದಸ್ಯರ ಸಭೆ ಅನುಮೋದನೆಯಲ್ಲಿ ನೀಡಲಾಯಿತು. ಇದೇ ಸಂದರ್ಭದಲ್ಲಿ ಎಸ್. ಎಸ್. ಎಲ್. ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ 80 ಗಿಂತ ಹೆಚ್ಚಿಗೆ ಅಂಕವನ್ನು ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು ಕಳೆದ ಒಂದು ವರ್ಷದಿಂದಲೇ ನಿಧನರಾದ ಸೊಸೈಟಿಯ ಸೇರುದಾರರಿಗೆ ಒಂದು ನಿಮಿಷ ಮೌನಚರಣೆ ಆಚರಿಸುವ ಮೂಲಕ ಸಂತಾಪ ಸೂಚಿಸಿದರು.
ಸೊಸೈಟಿಯ ನಿರ್ದೇಶಕರಾದ ಆರ್ ಶೈಲಜಾ ಪ್ರಾರ್ಥನೆ ಸಲ್ಲಿಸಿದ್ದಾರೆ ಉಪಾಧ್ಯಕ್ಷರಾದ ಜಿಟಿ ಸುರೇಶ್ ಸ್ವಾಗತಿಸಿದರು. ವ್ಯವಸ್ಥಾಪಕರಾದ ಶ್ರೀಮತಿ ಕುಸುಮ ಜವಳಿ ಕಾರ್ಯಕ್ರಮವನ್ನು ನಿರೂಪಿಸಿದರು ಕಾರ್ಯಕ್ರಮದಲ್ಲಿ ಸೊಸೈಟಿಯ ನಿರ್ದೇಶಕರಾದ ಎಸ್ ಪರಮೇಶ್ವರಪ್ಪ, ಎಸ್ ವಿ ನಾಗರಾಜ್, ಎಸ್ ಷಣ್ಮುಖಪ್ಪ ಡಿ ಎಂ ಕರಿಬಸಯ್ಯ ಸಿ ಚಂದ್ರಪ್ಪ ಶ್ರೀಮತಿ ಜಯಶ್ರೀ ಭಾಗವಹಿಸಿದರು.