2024ರಲ್ಲಿ ಕನ್ನಡ ಚಿತ್ರರಂಗ ಸೊರಗಿದೆ. ಅಂಕಿ-ಅಂಶಗಳಿಂದಲೂ ಈ ಮಾತು ಆಗುತ್ತಿದೆ. ಕನ್ನಡದ ಸಿನಿಮಾಗಳಿಗೆ ನಿರೀಕ್ಷಿತ ಪ್ರಮಾಣದ ಗೆಲುವು ಸಿಗುತ್ತಿಲ್ಲ. ಇನ್ನುಳಿದ ಭಾಷೆಯ ಸಿನಿಮಾಗಳ ಎದುರು ಪೈಪೋಟಿ ನೀಡುವಲ್ಲಿ ಸ್ಯಾಂಡಲ್ವುಡ್ ಸಿನಿಮಾಗಳು ಕಷ್ಟಪಡುತ್ತಿವೆ. 2024ರಲ್ಲಿ ಅರ್ಧ ವರ್ಷ ಕಳೆದುಹೋಗಿದೆ. ಈವರೆಗೆ ಭಾರತದಲ್ಲಿ ಬಿಡುಗಡೆಯಾದ ಸಿನಿಮಾಗಳ ಜನಪ್ರಿಯ 10 ಸಿನಿಮಾಗಳ ಪಟ್ಟಿಯನ್ನು ಐಎಂಡಿಬಿ ರಿಲೀಸ್. ಮುಂಬರುವ ದಿನಗಳಲ್ಲಿ ಬಿಡುಗಡೆ ಸಿದ್ಧವಾಗಿರುವ 10 ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯನ್ನು ಕೂಡ ಅನಾವರಣ ಮಾಡಲಾಗಿದೆ.
2024ರ ಜನವರಿ 1ರಿಂದ ಜುಲೈ 10ರವರೆಗೆ ಬಿಡುಗಡೆಯಾದ ಸಿನಿಮಾಗಳಲ್ಲಿ ಅತಿ ಹೆಚ್ಚು ಜನಪ್ರಿಯತೆ ಹೊಂದಿದ ಟಾಪ್ 10 ಸಿನಿಮಾಗಳ ಪಟ್ಟಿ ಇಲ್ಲಿದೆ. ಐಎಂಡಿವಿ ವೆಬ್‌ಸೈಟ್‌ನಲ್ಲಿ ಈ ಸಿನಿಮಾಗಳು ಪಡೆದ ವೀವ್ಸ್ ಮತ್ತು ರೇಟಿಂಗ್ ಆಧಾರದ ಮೇಲೆ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಕನ್ನಡದ ಯಾವುದೇ ಸಿನಿಮಾಗಳು ಇಲ್ಲ ಎಂಬುದು ನಿರಾಸೆ ಮೂಡಿಸಿದೆ.
1. ಕಲ್ಕಿ 2898 ಎಡಿ 2. ಮಂಜುಮೇಲ್ ಬಾಯ್ಸ್3. ಫೈಟರ್4. ಹನುಮಾನ್5. ಶೈತಾನ್6. ಲಾಪತಾ ಲೇಡೀಸ್7. ಆರ್ಟಿಕಲ್ 370 8. ಪ್ರೇಮಲು 9. ಆವೇಶಂ 10. ಮುಂಜ್ಯ
ಈ ವರ್ಷ ಡಿಸೆಂಬರ್ ತನಕ ಬಿಡುಗಡೆ ಆಗಲಿರುವ ಸಿನಿಮಾಗಳಲ್ಲಿ ಅತಿ ಹೆಚ್ಚು ನಿರೀಕ್ಷೆ ಹುಟ್ಟುಹಾಕಿರುವ ಟಾಪ್ 10 ಚಿತ್ರಗಳ ಪಟ್ಟಿಯನ್ನು ಕೂಡ ಐಎಂಡಿಬಿ ರಿಲೀಸ್ ಮಾಡಿದೆ. ಇದರಲ್ಲಿಯೂ ಕೂಡ ಕನ್ನಡದ ಯಾವುದೇ ಸಿನಿಮಾಗಳು ಇಲ್ಲ. ಈ ವಿಚಾರದಲ್ಲಿ ಚಂದನವನದ ಸಿನಿಮಾಗಳಿಗೆ ಹಿನ್ನಡೆ ಆಗಿದೆ.
1. ಪುಷ್ಪ 2 2. ದೇವರ ಭಾಗ 1 3. ವೆಲ್ಕಮ್ ಟು ದಿ ಜಂಗಲ್4. ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್5.ಕಂಗುವ 6. ಸಿಂಗಂ ಅಗೇನ್7. ಭೂಲ್ಭುಲಯ್ಯ 3 8. ತಂಗಲಾನ್ 9. ಔರೋಮೆ ಕಹಾ ಧಮ್ ಥಾ 10. ಸ್ತ್ರೀ 2