ಬಸ್‌ಗಾಗಿ ಕಾಯುತ್ತ ನಿಂತಿದ್ದ 17 ವರ್ಷದ ದ್ವಿತೀಯ ಪಿಯುಸಿ ಓದುತ್ತಿರುವ ಯುವತಿಯನ್ನು ನಾಲ್ವರು ಯುವಕರು ಕಿಡ್ನಾಪ್ ಮಾಡಿರುವಂತಹ ಘಟನೆ ಜೂನ್ 6ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಯುವತಿ ಬಚಾವ್ ಆಗಿದ್ದಾಳೆ. ಸದ್ಯ ಪೀಣ್ಯ ಪೊಲೀಸ್ ಠಾಣಾ ಸರಹದ್ದಿಗೆ ಸೇರಲು ಕೇಸ್ ವರ್ಗಾವಣೆ ಮಾಡಲಾಗಿದೆ.
ಜೂನ್ 6 ರಂದು ಜಾಲಹಳ್ಳಿ ಕ್ರಾಸ್‌ನಲ್ಲಿ ತುಮಕೂರಿಗೆ ಬಸ್‌ಗಾಗಿ ಯುವತಿ ಕಾಯುತ್ತ ನಿಂತಿದ್ದಳು. ಈ ವೇಳೆ ವಿದ್ಯಾರ್ಥಿನಿ ಬಳಿಗೆ ಬ೦ದಿದ್ದ ಯುವತಿಯರಿಂದ ರಾಸಾಯನಿಕ ಸಿಂಪಡಿಸಿ, ಮಾಸ್ಕ್ ಹಾಕಿ ತಪ್ಪಿಸಿ ಪೀಣ ಪೊಲೀಸ್ ಠಾಣೆ ಪೀಣ್ಯ ಪೋಲೀಸ್ ಠಾಣೆ ಎಳೆದೊಯ್ದಿದ್ದಾರೆ.
ಅಪಹೃತ ವಿದ್ಯಾರ್ಥಿಗೆ ಪಕ್ಕದಲ್ಲಿ ಕಾರಿನಲ್ಲಿದ್ದ ಬಗ್ಗೆ ಮನವರಿಕೆ ಆಗಿದೆ. ಯುವತಿ ಬಳಿ ತಪ್ಪಿದಂತೆಯೇ ಇದ್ದಾಗ ಮೈಸೂರು ಕಿಡ್ಯಾಪರ್ಸ್ ಕಾರು ನಿಲ್ಲಿಸಿ ಟೀ ಕುಡಿಯಲು ಹೋಗಿದ್ದಾರೆ. ಈ ವೇಳೆ ಕಾರಿನಿಂದ ಇಳಿದು ವಿದ್ಯಾರ್ಥಿನಿ ತಪ್ಪಿಸಿಕೊಂಡಿದ್ದಾಳೆ.
ಬಳಿಕ ವಿದ್ಯಾರ್ಥಿನಿ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಯುವತಿ ದೂರು ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಮೊ.ಸಂ 56/2024 500 143,328,363, 34 ಐಪಿಸಿ ರೀತ್ಯ ಪ್ರಕರಣ ದಾಖಲಾಗಿರುತ್ತದೆ.
ಕಾರಿನಲ್ಲಿ ಇಬ್ಬರು ಯುವತಿಯರ ಜೊತೆ ನಾಲ್ವರು ಯುವಕರಿದ್ದರು ಎಂದು ಆರೋಪಿಸಿದರು. ಸ್ಥಳ ಪಂಚನಾಮ ಕ್ರಮ ಜರುಗಿಸುವ ಸಮಯದಲ್ಲಿ ಕೃತ್ಯ ನಡೆದ ಸ್ಥಳವು ಪೀಣ್ಯ ಪೊಲೀಸ್ ಠಾಣೆ ಸರಹದ್ದಿಗೆ ಸೇರಿದ್ದು ಕೇಸ್ ವರ್ಗಾವಣೆ ಮಾಡಲಾಗಿದೆ.