Breaking
Mon. Dec 23rd, 2024

ಆರ್ಥಿಕ ಸಂಕಷ್ಟ ಹಾಗೂ ಸತತ ಪ್ರಯತ್ನಗಳ ಬಳಿಕ ಮಗಳು ಸಿಎ ಪಾಸ್ ಆಗಿರುವ ಖುಷಿಗೆ ತಂದೆ ಭಾವುಕ…!

ದೆಹಲಿಯ ಬೀದಿ ಬದಿ ಟೀ ಮಾರುತ್ತಿದ್ದ ವ್ಯಕ್ತಿಯ ಪುತ್ರಿ ಅಮಿತಾ ಪ್ರಜಾಪತಿ ಕಳೆದ ಹತ್ತು ವರ್ಷಗಳ ನಿರಂತರ ಪ್ರಯತ್ನದ ನಂತರ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಅಸಾಮಾನ್ಯ ಸಾಧನೆ ಮಾಡಿದ್ದಾರೆ. ಆರ್ಥಿಕ ಸಂಕಷ್ಟ ಹಾಗೂ ಸತತ ಪ್ರಯತ್ನಗಳ ಬಳಿಕ ಮಗಳು ಸಿಎ ಪಾಸ್ ಆಗಿರುವ ಖುಷಿಗೆ ತಂದೆ ಭಾವುಕರಾಗಿದ್ದು, ಅಪ್ಪ ಮಗಳು ಪರಸ್ಪರ ತಬ್ಬಿಕೊಂಡು ಸಂಭ್ರವಿಸಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. 

ಯುವತಿ ತನ್ನ 10 ವರ್ಷಗಳ ಶ್ರಮದ ಪ್ರಯಾಣವನ್ನು ಇದೀಗ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋದಲ್ಲಿ ಯುವತಿ ತನ್ನ ತಂದೆಯನ್ನು ತಬ್ಬಿಕೊಂಡು ತಾನು ಸಿಎ ಪಾಸ್ ಆಗಿರುವ ಸಂಭ್ರಮವನ್ನು ಹಂಚಿಕೊಳ್ಳುತ್ತಿರುವುದನ್ನು ಕಾಣಬಹುದು. 

ಈ ಒಂದು ಖುಷಿಯನ್ನು ಸಂಭ್ರಮಿಸಲು 10 ವರ್ಷಗಳು ಬೇಕಾಯಿತು. ಪ್ರತಿದಿನ, ನನ್ನ ಕಣ್ಣುಗಳಲ್ಲಿ ಕನಸುಗಳೊಂದಿಗೆ, ಇದು ಕೇವಲ ಕನಸೇ ಅಥವಾ ಇದು ಎಂದಾದರೂ ನನಸಾಗಬಹುದೇ ಎಂದು ನಾನು ನನ್ನನ್ನು ಕೇಳಿಕೊಳ್ಳುತ್ತಿದ್ದೆ. ಇಂದು ಅದು ನಿಜವಾಯಿತು. ಹೌದು, ಕನಸುಗಳು ನನಸಾಗಿದೆ” ಎಂದು ಪ್ರಜಾಪತಿ ತನ್ನ ಪೋಸ್ಟ್‌ನಲ್ಲಿ ಹೇಳಿದ್ದು, ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Related Post

Leave a Reply

Your email address will not be published. Required fields are marked *