ಬೆಂಗಳೂರು: ರಾಜ್ಯದಲ್ಲಿ ವರುಣ ಕೊಂಚ ಬಿಡುವಿಲ್ಲದಂತೆ ಆರ್ಭಟಿಸುತ್ತಿದ್ದಾನೆ. ಪರಿಣಾಮದ ಹಲವಾರು ಭಾಗಗಳಲ್ಲಿ ನಾನಾ ಅವಾಂತರ ಸೃಷ್ಟಿಯಾಗಿದೆ.
ಶಿರಾಡಿಘಾಟ್‌ನಲ್ಲಿ ಮತ್ತೆ ಭೂಕುಸಿತ ಹಾಸನದ ಸಕಲೇಶಪುರ ತಾಲ್ಲೂಕಿನ ಮಂಗಳೂರು-ಬೆಂಗಳೂರು ಸಂಪರ್ಕಿಸುವ ಶಿರಾಡಿಘಾಟ್‌ನಲ್ಲಿ ಮತ್ತೆ ಭೂಕುಸಿತವಾಗಿದೆ. ದೊಡ್ಡತಪ್ಲೆ ಬಳಿ ಪೊಲೀಸರು ನಿಲ್ಲಿಸಿದ್ದ ವಾಹನದ ಬಳಿಯೇ ಭೂಕುಸಿದಿದೆ. ಪರಿಣಾಮ ಪೊಲೀಸ್ ವಾಹನ ಕೆಸರಿನಲ್ಲಿ ಸಿಲುಕಿದ್ದು, ಬಳಿಕ ಕೂಡಲೇ ಜೆಸಿಬಿ ಮೂಲಕ ಪೊಲೀಸ್ ವಾಹನವನ್ನು ಸ್ಥಳಾಂತರಿಸಲಾಯಿತು. ಯುವಕನ ತಲೆ ಮೇಲೆ ಬಿತ್ತು ವಿದ್ಯುತ್ ಕಂಬ
ಕಾಫಿನಾಡು ಮಲೆನಾಡು ಭಾಗದಲ್ಲಿ ಮಳೆ ಮುಂದುವರೆದಿದೆ. ಮೂಡಿಗೆರೆ ತಾಲ್ಲೂಕಿನ ತುಂಬರಗಡಿ ಗ್ರಾಮದ ಬಳಿ ಭಾರೀ ಗಾಳಿಯಿಂದ ವಿದ್ಯುತ್ ಕಂಬವೊಂದು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ದಿವೀತ್ ಎಂಬ ಯುವಕನ ತಲೆಯ ಮೇಲೆ ಮುರಿದು ಬಿದ್ದಿದೆ. ಪರಿಣಾಮ ಯುವಕನ ತಲೆಗೆ ಗಂಭೀರ ಗಾಯವಾಗಿದೆ. ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಉಕ್ಕಿ ಹರಿಯುತ್ತಿರುವ ವರದ ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಹಾವೇರಿಯಲ್ಲಿ ವರದಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದೆ. ಸಂಗೂರು ಗ್ರಾಮದ ಬಳಿ ಇರುವ ವರದ ನದಿಯ ಪಾತ್ರದ ರೈತರ ಜಮೀನುಗಳಲ್ಲಿ ಜಲವೃತಗೊಂಡಿವೆ.
ಬೆಳಗಾವಿಯಲ್ಲಿ ಮಹಾಮಳೆಗೆ ಕೃಷ್ಣಾ ನದಿ ನೀರಿನ ಒಳಹರಿವು 1.22 ಲಕ್ಷ ಕ್ಯುಸೆಕ್ ದಾಟಿದೆ. ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ 7 ಸೇತುವೆಗಳು ಜಲಾವೃತವಾಗಿದೆ. ನಾರಾಯಣಪುರ ಜಲಾಶಯದಿಂದ ಬಿಡುಗಡೆಯಾದ ಕೃಷ್ಣಾ ನದಿಗೆ ಭಾರೀ ಪ್ರಮಾಣದ ನೀರು ಹಿನ್ನೆಲೆ ರಾಯಚೂರಿನ ದೇವದುರ್ಗದ ಹೂವಿನಹೆಡಗಿ ಸೇತುವೆ ಮುಳುಗಡೆ ಹಂತದಲ್ಲಿದೆ.