ಚಿತ್ರದುರ್ಗ : ಜಿಲ್ಲೆಯ ಸಂಪತ್ತನ್ನೆಲ್ಲ ಲೂಟಿ ಹೊಡದು ಸ್ಥಳೀಯರಿಗೆ ಉದ್ಯೋಗ ನೀಡದೆ ವಂಚಸುತ್ತಿರುವ ಜಾನ್ ಮೆನ್ಸ ಹಾಗೂ ವೇದಾಂತ್ ಮೈನ್ಸ್ ವಿರುದ್ಧ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ 52 ಕುಟುಂಬಗಳು ನೂರಾರು ಲಾರಿಗಳನ್ನು ತಡೆದು ಸಿರಿಗೆರೆಯ ಡಿ ಮದಕರಿಪುರ ಸಮೀಪ ಚಳಿಗಾಳಿ ಮಳೆಯನ್ನು ಲೆಕ್ಕಿಸದೆ ಕೆಸರಿನಲ್ಲೇ ಕುಳಿತು ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಡಿ ಮದಕರಿಪುರ, ತಣಗೆಹಳ್ಳಿ ಮುತ್ತುಗ ದೂರು ಕಾಗಳಗೆರೆ ಸಾಸಲು ಗ್ರಾಮಗಳ ಎಸ್ಸಿ ಎಸ್ಟಿ ಜನಾಂಗದ 52 ಲಾರಿಗಳ ಅಧಿರು ಸಾಕಾಣಿಕೆ ಬಳಸಿಕೊಂಡು ಈಗ ಏಕಾಏಕಿ ಹೊರಗಡೆ ಇರುವುದರಿಂದ ಪ್ರತಿ ತಿಂಗಳು ಇಎಂಐ 30,000ಗಳನ್ನು ಕಟ್ಟಿ ಕುಟುಂಬ ಜೀವನ ಸಾಗಿಸುವುದು ಹೇಗೆ ಮಕ್ಕಳ ಶಿಕ್ಷಣ ಕುಂಠಿತವಾಗಿದೆ ಎಂದು ಪ್ರತಿಭಟನಾಕಾರರು ಮೀನ್ಸ್ ನವರು ನಮ್ಮ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆಂದು ಶೋಷಣೆಗೆ ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯವರು ಮಧ್ಯಪ್ರವೇಶಿಸಿ 52 ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಇಲ್ಲದಿದ್ದರೆ ಮೆನ್ಸ್ನವರಿಗೆ ಅದಿರು ತುಂಬಲು ಬಿಡುವುದಿಲ್ಲ ಸುತ್ತಮುತ್ತಲಿನ ಬೆಳೆಗಳು ಗಣಿಧೂಳಿನಿಂದ ಹಾನಿಯಾಗಿದೆ ಸ್ಥಳೀಯರಿಗೆ ಶೇಕಡ 80ರಷ್ಟು ಉದ್ಯೋಗ ನೀಡಬೇಕೆಂಬ ನಿಯಮವಿದ್ದರೂ ಜಾನ್ ಮೇನ್ಸ್ ಮತ್ತು ವೇದಾಂತ್ ಮೇನ್ಸ್ ನವರು ಹೊರಗಿನಿಂದ ಕೆಲಸಕ್ಕೆ ಜನರನ್ನು ಕರೆಸಿಕೊಂಡು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರನ್ನು ಎಂಬ ಕಾರಣಕ್ಕಾಗಿ ನಮ್ಮನ್ನು ಹೊರಗೆ ಕಳಿಸಿದ್ದಾರೆ. ಇವರು ಜಾತಿ ನಿಂದನೆ ಮಾಡದಿರುವುದು ನಮಗೆ ನ್ಯಾಯ ಸಿಗುವ ತನಕ ಪ್ರತಿಭಟನೆಯನ್ನು ಹಿಂದೆ ಪಡೆಯುವುದಿಲ್ಲ ಎಂದು ಧರಣಿಯಲ್ಲಿ ನಿರಂತರವಾಗಿ ಪಟ್ಟ ಹಿಡಿದು ಕುಳಿತಿದ್ದಾರೆ.
ಅದಿರು ಸಾಗಾಣಿಕೆಯನ್ನ ನಂಬಿಕೊಂಡು ಸಾಲ ಪಡೆದು ಲಾರಿಗಳನ್ನು ತಂದಿರುವ ಭೀಮದಕರಿಪುರ ತಣಿಗೆಯಲ್ಲಿ ಮುತ್ತುಗದೂರು ಕಾಗಳಗೆರೆ ಸಾಸಲ ಗ್ರಾಮದವರು ಕುಟುಂಬ ನಿರ್ವಹಣೆಗೆ ಸಾಧ್ಯವಾಗದೇ ಇರುವುದರಿಂದ ವಿಷ ಕುಡಿಯುವ ಹಂತ ತಲುಪಿದ್ದೇವೆ ಎಂದು ಗಣಿ ಬಾಧೆತ ಪ್ರದೇಶಗಳ ಜನತೆಗೆ ಉದ್ಯೋಗ ಕಲ್ಪಿಸಬೇಕೆಂಬ ಸರ್ಕಾರದ ನಿಯಮವಿದ್ದರೂ ಮೈನ್ಸ್ ನವರು ಕ್ಯಾರೆ ಎನ್ನುತ್ತಿಲ್ಲ. ಮೇಲ್ವರ್ಗದ ಕಪಿ ಮುಷ್ಟಿಯಲ್ಲಿರುವ ಜಾನ್ ಮೇನ್ಸ್ ಮತ್ತು ವೇದಾಂತ್ ಮೇನ್ಸ್ ನವರು 3 ಲಕ್ಷದಿಂದ 18 ಲಕ್ಷ ಟನ್ ವರೆಗೆ ಅದಿರು ಸಾಗಿಸುತ್ತಿದ್ದಾರೆ ಎಂದು ಪ್ರತಿಭಟನೆಕಾರರು ತಮಗಾಗುವ ಅನ್ಯಾಯದ ವಿರುದ್ಧ ಸಿಡಿದೆದ್ದಿದ್ದಾರೆಂದು ತಿಳಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆಂಗುಂಟೆ ಜಯಣ್ಣ ಜಿಲ್ಲಾ ಬಂಜಾರ ಲಂಬಾಣಿ ಸಮುದಾಯದ ಅಧ್ಯಕ್ಷ ಎನ್ ಸತೀಶ್ ಕುಮಾರ್ ರಾಜಣ್ಣ ಹಿರೇಕಂದವಾಡಿ ತಿಪ್ಪೇಶ್ ಕಡೂರು ಸುಂದರಮೂರ್ತಿ ಹೊಳಲ್ಕೆರೆ ಉಮಾಪತಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ತಿಪ್ಪೇಸ್ವಾಮಿ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.