ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಪಾಲಾದ ದರ್ಶನ್‌ರನ್ನು ನೋಡಲು ಭೇಟಿ ನೀಡಿದ್ದರು. ಇದೀಗ ದರ್ಶನ್‌ಗೆ ಭೇಟಿಗೆ ಅವಕಾಶ ಸಿಗದೆ ವಿನೋದ್ ರಾಜ್ ವಾಪಾಸ್ ಆಗಿದ್ದಾರೆ. ಬಳಿಕ ಮಾಧ್ಯಮಕ್ಕೆ ದರ್ಶನ್ ಪ್ರಕರಣದ ಬಗ್ಗೆ ವಿನೋದ್ ರಾಜ್ ಮಾತನಾಡಿದ್ದಾರೆ.
ನನ್ನ ಮನೋಭಾವನೆಯಲ್ಲಿ ದರ್ಶನ್ ಒಬ್ಬ ಕಲಾವಿದ. ಬಂದ ತಕ್ಷಣ ನನ್ನನ್ನು ನೋಡಿ ತುಂಬಿಕೊಂಡರು. ಅದೇ ಪ್ರೀತಿ ಅದೇ ಆತ್ಮೀಯತೆಯಿಂದ. ಸ್ವೇಚ್ಚಾವಾಗಿ ತಿನ್ನುತ್ತಿದ್ದ ಮನುಷ್ಯ ದರ್ಶನ್ ಅನುಸಾರ. ದೇವರ ದಯೆಯಿಂದ ಎಲ್ಲಾ ಸರಿ ಹೋಗಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದು ಮಾತನಾಡಿದ್ದಾರೆ.
ದರ್ಶನ್ ನೋಡಿದಾಗ ಮನಸ್ಸಿಗೆ ತುಂಬಾ ನೋವಾಯಿತು. ಆದರೆ ಅಲ್ಲಿ ಪ್ರಾಣ ಕಳೆದುಕೊಂಡ ತಂದೆ ತಾಯಿ ನೋವು ದೊಡ್ಡದು. ಆತನ ಹೆಂಡತಿ ಗರ್ಭದಲ್ಲಿರುವ ಮಗು ಎಲ್ಲವನ್ನು ನೆನೆಸಿಕೊಂಡರೆ ತುಂಬಾ ನೋವಾಗುತ್ತದೆ ಎಂದು ಮಾತನಾಡಿದ್ದಾರೆ.
ದರ್ಶನ್‌ರನ್ನು ನಂಬಿ ತಮ್ಮ ಸಿನಿಮಾಗೆ ಹಣ ಹಾಕಿದ ನಿರ್ಮಾಪಕರನ್ನು ನೋಡಿದರೆ ನೋವಾಗುತ್ತದೆ. ಎಲ್ಲವನ್ನೂ ಕಳೆದುಕೊಂಡು ನೋಡೋದು ಕಷ್ಟದ ಕೆಲಸ. ಕಾರಾಗೃಹದಲ್ಲಿ ಅಷ್ಟು ದಿನಗಳ ಕಾಲ ಸಮಯ ಕಳೆಯೋದು ಸುಲಭವಲ್ಲ. ಅಣ್ಣಾ ಎಂದು ಬಾಯಿ ತುಂಬಾ ಹೇಳುವ ದರ್ಶನ್ ಹೀಗೆ ಆಯ್ತಲ್ಲ ನೋವು ಆಗ್ತಿದೆ ಎಂದು ವಿನೋದ್ ರಾಜ್ ಮಾತನಾಡಿದ್ದಾರೆ.