ಚಳ್ಳಕೆರೆ : ಕುದಾಪುರ ಬಳಿ ಕಳ್ಳರು ಬ್ಯಾಲೆರೋ ವಾಹನದಲ್ಲಿ ಹೋಗುತ್ತಿದ್ದ ಮಾಹಿತಿ ಮೇರೆಗೆ ಪೊಲೀಸರು ಹಡಗಟ್ಟಿದರು ಆದರೆ ಚಾಲಾಕಿ ಕಳ್ಳರು ಪೊಲೀಸರ ಮೇಲೆ ಕಲ್ಲು ತೋರಿ ಏಕೈಕ ದಾಳಿ ಮಾಡಿ ಕೂಡಲೇ ಆತ್ಮ ರಕ್ಷಣೆಗಾಗಿ ಪೊಲೀಸರು ಏರ್ ಫೈರಿಂಗ್ ಕೂಡ ಮಾಡಿದ್ದಾರೆ ಆದರೂ ಕಳ್ಳರು ತಪ್ಪಿಸಿಕೊಂಡಿದ್ದಾರೆ. ಕಳ್ಳರನ್ನು ಹಿಡಿಯಲು ಹೋಗಿದ್ದಾಗ ಪೊಲೀಸರ ವಾಹನದ ಮೇಲೆ ಕಲ್ಲು ತೋರಿ ಕಳ್ಳರು ಸಿನಿಮಾ ರೀತಿಯಲ್ಲಿ ಎಸ್ಕೇಪ್ ಆಗಿರುವ ಘಟನೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಘಟನೆ ನಡೆದಿದೆ.
ಕಳ್ಳರು ಕಲ್ಲು ತೋರಿದ್ದರಿಂದ ಪೊಲೀಸರ ಜಿಪಿನ ಗ್ಲಾಸ್ ಡ್ಯಾಮೇಜ್ ಆಗಿ ಸುಮಾರು ಏಳು ಮಂದಿ ಗ್ಯಾಂಗ್ ಆಂಧ್ರಪ್ರದೇಶದ ವಾಹನದ ನಂಬರ್ ಹೊಂದಿದ ಬುಲೆರೋ ವಾಹನದಲ್ಲಿ ಬಂದಿದ್ದರು. ಇದನ್ನು ಗಮನಿಸಿದ ರಾತ್ರಿಗಸ್ತಿನಲ್ಲಿದ್ದ ನಾಯಕನಟಿ ಪೊಲೀಸರು ವಾಹನವನ್ನು ತಡೆದು ಪರಿಶೀಲನೆ ಮಾಡಲು ಒಂದಾಗಿದ್ದಾರೆ ಈ ವೇಳೆ ವಾಹನ ನಿಲ್ಲಿಸದೆ ಕತರ್ನಾಕ್ ಕಳ್ಳರು ಗುಂಪು ಪೊಲೀಸರ ಕಡೆ ಕಲ್ಲು ತೋರಿದ್ದಾರೆ ದರೋಡೆಕಾರರೆಂಬ ಅನುಮಾನ ದಿಂದ ಪೊಲೀಸರು ಅಲರ್ಟ್ ಆಗಿದ್ದರು.
ಬೋಸಿದೇವರಹಟ್ಟಿ ಕೋಟೆ ನಗರ ಒಳ ಮಾರ್ಗದಲ್ಲಿ ಕುದಪುರ ಕಡೆ ಬರುತ್ತಿದ್ದ ಕಳ್ಳರಿಗೆ ಪೊಲೀಸರು ಮನಮಯನ ಹಟ್ಟಿ ಕುದಪುರ ಒಳ ಮಾರ್ಗದಲ್ಲಿ ಎದುರಾಗಿದ್ದಾರೆ ನಾಯಕನಹಟ್ಟಿ ಪಿಎಸ್ಐ ಶಿವಕುಮಾರ್ ನೇತೃತ್ವದ ತಂಡ ಬುಲರೋ ವಾಹನದಲ್ಲಿ ಬಂದಿದ್ದ ಕಳ್ಳರನ್ನು ಹಿಡಿಯಲು ಯತ್ನಿಸಿದ್ದಾರೆ ಆದರೆ ಹಿರೇಹಳ್ಳಿ ಬ್ಯಾಡ ರೆಡ್ಡಿಹಳ್ಳಿ ಬುಕ್ಕಂಬೋದಿ ಮಾರ್ಗದಲ್ಲಿ ಪೊಲೀಸರಿಗೆ ಚಳ್ಳೆಯನ್ನು ತಿಳಿಸಿ ಕಳ್ಳರು ಎಸ್ಕೇಪ್ ಆಗಿದ್ದಾರೆ.
ಸ್ಥಳಕ್ಕೆ ಚಿತ್ರದುರ್ಗ ಎಸ್ ಪಿ ಧರ್ಮೇಂದ್ರ ಕುಮಾರ್ ಮೀನಾ ಅವರು ಹಾಗೂ ಚಳ್ಳಕೆರೆ ಡಿವೈಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ರಾತ್ರಿ ನಡೆದ ಘಟನೆ ಕುರಿತು ಸ್ಥಳೀಯ ಮತ್ತು ಪೊಲೀಸರಿಂದ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ ಪೊಲೀಸರ ಮೇಲೆ ಕಳ್ಳರು ದಾಳಿ ನಡೆಸಿ ಸುಲಭವಾಗಿ ಎಸ್ಕೇಪ್ ಆಗಿರುವ ಕಳ್ಳರಿಗೆ ಸ್ಥಳೀಯ ಜನರು ಆತಂಕಗೊಂಡಿದ್ದಾರೆ.