ಚಿತ್ರದುರ್ಗ : ಚಳ್ಳಕೆರೆ ರಸ್ತೆಯ ಸಾಯಿ ಸಂಕಲ್ಪ ಸೇವಾ ಸಮಿತಿ ವತಿಯಿಂದ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಸಾಯಿಬಾಬಾ ಮಂದಿರದಲ್ಲಿ ವಿಜೃಂಭಣೆಯಿಂದ ಗುರುಪೂರ್ಣಿಮಾ ಮಹದ ಗುರು ಪೂರ್ಣಿಮಾ ಅಂಗವಾಗಿ ಸಾಯಿ ಮಂದಿರದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಆರಂಭಗೊಂಡು ಶ್ರೀ ಸಾಯಿಬಾಬಾ ಅವರಿಗೆ ಪಂಚಾಮೃತ ಅಭಿಷೇಕ ಭಜನೆ ಕಾರ್ಯಕ್ರಮಗಳು ಸಂಜೆ 6:00 ಗಂಟೆಗೆ ಭಕ್ತಿಯಿಂದ ಜರುಗಿದವು. ವಿವಿಧ ಕೈಂಕರ್ಗಳು ನೆರವೇರಿದವು. ಗುರುಪೂರ್ಣಿಮಾ ಮಹೋತ್ಸವ ಅಂಗವಾಗಿ ಶ್ರೀ ಸಾಯಿಬಾಬಾ ಮಂದಿರದಲ್ಲಿ ವಿವಿಧ ವಿದ್ಯುತ್ ದೀಪಾಲಂಕಾರ ಮತ್ತು ಹೂವಿನ ಅಲಂಕಾರವನ್ನು ಬೆಳಗ್ಗೆಯಿಂದ ರಾತ್ರಿಯವರೆಗೆ ಸಾವಿರಾರು ಭಕ್ತರು ಗುರುಪೂರ್ಣಿಮಾ ಮಹೋತ್ಸವದ ಪೂಜೆಯಲ್ಲಿ ಶ್ರೀ ಸಾಯಿಬಾಬರ ದರ್ಶನ ಪಡೆದು ನೆರೆದಿದ್ದ ಭಕ್ತರಿಗೆ ಅನ್ನದಾಸೋಹ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಶ್ರೀ ಸಾಯಿಬಾಬಾ ಸಂಕಲ್ಪ ಸೇವಾ ಸಮಿತಿಯ ವತಿಯಿಂದ ಅಧ್ಯಕ್ಷರಾದ ತೇಜಸ್ವಿನಿ ಉಪಾಧ್ಯಕ್ಷರಾದ ಜೆಟಿ ಸುರೇಶ್ ಕಾರ್ಯದರ್ಶಿ ನಯನ ಖಜಾಂಚಿ ವಿಶ್ವನಾಥ್ ಸೋಮನಾಥ್ ಶೆಟ್ಟಿ ಲಕ್ಷ್ಮಣ್ ಚೇತನ್ ಸೋಮೇಗೌಡ ಶ್ರೀಮತಿ ಶೈಲಜಾ ರೆಡ್ಡಿ ಸೌಮ್ಯ ಸತ್ಯನಾರಾಯಣ ಕೃಷ್ಣ ಹಾಗೂ ಮುಂತಾದ ಭಕ್ತಾದಿಗಳು ಭಾಗವಹಿಸಿದ್ದರು.